ತುಮಕೂರು ಲೈವ್

ಪತಿ ಕೊಂದು ತಲೆ ಮರೆಸಿಕೊಂಡಿದ್ದ ಪತ್ನಿ, ಇನ್ನಿಬ್ಬರ ಆರೋಪಿಗಳ ಬಂಧನ

Publicstory. in


ತುರುವೇಕೆರೆ: ಅಕ್ರಮ ಸಂಬಂಧ ಹೊಂದಿರುವುದನ್ನು ಪ್ರಶ್ನಿಸಿದ ಪತಿ ಮಂಜುನಾಥನನ್ನೇ ಪ್ರಿಯಕರನೊಂದಿಗೆ ಕೂಡಿ ಕುತ್ತಿಗೆ ಹಿಸುಕಿ ಕೊಂದು ತಲೆಮರೆಸಿಕೊಂಡಿದ್ದ ಆರೋಪದ‌ ಮೇರೆಗೆ ಪತ್ನಿ ವಿದ್ಯಾ ಸೇರಿದಂತೆ ಇನ್ನುಳಿದ ಇಬ್ಬರು ಆರೋಪಿಗಳನ್ನು ಬಂಧಿಸುವ ಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.ಮೃತನ ಪತ್ನಿ ವಿದ್ಯಾ(23), ಢಣನಾಯಕನಪುರದ ಯೋಗೀಶ(30), ಮಾಯಸಂದ್ರದ ರಾಮದೇವರು ದೇವಸ್ಥಾನದ ಹತ್ತಿರದ ಗಿರೀಶ( 23) ಬಂಧಿತ ಆರೋಪಿಗಳು.ತಾಲ್ಲೂಕಿನ ಮಾಯಸಂದ್ರದ ಮೂಡ್ಲಯ್ಯನವರ ಮಗ ಮಂಜುನಾಥ (30) ಅನುಮಾನಾಸ್ಪದವಾಗ ನ.12 ರಂದು ಸಾವನ್ನಪ್ಪಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿ.ಪಿ.ಐ ನವೀನ್, ಮತ್ತು ಪಿಎಸ್ಐ ಪ್ರೀತಂ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು.ಮೃತ ಮಂಜುನಾಥನ ಹೆಂಡತಿ ವಿದ್ಯಾ ಮತ್ತೊಬ್ಬ ಆರೋಪಿ ಯೋಗೀಶ ಎಂಬುವವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಈ ವಿಚಾರವು ಮಂಜುನಾಥನಿಗೆ ಗೊತ್ತಾಗಿ ತನ್ನ ಹೆಂಡತಿ ವಿದ್ಯಾಳಿಗೆ ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿ ವಿದ್ಯಾ ಮತ್ತು ಯೋಗೀಶನ ಮತ್ತೊಬ್ಬ ಆರೋಪಿ ಗಿರೀಶ್ ನ ಸಹಾಯದೊಂದಿಗೆ ಮೃತ ಮಂಜುನಾಥನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಆರೋಪಿಗಳ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಶ್ರಮಿಸಿದ ಸಿಬ್ಬಂದಿಗಳಾದ ಕೇಶವಮೂರ್ತಿ, ಸುಪ್ರಿತ್, ಸುಪ್ರಿಯಾ, ಮುತ್ತಣ್ಣ ಕುಮಾರ್, ಸೋಮಶೇಖರ್ ಅವರನ್ನು ಅಭಿನಂದಿಸಲಾಗಿದೆ.

Comment here