ತುಮಕೂರು ಲೈವ್

ರಾತ್ರಿ ಮಲಗಿದ್ದಲ್ಲೆ ಮಗು ಹೊತೂಯ್ದ ಚಿರತೆ

Ramanagraa: ಜಿಲ್ಲೆಯ ಕದರಯ್ಯನ ಪಾಳ್ಯದಲ್ಲಿ ಶುಕ್ರವಾರ ಮಧ್ಯರಾತ್ರಿ ಮನೆಗೆ ನುಗ್ಗಿದ ಚಿರತೆಯೊಂದು ಮಲಗಿದ್ದ ಮಗುವನ್ನು ಹೊತ್ತೊಯ್ದು ಕೊಂದು ಹಾಕಿದೆ.

ಮೂರೂವರೆ ವರ್ಷದ ಹೇಮಂತ್ ಬಲಿಯಾದವ.

ಶುಕ್ರವಾರ ರಾತ್ರಿ ಜೋರು ಮಳೆಗೆ ಕರೆಂಟ್ ಹೋದ ಕಾರಣ ಸೆಕೆ ಆಗುತ್ತಿದೆ ಎಂದು ಮನೆಯವರು ಬಾಗಿಲು ತೆಗೆದು ಮಲಗಿದ್ದರು. ಹೀಗಾಗಿ ಮನೆಯೊಳಗೆ ಬಂದಿರುವ ಚಿರತೆ ಮಗುವನ್ನು ಹೊತ್ತೊಯ್ದಿದೆ.

ಕತ್ತಲೆಯಲ್ಲಿ ಮಗುವನ್ನು ಹುಡುಕಾಡಿದಾಗ ಕಂಡಿಲ್ಲ. ಕೂಡಲೇ ಎದ್ದು ಹುಡುಕಿದಾಗ ಮನೆಯಿಂದ ಸುಮಾರು ದೂರದಲ್ಲಿ ಪೊದೆಯಲ್ಲಿ ಮಗುವಿನ ಶವ ಪತ್ತೆಯಾಯಿತು. ಮಗುವಿನ ತಂದೆ-ತಾಯಿ ಬಿಡದಿಯರಾಗಿದ್ದು, ರಜೆ ಇದ್ದ ಕಾರಣ ತಾಯಿ ಮನೆಗೆ ಬಂದಿದ್ದರು.

Comment here