ತುಮಕೂರ್ ಲೈವ್

ಯಡಿಯೂರಪ್ಪ ಕುರುಬರ ಕ್ಷಮೆ ಯಾಚಿಸಿದ್ದು ಏಕೆ?

ಕುರುಬ ಸ್ವಾಮೀಜಿಯ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮುದಾಯದ ಕ್ಷಮೆ ಯಾಚಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಮುಖ್ಯಮಂತ್ರಿಗಳು ಚಿಕ್ಕನಾಯಕನಹಳ್ಳಿ ಹುಳಿಯಾರಿನಲ್ಲಿ ಹೊಸದುರ್ಗ ರಸ್ತೆಯಲ್ಲಿರುವ ವೃತ್ತ ಕನಕ ವೃತ್ತವೆಂದು ನಾಮಕರ ಮಾಡಲು ಎದ್ದಿರುವ ಗೊಂದಲ ಅನವಶ್ಯಕವಾಗಿದೆ. ವೃತ್ತಕ್ಕೆ ಕನಕರ ಹೆಸರಡಿಲು ಯಾರ ಅಭ್ಯಂತರವೂ ಇಲ್ಲ. ವಿರೋಧವೂ ಇಲ್ಲ. ಜೆ.ಸಿ. ಮಾಧುಸ್ವಾಮಿ ಕೂಡ ವಿರೋಧ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ನಾನು ಈಶ್ವರಾನಂದಪುರ ಸ್ವಾಮಿಗಳಿಗೆ ಕರೆ ಮಾಡಿ ಮಾತನಾಡಿದ್ದೇನೆ. ಸ್ವಾಮಿಗಳು ಕೂಡ ಮಾಧುಸ್ವಾಮಿ ಅವರು ಏಕವಚನದಲ್ಲಿ ಸಂಬೋಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕುರುಬ ಸಮುದಾಯ ಚುನಾವಣೆ ಮುಗಿಯುವವರೆಗೂ ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕಾಗಿನೆಲೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದ್ದೇನೆ. ಇದನ್ನು ಕುರುಬ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಮತ್ತು ಕನಕ ವೃತ್ತದ ಕುರಿತು ಎದ್ದಿರುವ ವಿವಾದಕ್ಕೆ ತೆರೆ ಎಳೆದು ಶಾಂತಿ ಕಾಪಾಡಬೇಕು ಯಾವುದೇ ಬಂದ್ ಆಚರಿಸಕೂಡದು ಎಂದು ಮನವಿ ಮಾಡಿದ್ದಾರೆ.

Comment here