ತುಮಕೂರು ಲೈವ್

ವಕೀಲರಿಗೆ ನೆರವಾದ ಶಾಸಕ: ವಿಶೇಷ ಪ್ಯಾಕೆಜ್ ಗೆ ಒತ್ತಾಯ

Publicstory.in


Tumkuru: ಕೋವಿಡ್-19 ಲಾಕ್ ಡೌನ್‍ ನಿಂದ ಸಂಕಷ್ಟದಲ್ಲಿರುವ ವಕೀಲರಿಗೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಆಹಾರದ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾರ್ಮಿಕರಿಗೆ ಶ್ರಮಿಕರಿಗೆ ಸಹಾಯಹಸ್ತ ಚಾಚಿದಂತೆ ರಾಜ್ಯದ ಎಲ್ಲ ವಕೀಲರಿಗೆ ಸಹ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸುತ್ತೇನೆ ಎಂದರು.

ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ. ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇನೆ, ಕಿರಿಯ ವಕೀಲರಿಗೆ ನಾನು ಆರ್ಥಿಕವಾಗಿಯೂ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನಿಲ್ ಮಾತನಾಡಿ ಇದುವರೆಗೂ ಯಾರೂ ಸಹ ಆರ್ಥಿಕವಾಗಿ ಹಿಂದುಳಿದ ವಕೀಲರ ಕಷ್ಟಕ್ಕೆ ಧಾವಿಸಿರಲಿಲ್ಲ ಗೌರಿಶಂಕರ್ ಸಂಘಕ್ಕೆ ಆಗಮಿಸಿ ಆರ್ಥಿಕವಾಗಿ ಹಿಂದುಳಿದ ವಕೀಲರಿಗೆ ದಿನಸಿ ಕಿಟ್ ಗಳನ್ನು ನೀಡಿರುವುದು ನಮಗೆ ಸಂತೋಷವಾಗಿದೆ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್,ದೇವರಾಜು,ಖಜಾಂಚಿ ಪಾತಣ್ಣ,ಶೆಟ್ಟಿಹಳ್ಳಿ ರಮೇಶ, ಎನ್.ಆರ್. ಲೋಕೇಶ್, ಹಾಲನೂರುಅನಂತ್, ಹೀರೇಹಳ್ಳಿ ಮಹೇಶ್, ಬಿ.ಜಿ.ಸತೀಶ್, ಕಾಮೇಗೌಡ, ಕೋಳಿಹಳ್ಳಿ ಬಸವರಾಜು, ಬಿ.ಆರ್.ರಾಮಕೃಷ್ಣಯ್ಯ, ಸಿರಾಗೇಟ್‍ಸೋಮಣ್ಣ. ಎಂ.ಸಿ.ಚಂದ್ರಯ್ಯ, ನಾಗೇಶ್, ಬೆಳಗುಂಬ ವೆಂಕಟೇಶ್ ಹಾಜರಿದ್ದರು.

Comment here