ತುಮಕೂರು ಲೈವ್

ಮೀನಿಗಾಗಿ ಮುಗಿಬಿದ್ದರು, ಕರೊನಾ ಮರೆತರು…

https://youtu.be/rfvrYE8fOic

https://youtu.be/rfvrYE8fOic

ತುಮಕೂರು ಜಿಲ್ಲೆ: ತುರುವೇಕೆರೆ ತಾಲ್ಲೂಕು, ಮಾಯಸಂದ್ರ ಗ್ರಾಮದಲ್ಲಿ ಲಾಕ್ ಡೌನ್ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.

ಮಾಯಸಂದ್ರ ಗ್ರಾಮದ ಕೆರೆಯಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದರೂ ಯಾರೂ ಸಹ ತಡೆ ಹಾಕಲಿಲ್ಲ.

ಸಾರ್ವಜನಿಕರು ಮೀನಿಗಾಗಿ ಕಿತ್ತಾಟ ನಡೆಸಿದರು.‌ ಜಾತ್ರೆಯಂತೆ ಜನ ಸೇರಿದ್ದರು. ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೆ, ಗುಂಪುಗುಂಪಾಗಿ ಕೆರೆಯಲ್ಲಿ ಮೀನು ಖರೀದಿಸಿದರು.

ಗ್ರಾಮದಲ್ಲಿ ತಾಲೂಕು ಆಡಳಿತ‌ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಬೆಳಿಗ್ಗೆಯಿಂದಲೇ ಶುರುವಾಗಿರುವ ಮೀನಿನ ವ್ಯಾಪಾರ ನಡೆಯುತ್ತಿದೆ. ಮೀನು ಕೊಳ್ಳಲು ಸಾರ್ವಜನಿಕರು ಮುಗಿಬಿದ್ದು ತೆಗೆದುಕೊಂಡರು.

ಜನರಲ್ಲಿ ಕೋರನಾ ಮಹಾಮಾರಿ ಬಗ್ಗೆ ಮಾಯಸಂದ್ರ ಗ್ರಾಮದ ಜನತೆಯಲ್ಲಿ ಯಾರೂ ಅರಿವು ಮೂಡಿಸಿಲ್ಲವೇ ಎಂಬ ಅನುಮಾನ ಮೂಡುತ್ತಿದೆ.

Comment here