ತುಮಕೂರ್ ಲೈವ್

ಮುನಿಯೂರು: ಪವರ್ ಸ್ಟಾರ್ ಪುನೀತ್ ಗೆ ಶ್ರದ್ಧಾಂಜಲಿ

Public story.in


ತುರುವೇಕೆರೆ: ತಾಲ್ಲೂಕಿನ ಕಸಬಾದ ಮುನಿಯೂರು ಗ್ರಾಮಸ್ಥರು ಹಾಗೂ ಗ್ರಾಮದ ಯುವಕರ ಸಂಘದ ವತಿಯಿಂದ ರಂಗನಾಥ ಸ್ವಾಮಿ ಆವರಣದಲ್ಲಿ ಚಿತ್ರ ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ಅವರ ಶ್ರದ್ದಾಂಜಲಿ ಕಾರ್ಯಕ್ರಮ ಜರುಗಿತು.

ಉದ್ಯಮಿ ಎಂ.ಡಿ.ಮೂರ್ತಿ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ರಾಜ್ ಕುಟುಂಬದ ಕೊಡುಗೆ ಅಪಾರವಾದುದು. ರಾಜ್ ಕುಮಾರ್ ಅವರ ಅಗಲಿಕೆಯನ್ನು ಮುನ್ನವೇ ಅವರ ಪುತ್ರ ಪುನೀತ್ರಾಜ್ಕುಮಾರ್ ಅವರ ಅಕಾಲಿಕ ಮರಣ ಇಡೀ ಕನ್ನಡ ನಾಡನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಇಡೀ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಪುನೀತ್ ನಾಡಿನೆಲ್ಲರ ಮನೆಮಾತಾಗಿದ್ದರು ಎಂದರು.
ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ನಂ.ರಾಜು ಮುನಿಯೂರು ಮಾತನಾಡಿ, ಪುನೀತ್ ರಾಜ್ ಕುಮಾರ್ ಕೇವಲ ನಟನೇ ಮಾತ್ರವಲ್ಲದೇ ಅತ್ಯುತ್ತಮ ಸಮಾಜ ಸೇವೆಯಲ್ಲಿ ಎಲೆ ಮರೆ ಕಾಯಿಯೋಪಾದಿಯಲ್ಲಿ ತೊಡಗಿಸಿಕೊಂಡಿದ್ದ ಅವರ ಸೇವೆ ಅನನ್ಯವಾದುದು ಎಂದರು.
ಈ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ವೆಂಕಟೇಶ್, ಎಂ.ಜಿ.ಕೀರ್ತಿ, ಗ್ರಾ.ಪಂ.ಸದಸ್ಯರಾದ ಮೋಹನ್ ಕುಮಾರ್, ಶಂಕರ್, ಮೂರ್ತಿ, ಗ್ರಾಮದ ಮುಖಂಡರಾದ ಮಂಜುನಾಥ್, ಗಂಗಣ್ಣ, ಗೋವಿಂದಪ್ಪ, ಕೃಷ್ಣಪ್ಪ ಸೇರಿದಂತೆ ಅನೇಕರು ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ನುಡಿನಮನ ಸಲ್ಲಿದರು. ಇದೇ ವೇಳೆ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ಸಹ ಏರ್ಪಡಿಸಲಾಗಿತ್ತು.

Comment here