ತುಮಕೂರು ಲೈವ್

ಬಂದದಾರಿಗೆ ಸುಂಕವಿಲ್ಲದೆ ಹೋದ ನೆಂಟರು…

Publicstory.in


ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗಾ ಹೋಬಳಿಯ ಚನ್ನರಾಯನದುರ್ಗ ಗ್ರಾಮದ ಬಾಬು ಸಾಬ್ ಮನೆಗೆ ಬಂದಿದ್ದ ನೆಂಟರನ್ನು ಪೊಲೀಸರು ವಾಪಸ್ ಕಳಿಸಿದ್ದಾರೆ.

ಕೊರೊನಾ ವೈರಸ್ ಹರಡುವ ಹಿನ್ನೆಯಲ್ಲಿ ಕಳೆದ 15 ದಿನಗಳಿಂದ ರಾಜ್ಯ ವ್ಯಾಪ್ತಿ ಲಾಕ್ ಡೌನ್ ಹೇರಲಾಗಿದೆ. ಈ ಹಿನ್ನೆಯಲ್ಲಿ‌ ಜನ ಯಾರೂ ಹೊರಗೆ ಅನಗತ್ಯವಾಗಿ ಓಡಾಡದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.


ನಿಮ್ಮೂರಿನ ಸುದ್ದಿ, ಲೇಖನ, ಸಮಸ್ಯೆಗಳನ್ನು ಇಲ್ಲಿಗೆ  ವಾಟ್ಸಾಪ್ ಮಾಡಬಹುದು: 9844817737


ಆದರೂ ಇದನ್ನು ಲೆಕ್ಕಿಸದೇ ದೊಡ್ಡಬಳ್ಳಾಪುರ ಮೂಲದ ಸುಮಾರು 15 ಜನರು ಚನ್ನರಾಯನದುರ್ಗ ಗ್ರಾಮದ ನೆಂಟರ ಮನೆಗೆ ಬಂದಿದ್ದರು.

ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ ಹಿನ್ನೆಯಲ್ಲಿ ಪಿಎಸ್ಐ ಎಚ್. ಮುತ್ತರಾಜು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. 15 ಜನ ಬಂದಿರುವುದು ಖಚಿತವಾದ ಹಿನ್ನೆಯಲ್ಲಿ ಬಂದ ಅಷ್ಟೂ ಜನರನ್ನು ವೈದ್ಯಕೀಯ ತಪಾಸಣೆ ನಡೆಸಿ ಕೂಡಲೇ ಅವರ ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದಾರೆ.

Comment here