ತುಮಕೂರು ಲೈವ್

ವೈ.ಎಚ್.ಹುಚ್ಚಯ್ಯ ಬಗ್ಗೆ‌ ಮಾಜಿ ಶಾಸಕ ಸುರೇಶಗೌಡರು ಹೇಳಿದ್ದೇನು?

publicstory. in


ತುಮಕೂರು: ಜಿಲ್ಲಾ ಪಂಚಾಯತಿ ಸದಸ್ಯರಾದ ಎಚ್ ಹುಚ್ಚಯ್ಯ ಅವರು ಜಿಲ್ಲೆ ಕಂಡ ಅಪರೂಪದ ರಾಜಕಾರಣಿ ವೈ.ಕೆ. ರಾಮಯ್ಯ ಅವರ ರಾಜಕಾರಣದಲ್ಲಿ ಪಳಗಿ ಬಂದವರು. ಜನರಿಗಾಗಿ ಜೈಲು ಕಂಡವರು ಎಂದು ಮಾಜಿ ಶಾಸಕ ಸುರೇಶಗೌಡ ಹೇಳಿದರು.

ತುಮಕೂರು ತಾಲ್ಲೂಕಿನ ಸೀತಕಲ್ಲು ಗ್ರಾಮದಲ್ಲಿ ಬುಧವಾರ ಬಡವರಿಗೆ ಉಚಿತ ಆಹಾರದ ಕಿಟ್ ಹಂಚುವಿಕೆ ಮತ್ತು ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .

ಹುಚ್ಚಯ್ಯ ಅವರು ಜಿಲ್ಲೆಯ ಪ್ರಮುಖ ದಲಿತ ರಾಜಕಾರಣಿಯಾಗಿದ್ದಾರೆ. ಅವರು ಹೋರಾಟದ ಕಳಕಳಿಯನ್ನು ಎಲ್ಲರೂ ಮೆಚ್ಚಬೇಕು. ಅವರು ಜಿಲ್ಲೆಯ ಜನ ಸಮುದಾಯದ ನಾಯಕ ಎಂದು ಬಣ್ಣಿಸಿದರು.

ಕರೋನಾ ಸಂಕಷ್ಟದಲ್ಲಿ ಬಡವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಎಂದು ಭಾವಿಸಿ ಸಹಾಯಹಸ್ತವನ್ನು ಚಾಚಿದ್ದೇನೆ. ಇದರಿಂದ ಬೆಳೆ ಬೆಳೆದ ರೈತರಿಗೂ ಮತ್ತು ಕಷ್ಟ ಜನರಿಗೆ ಉಪಯೋಗವಾಗುತ್ತಿದೆ ಎಂದು ಹೇಳಿದರು.

ಕ್ಷೇತ್ರದ ಪ್ರತಿ ಜನರಿಗೂ ಉಚಿತವಾಗಿ ಮಾಸ್ಕ್ ಹಂಚಲಾಗುತ್ತದೆ. ಈಗಾಗಲೇ ಬಹುತೇಕ ಗ್ರಾಮಗಳ ಜನರಿಗೆ ಮಾಸ್ಕ್ ಹಂಚಿದ್ದೇನೆ. ಇದರೊಂದಿಗೆ ಬೇಳೆ ಕಾಳು ಎಣ್ಣೆ ಅಡುಗೆ ಸಂಬಂಧಿಸಿದ ಸಾಮಗ್ರಿಗಳನ್ನು ಕೊಡಲಾಗುತ್ತಿದೆ ಎಂದು ಹೇಳಿದರು.

ಸೀತಕಲ್ಲು ಗ್ರಾಮ ಪಂಚಾಯತಿಯ ಪ್ರತಿ ಮನೆ ಮನೆಗಳಿಗೆ ಉಚಿತ ಮಾಸ್ಕ್ ಹಾಗೂ ಅಡುಗೆ ಎಣ್ಣೆ, ಉಪ್ಪು, ಬೇಳೆ, ಸಕ್ಕರೆ, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಆಹಾರ ಪದಾರ್ಥಗಳು ಹೊಂದಿರುವ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷಸ‌ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ, ಲಕ್ಷ್ಮೀಶ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ವೈ, ಹೆಚ್, ಹುಚ್ಚಯ್ಯ, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದೇಗೌಡರು, ತಾ ಪಂ ಅಧ್ಯಕ್ಷರಾದ ಗಂಗಾಂಜಿನಪ್ಪ, ತಾ ಪಂ ಉಪಾಧ್ಯಕ್ಷರಾದ, ಶಾಂತಕುಮಾರ್ ತಾ ಪಂ ಸದಸ್ಯರಾದ ರಾದಮ್ಮ,ತಾ ಪಂ ಸದಸ್ಯರಾದ (ಊರ್ಡಿಗೆರೆ )ರವಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಲಕ್ಷ್ಮೀದೇವಮ್ಮ, ಸದಸ್ಯರಾದ ಉಮಾದೇವಿ, ಮಾರುತಿ, ರಾಜಣ್ಣ,ಮುಖಂಡರಾದ ನಾಗರಾಜರಾವ್, ಸುಧೀರ್, ಮಾಜಿ A P M C ಅಧ್ಯಕ್ಷರಾದ ಓಂ ನಮೋ ನಾರಾಯಣ, ರಂಗನಾಥ್, ಸತೀಶ್, ಪರಮೇಶ್, ಮೂರ್ತಣ್ಣ, ಮಂಜುನಾಥ್, ಕರೆರಂಗಯ್ಯ ಮುಂತಾದವರು ಉಪಸ್ಥಿತರಿದ್ದರು.

Comment here