Friday, March 29, 2024
Google search engine
Homeತುಮಕೂರು ಲೈವ್ಬಡವರ ಭವಿಷ್ಯದ ಜತೆ ಚೆಲ್ಲಾಟ ಆಡದಿರಲಿ ಸರ್ಕಾರ

ಬಡವರ ಭವಿಷ್ಯದ ಜತೆ ಚೆಲ್ಲಾಟ ಆಡದಿರಲಿ ಸರ್ಕಾರ

ಚಂದ್ರು ಸಿ.ಜೆ, ಗೌಡನಕುಂಟೆ


ಇತ್ತೀಚಿಗೆ ನಡೆದ ಹಲವು ಪರೀಕ್ಷಾ ಹಗರಣಗಳು ಸ್ಪರ್ಧಾರ್ಥಿಗಳ ಆತ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತೆ ಮಾಡಿದೆ.

ಲಕ್ಷಾಂತರ ಸ್ಪರ್ಧಾರ್ಥಿಗಳು ಕಷ್ಟಪಟ್ಟು ಹಗಲು ರಾತ್ರಿ ಎನ್ನದೆ ಊಟ, ನೀರು, ನಿದ್ದೆಯನ್ನೂ ತ್ಯಜಿಸಿ ಸಿದ್ಧತೆ ನಡೆಸಿಕೊಂಡು ಪರಿಕ್ಷೆಗಳನ್ನು ಬರೆದಿದ್ದರು.

ನಾಲ್ಕಾರು ವರ್ಷಗಳು ಶ್ರಮವಹಿಸಿ ಪಿಎಸ್ಐ ಹಾಗೂ ಉಪನ್ಯಾಸಕರ ಹುದ್ದೆಗೆ ಪರೀಕ್ಷೆ ಎದುರಿಸಿದ್ದರು. ಹಗರಣಗಳು ಬೆಳಕಿಗೆ ಬಂದಿದ್ದರಿಂದ ಪ್ರಾಮಾಣಿಕವಾಗಿ ಪಾಸಾದವರಿಗೆ ಅನ್ಯಾಯವಾಗಿದೆ.

ಬಡ ಕುಟುಂಬಗಳಿಂದ ಬಂದವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದವರಿಗೆ ಯಾವುದೇ ಫಲ ಸಿಗದಂತಾಗಿದೆ.

ತಂದೆ ತಾಯಿಗಳ ಕಷ್ಟಗಳನ್ನು ನೆನೆದು ಅಭ್ಯರ್ಥಿಗಳು ಈಗ ಕಣ್ಣೀರು ಸುರಿಸುತ್ತಿದ್ದಾರೆ. ಈ ಸರ್ಕಾರದ ಆಡಳಿತ ವೈಫಲ್ಯದಿಂದ ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡಲು ವಿದ್ಯಾರ್ಥಿಗಳು ಸ್ಥೈರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ದೂರದ ಊರುಗಳಿಂದ ಬೆಂಗಳೂರಿಗೆ ಬಂದು ತಮ್ಮ ಸಂಕಷ್ಟದ ಜೀವನದಲ್ಲಿಯೂ ಗ್ರಂಥಾಲಯಕ್ಕೆ ಹಣ ಕಟ್ಟಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದವರು ಎಷ್ಟೋ ಜನರಿದ್ದಾರೆ.

ತಯಾರಿಗೆ ಯಾವುದೇ ಕೊರತೆ ಆಗದಂತೆ ತಂದೆ-ತಾಯಿಗಳು ಕೂಲಿನಾಲಿ, ಸಾಲ ಮಾಡಿ ಬೇಕಷ್ಟು ಹಣವನ್ನು ಮಕ್ಕಳಿಗೆ ಕಳಿಸುತ್ತಿರುವ ಉದಾಹರಣೆಗಳು ಒಂದೆರಡಲ್ಲ.

ನನ್ನ ಮಗ ಸರ್ಕಾರಿ ಅಧಿಕಾರಿ ಆಗುತ್ತಾನೆ ಎಂಬ ಭರವಸೆಯಲ್ಲಿದ್ದಾಗ ಈ ರೀತಿ ಹಗರಣಗಳಿಂದ ಮಕ್ಕಳ ಭವಿಷ್ಯ ಮುಗ್ಗಾಗಿರುವ ವಿಚಾರ ಹೆತ್ತವರಿಗೆ ತಿಳಿದಾಗ ಸಂಕಟವನ್ನು ತರದೆ ಇರಲಾರದು.

ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಮನೆಯ ಸಂಸಾರವನ್ನೂ ತೂಗಿಸಿಕೊಂಡು ಕೆಲಸಕ್ಕೂ ಹೋಗಿ, ಉಳಿಕೆ ಅವಧಿಯಲ್ಲಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿಕೊಂಡು ಪರೀಕ್ಷೆ ಬರೆದಿದ್ದರು. ಈಗ ಮತ್ತೊಮ್ಮೆ ಗ್ರಂಥಾಲಯಗಳಿಗೆ ಹಾಗೂ ಅಧ್ಯಯನ ಸಾಮಾಗ್ರಿಗಳಿಗೆ ಹಣ ವ್ಯಯಿಸುವ ಚಿಂತೆ ಕಾಡುತ್ತಿದೆ.

ಇತ್ತೀಚಿಗೆ ಬರೆದಿದ್ದ ಪರೀಕ್ಷಾರ್ಥಿಗಳು ಇದ್ದ ಕೊನೆಯ ಅವಕಾಶದಲ್ಲಿ ಉತ್ತೀರ್ಣರಾಗಿ ಉದ್ಯೋಗ ಖಾತರಿ ಪಡಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಪರೀಕ್ಷೆಗಳನ್ನು ಬರೆಯಬೇಕು.

ಅಲ್ಲದೆ, ಮುಂದೆ ಬರುವಂತಹ ಪರೀಕ್ಷೆಗಳನ್ನು ಬರೆಯಲು ತಮಗೆ ವಯಸ್ಸಿನ ಮಿತಿ ಮೀರುತ್ತಿದೆ ಎಂಬ ಆತಂಕವೂ ಅವರನ್ನು ಕಾಡುತ್ತಿದೆ.

ಸರ್ಕಾರವೇನೋ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಸ್ಪರ್ಧಾರ್ಥಿಗಳು ಪಾಡನ್ನುಯಾರು ಕೇಳುತ್ತಾರೆ? ತಮಗೆ ಒಂದು ದಿನ ಊಟವಿಲ್ಲದಿದ್ದರೂ ಪರೀಕ್ಷಾ ಸಿದ್ಧತೆಗೆ ಬೇಕಾದಂತಹ ಉಪಕರಣಗಳನ್ನು ಖರೀದಿಸುತ್ತಿದ್ದರು.

ನಾಲ್ಕೈದು ವರ್ಷಗಳಿಂದ ಮನೆ, ದುಡಿಮೆ ಎಲ್ಲವನ್ನೂ ಬಿಟ್ಟು, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ವ್ಯಯಿಸಿದ ಸಮಯ ಮತ್ತು ಖರ್ಚು ವೆಚ್ಚದ ವಿಷಯ ಸರ್ಕಾರಕ್ಕೆ ತಿಳಿದಿದೆಯೇ? ಇವನ್ನೆಲ್ಲವನ್ನೂ ಯೋಚಿಸಿ ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳಬೇಕು. ಏಕೆಂದರೆ ಇದು ಯುವಜನರ ಭವಿಷ್ಯದ ಪ್ರಶ್ನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?