ತುಮಕೂರು ಲೈವ್

ರಾಜೀನಾಮೆಗೆ ಸಿದ್ಧ: ಸಚಿವ ಮಾಧುಸ್ವಾಮಿ

Tumkuru: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಿನಾಮೆ ಕೇಳಿದರೆ ಬಿಡಲು ಸಿದ್ದ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಕೋಲಾರದಲ್ಲಿ ರೈತ ಮಹಿಳೆಯೊಬ್ಬರು ನನಗೆ ಡೈರೆಕ್ಟ್ ಮಾಡಲು ಬಂದರು. ಮಾತು ಅತಿಯಾದಾಗ ಆ ಮಹಿಳೆಗೆ ಬಾಯಿಮುಚ್ಚು, ರ್ಯಾಸ್ಕಲ್ ಎಂದು ಹೇಳಿದೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದರು.

ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಜುಗರವಾಗುವಂತೆ ನಡೆದುಕೊಳ್ಳಲು ಸಿದ್ದನಿಲ್ಲ. ಹಾಗಾಗಿ ಮುಖ್ಯಮಂತ್ರಿ ರಾಜಿನಾಮೆ ಕೇಳಿದರೆ ಕೊಡಲು ಸಿದ್ದ ಎಂದು ಸ್ಪಷ್ಟೀಕರಣ ನೀಡಿದರು.

ಮಹಿಳೆ ನಡೆದುಕೊಂಡ ರೀತಿ ಸರಿಯಾಗಿರಲಿಲ್ಲ. ನನಗೆ ನಿರ್ದೇಶನ ನೀಡಲು ಬರಬೇಡ. ರಿಕ್ವೆಸ್ಟ್ ಮಾಡಿ ಅಂತ ಮಹಿಳೆಗೆ ಹೇಳಿದೆ. ಆದರೂ ಕೇಳಲಿಲ್ಲ. ಆಕೆ ರೈತ ಮಹಿಳೆ ಎಂದು ತಿಳಿದಿರಲಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಎಲ್ಲೂ ಇರುವುದಿಲ್ಲ ಎಂದು ಹೇಳಿದರು.

ತುಮಕೂರು ಮತ್ತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಜೆ.ಸಿ.ಮಾಧುಸ್ವಾಮಿ ರೈತ ಮಹಿಳೆಯ ಕ್ಷಮೆ ಕೋರುತ್ತಲೇ ಆಕೆಯ ವಿರುದ್ದ ವಾಗ್ದಾಳಿ ನಡೆಸಿದರು.

Comment here