ತುಮಕೂರು ಲೈವ್

ಬಾಗಿಲು ಲಾಕ್ ಮಾಡಿ 22 ಮೇಕೆ ಕದ್ದೊಯ್ದ ಖದೀಮರು

Publicstory


ಕೊರಟಗೆರೆ :- ತಾಲ್ಲೂಕಿನ ಬೋಡಬಂಡೇನಹಳ್ಳಿ ಗ್ರಾಮದ ರಮೇಶ್ ನಾಗರತ್ನಮ್ಮ ಎಂಬ ದಂಪತಿಗೆ ಸೇರಿದ 22 ಮೇಕೆಗಳನ್ನು ತಡರಾತ್ರಿ ಕಳ್ಳತನ ಮಾಡಲಾಗಿದೆ.

ಅಕ್ಕಪಕ್ಕದ ಮನೆಗಳ ಬಾಗಿಲುಗಳಿಗೆ ಬೀಗ ಹಾಕಿದ ಖದೀಮರು ಸುಮಾರು 3 ಲಕ್ಷ ಬೆಲೆಯ ಮೇಕೆಗಳನ್ನು ಕದ್ದು ಹೋಗಿದ್ದಾರೆ.

ಮೇಕೆಗಳ ಒಡತಿ ನಾಗರತ್ನಮ್ಮ ಮಾತನಾಡಿ :-

ಸಾಲವನ್ನು ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ನಮ್ಮ ಮುಂದಿನ ಭವಿಷ್ಯಕ್ಕೆ ಎಂದು 22ಮೇಕೆಗಳನ್ನು ಸಾಕಿದ್ದೆವು. ಆದರೆ ತಡರಾತ್ರಿ ಎಲ್ಲರೂ ಮಲಗಿದ ಸಮಯವನ್ನು ನೋಡಿದ ಕಳ್ಳರು 1ಮೇಕೆಯನ್ನು ಬಿಡದಂತೆ ಕದ್ದುಕೊಂಡು ಹೋಗಿದ್ದಾರೆ. ನಮ್ಮ ಜೀವನಕ್ಕೆ ಆಧಾರವಾಗಿದ್ದ ಮೇಕೆಗಳನ್ನು ನಮಗೆ ಹುಡುಕಿಸಿ ಕೊಡಿ ಎಂದು ಅಂಗಲಾಚಿದರು.

ಪಕ್ಕದ ಮನೆಯ ಯುವತಿ ಸಿಂಧು ಮಾತನಾಡಿ :- ರಾತ್ರಿ 11 ಗಂಟೆವರೆಗೂ ಎಲ್ಲರೂ ಮಾತನಾಡಿಕೊಂಡು ಹೊರಗಡೆಯೇ ಇದ್ದೆವು ತದನಂತರ ಮಲಗಲು ಒಳಹೋದಾಗ 1ಗಂಟೆ ಸುಮಾರಿಗೆ ಹೊರಗಿನಿಂದ ನಮ್ಮ ಮನೆಗಳ ಲಾಕ್ ಮಾಡಿದ್ದಾರೆ. ಹೊರಗಡೆ ಬರಬೇಕಾದರೆ ಬಾಗಿಲು ಓಪನ್ ಆಗಲಿಲ್ಲ. ಅಕ್ಕಪಕ್ಕದ ಮನೆಯವರಿಗೆ ಫೋನ್ ಮೂಲಕ ಮಾತನಾಡಿ ಡೋರ್ ಓಪನ್ ಮಾಡಿಸಿಕೊಂಡು ಹೊರಬಂದು ಏನಾಗಿದೆ ಎಂದು ನೋಡಿದಾಗ ಮೇಕೆಗಳನ್ನು ಕದ್ದುಕೊಂಡು ಹೋಗಿರುವುದು ನಮಗೆ ತಿಳಿಯಿತು ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Comment here