ತುಮಕೂರು ಲೈವ್

ಮದುವೆ ಸಂಭ್ರಮದಲ್ಲಿದ್ದವರು‌ ಮಸಣಕ್ಕೆ….

Publicstory. in


ತುಮಕೂರು: ನಾದಿನಿಯ ಮದುವೆಯ ಸಂಭ್ರದಲ್ಲಿದ್ದ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದು, ಈಗ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೋಡಬಂಡೇನಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಗ್ರಾಮದ ರವಿಕುಮಾರ್(24) ಮೃತ ದುರ್ಧೈವಿ.

ತನ್ನ ಹೆಂಡತಿಯ ತಂಗಿಯ ಮದುವೆಗೆ ಮನೆಯ ಸ್ವಚ್ಚತೆ ಮಾಡುವ ವೇಳೆ ವಿದ್ಯುತ್ ಸ್ಪರ್ಷವಾಗಿ ಅನಾಹುತ ಸಂಭವಿಸಿದೆ.

ಬೋಡಬಂಡೇನಹಳ್ಳಿ ಗ್ರಾಮದ ತನ್ನ ಮಾವ ಕಾಂತರಾಜು ಎಂಬುವರ ಮನೆಯ ಮೋಟರ್‌ನಿಂದ ಮನೆಯ ಹೆಂಚಿನ ಧೂಳು ತೊಳೆಯುವ ವೇಳೆ ರವಿಕುಮಾರ್ ಗೆ ವಿದ್ಯುತ್ ಸ್ಪರ್ಶವಾಗಿದೆ.

ವಿದ್ಯುತ್ ಸ್ಪರ್ಶದಿಂದ ನರಳುತ್ತಿದ್ದ ರವಿಕುಮಾರ್‌ ಅವರನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿ‌ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣಾ ಪಿಎಸ್‌ಐ ಎಚ್.ಮುತ್ತುರಾಜು ಭೇಟಿ ನೀಡಿದ್ದರು.‌ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comment here