Uncategorized

ಪೌರಕಾರ್ಮಿಕರ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡ ಶಶಿಧರ್

Public story


ತಿಪಟೂರು : ತಾಲ್ಲೂಕಿನ ಬಡವರು, ನೊಂದವರೊಂದಿಗೆ ಸದಾಕಾಲ ನಿಲ್ಲುವ ಮೂಲಕ ಹೆಸರಾಗಿರುವ ಕಾಂಗ್ರೆಸ್ ಮುಖಂಡರಾದ ಜನಸ್ಪಂದನ ಟ್ರಸ್ಟ್ ಅಧ್ಯಕ್ಷರಾದ ಸಿ.ಬಿ.ಶಶಿಧರ್ ಅವರು ಸೋಮವಾರ ಪೌರಕಾರ್ಮಿಕರ ಜತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ತಾಲ್ಲೂಕಿನ ಜನರ ಮೆಚ್ಚುಗೆಗೆ ಪಾತ್ರರಾದರು.

ರವರು ತಮ್ಮ ಹುಟ್ಟು ಹಬ್ಬವನ್ನು ಬೆಳಗಿನ ಜಾವ 6;00 ಗಂಟೆಗೆ ಪೌರಕಾರ್ಮಿಕರೊಂದಿಗೆ ಅಚರಿಸಿಕೊಂಡರು.

ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಳೆ ಚಳಿ ಗಾಳಿ ಎನ್ನದೆ ಕೆಲಸ ಮಾಡುವ ಪೌರಕಾರ್ಮಿಕರು ನಿಜವಾದ ಜನಸೇವಕರು‌ ನಿಮ್ಮ ಸೇವೆ ಶ್ಲಾಘನೀಯ , ಕೊರೋನಾ ದಂತ ಮಾಹಾಮಾರಿಯ ಅಟ್ಟಹಾಸದಲ್ಲಿ ಕೂಡ ನೀವು ಶ್ರಮ ವಹಿಸಿ ಸ್ವಚ್ಚತೆ ಕಾಪಾಡಿದ್ದು ಅದರ ಅಪಾಯ ತಗ್ಗಲು ಕಾರಣವಾಯಿತು ಹುಟ್ಟು ಹಬ್ಬವನ್ನು ನಿಮ್ಮೊಂದಿಗೆ ಅಚರಿಸುತ್ತಿರುವುದು ನನಗೆ ಸಂತೋಷವಾಗಿದೆ ಎಂದರು.

ನಾನು ಈ ದಿನವನ್ನು ಸದಾ ನೆನಪಿನಲ್ಲಿ ಇಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಹುಟ್ಟು ಹಬ್ಬದ ನೆನಪಿಗಾಗಿ 120 ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಸ್ವೆಟರ್ ಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂತೋಷ್ ಮತಿಘಟ್ಟ, ಕಿರಣ್, ಕೆ ಇ ಬಿ ಪುರುಶೋತ್ತಮ, ಗೌತಮ್ ಪೌರಕಾರ್ಮಿಕರ ಸಂಘದ ಕಾಂತರಾಜು, ಅರೋಗ್ಯ ನಿರೀಕ್ಷಕ ಶ್ರೀನಿವಾಸ್ ಸೇರಿದಂತೆ ನೂರಾರು ಪೌರಕಾರ್ಮಿಕರು ಉಪಸ್ಥಿತರಿದ್ದರು.

ನಂತರ ಅಭಿಮಾನಿಗಳ ಜೊತೆ ಹತ್ಯಾಳು ನರಸಿಂಹಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ ತಾಲ್ಲೂಕಿನ ಕಿಬ್ಬನಹಳ್ಳಿ, ಹೊನ್ನವಳ್ಳಿ, ನೊಣವಿನಕೆರೆ ಹಾಗು ಕಸಬಾ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಪೂಜೆ ಹಾಗು ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Comment here