ಮಂಜುನಾಥ್
ಕರೋನ ವೈರಸ್ ನಿಂದ ರೈತ ಬಾಂದವರಿಗೆ ನಷ್ಟ ವಾಗಬಾರದೆಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ಬುಧವಾರ ಬಾಳೆ ಬೆಳೆದು ನಷ್ಟದಲ್ಲಿದ್ದ ರೈತರ ತೋಟಕ್ಕೆ ಭೇಟಿ ನೀಡಿ ಬಾಳೆಗೊನೆಗಳನ್ನು ಖರೀದಿ ಮಾಡಿ ಗ್ರಾಮಾಂತರ ಕ್ಷೇತ್ರದ ಬಡಜನರಿಗೆ ವಿತರಣೆ ಮಾಡಿದರು.
ಲಾಕ್ ಡೌನ್ ಪ್ರಾರಂಭವಾದ ದಿನದಿಂದಲೇ, ಖುದ್ದು ತಾವೇ ನಿಂತು ದಿನನಿತ್ಯ ಕೂಲಿ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ, ರೈತರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇದಲ್ಲದೇ ಮನೆಮನೆಗೂ ತರಕಾರಿ ಪಡಿತರ ತಲುಪಿಸುವಲ್ಲಿ ಅವಿರತ ಶ್ರಮಿಸುತ್ತಿದ್ದಾರೆ. ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿ ಶಾಮಕ ಇಲಾಖೆ ಸೇರಿದಂತೆ ಸೇವೆ ನೀಡುತ್ತಿರುವ ಇಲಾಖೆಗಳಿಗೆ ದಿನ ನಿತ್ಯ ಊಟ, ಮೆಡಿಕಲ್ ಕಿಟ್ ನೀಡುತ್ತಿದ್ದಾರೆ.
Comment here