ತುಮಕೂರ್ ಲೈವ್

ವಿಜಯ ಕರ್ನಾಟಕದಿಂದ ರೈತರಿಗೆ ಸನ್ಮಾನ; ಯಾರಾಗಬಹುದು ಸೂಪರ್ ಸ್ಟಾರ್ ರೈತ

Publicstory. in


ತುಮಕೂರು: ಕೃಷಿಯಲ್ಲಿ ಮಾದರಿ ಸಾಧಕರನ್ನು ಗುರುತಿಸಿ ಅನ್ನದಾತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಜಯ ಕರ್ನಾಟಕ ಆಯೋಜಿಸಿರುವ ‘ವಿಕ-ಸೂಪರ್ ಸ್ಟಾರ್ ರೈತ 2019’ ಎರಡನೇ ಆವೃತ್ತಿ ಕಾರ್ಯಕ್ರಮವು ಜ.13ರಂದು ತುಮಕೂರಿನಲ್ಲಿ ನಡೆಯಲಿದೆ.

ಬೇರಾವುದೇ ಕನ್ನಡ ಪತ್ರಿಕೆಗಳು ರೈತರನ್ನು ಸನ್ಮಾನಿಸುವ ಕೆಲಸ ಮಾಡದೇ ಇದ್ದಾಗಲೂ ವಿಜಯ ಕರ್ನಾಟಕ ರೈತರನ್ನು ಗುರುತಿಸುವ ಕೆಲಸ ಜನರಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಅಂದು ಬೆಳಗ್ಗೆ 11 ಗಂಟೆಗೆ ತುಮಕೂರು ವಿಶ್ವ ವಿದ್ಯಾನಿಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ 10 ಮಂದಿ ಸಾಧಕ ರೈತರಿಗೆ *ಸೂಪರ್ ಸ್ಟಾರ್ ರೈತ* ಪುರಸ್ಕಾರ ನೀಡಿ ಗೌರವಿಸಲಾಗುವುದು.

ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಶ್ರೀ ಜಪಾನಂದ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಉದ್ಘಾಟಿಸಲಿದ್ದಾರೆ. ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ವಿಶೇಷ ಪುರವಣಿ ಬಿಡುಗಡೆಗೊಳಿಸಲಿದ್ದಾರೆ.

ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ನೂರಾರು ಮಂದಿ ರೈತರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಸಾರ್ವಜನಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕು ಎಂದು ವಿಜಯ ಕರ್ನಾಟಕ ಕೋರಿದೆ.

Comment here