ಜನಮನ

ವರಲಕ್ಷ್ಮೀ ಗೆ ಸೂಲಗಿತ್ತಿ ನರಸಮ್ಮ‌ ರಾಷ್ಟ್ರೀಯ ಪ್ರಶಸ್ತಿ ಗರಿ

ಎಸ್. ವರಲಕ್ಷ್ಮೀ

Publicstory. in


ತುಮಕೂರು: ನಾಡಿನ ಹೆಸರಾಂತ ಹೋರಾಟಗಾರ್ತಿ, ದೇಶದ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾದ ಸಿಐಟಿಯು ರಾಜ್ಯ ಘಟಕದ ಮೊದಲ ಮಹಿಳಾ ಅಧ್ಯಕ್ಷೆಯ ಹೆಗ್ಗಳಿಕೆಯ ಎಸ್. ವರಲಕ್ಷ್ಮೀ ಅವರು ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ರಾಷ್ಟ್ರೀಯ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.

ವರಲಕ್ಷ್ಮೀ ಅವರಲ್ಲದೇ ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ, ಬಳ್ಳಾರಿ ವೆಂಕಮ್ಮ, ತತ್ವಪದ ಕಾರದ ಅಕ್ಷತಾ, ಬಣ್ಣದ ಬಾವಿ ಕುಕನೂರು ಆಯ್ಕೆ ಆಗಿದ್ದಾರೆ ಎಂದು ಸೂಲಗಿತ್ತಿ ನರಸಮ್ಮ‌ ಟ್ರಸ್ಟ್ನ ಪಾವಗಡ ಶ್ರೀರಾಮ್ ತಿಳಿಸಿದ್ದಾರೆ.

ಡಿಸೆಂಬರ್‌ 25ರಂದು ಬೆಳಗ್ಗೆ 11-30ಕ್ಕೆ ತುಮಕೂರು ನಗರದ ಗಂಗಸಂದ್ರದಲ್ಲಿ ಡಾ. ಸೂಲಗಿತ್ತಿ ನರಸಮ್ಮ ಶತಮಾನೋತ್ಸವ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವರಲಕ್ಷ್ಮೀ ಅವರು ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರ ಹೋರಾಟದ ಮೂಲಕ ಕಾರ್ಮಿಕ ಸಂಘಟನೆಯಲ್ಲಿ ಮುಂಚೂಣಿಗೆ ಬಂದವರು.

ಗಾರ್ಮೆಂಟ್ಸ್ ನಲ್ಲಿ ಮಹಿಳಾ ನೌಕರರ ಮೇಲೆ ನಡೆಸುತ್ತಿದ್ದ ಕಿರುಕುಳ, ಹಿಂಸೆಯ ವಿರುದ್ಧ ಬಂಡೆದ್ದ ಅವರು ಇಲ್ಲಿಂದಲೇ ತಮ್ಮ ಹೋರಾಟದ ಹಾದಿ ತುಣಿದವರು.

ರಾಜ್ಯದಲ್ಲಿ ಲಕ್ಷಾಂತರ ಕಾರ್ಮಿಕರ ಸದಸ್ಯತ್ವ ಒಳಗೊಂಡ ಸಿಐಟಿಯು ಕಾರ್ಮಿಕ ಸಂಘಟನೆಯ ರಾಜ್ಯ ಅಧ್ಯಕ್ಷೆಯಾಗಿ ಎರಡನೇ ಅವಧಿಗೆ ಕೆಲಸ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಸಿಪಿಎಂ ಪಕ್ಷದಿಂದ ಸ್ಪರ್ಧಿಸಿದ್ದರು.

ಅಭಿನಂದನೆ; ಪ್ರಶಸ್ತಿಗೆ ಪಾತ್ರರಾದ ವರಲಕ್ಷ್ಮೀ ಅವರಿಗೆ ವಕೀಲರಾದ ಸಿ.ಕೆ.ಮಹೇಂದ್ರ ಕೃಷ್ಣಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ.

Comments (1)

  1. Congratulations Mam. Aww

Comment here