ಜನಮನ

ವ್ಯಾಕ್ಸಿನ್ ವೈರಲ್ ವಿಡಿಯೋವೆ ಏಕೆ? ಬೇರೆ ಏಕಿಲ್ಲ?

ತುಳಸಿತನಯ


ತುಮಕೂರು: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಫೋಸ್ ಕೊಟ್ಟು ವೈರಲ್ ಆಗಿರುವ ತುಮಕೂರು ಹಾಗೂ ಬೆಂಗಳೂರು ವೈದ್ಯರ ಸಿಬ್ಬಂದಿ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಜನ ಸಾಮಾನ್ಯರು, ವೈದ್ಯಕೀಯ ರಂಗದಲ್ಲಿ ಪ್ರಶ್ನೆ, ಚರ್ಚೆಗಳಿಗೆ ಕಾರಣವಾಗುತ್ತಿದೆ.

ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವುದನ್ನು ಸರ್ಕಾರ ಅವರವರ ಇಚ್ಛೆ ಗೆ ಬಿಟ್ಟಿದೆ. ಆದರೂ ಲಸಿಕೆ ಹಾಕಿಸಿಕೊಳ್ಳುವ ಪೋಸ್ ಕೊಡುತ್ತಿದ್ದೇವೆ ಎಂದು ಸ್ವತಃ   ವೈದ್ಯಾಧಿಕಾರಿಗಳು ಮತ್ತು ನರ್ಸ್ ಒಬ್ಬರು ಪತ್ರಿಕೆಯೊಂದಕ್ಕೆ ಹೇಳಿಕೆ ಕೊಟ್ಟಿರುವುದು ಹಾಸ್ಯಾಸ್ಪದ.

ವ್ಯಾಕ್ಸೀನ್ ಹಾಕಿಸಿಕೊಳ್ಳುವಂತೆ ಫೋಟೋ, ವಿಡಿಯೋ ಮಾಡಿಸಿ ಪ್ರಚಾರ ಮಾಡಲು ಸರ್ಕಾರ ತನ್ನ ಸಿಬ್ಬಂದಿಗೆ ಎಲ್ಲೂ ಹೇಳಿಲ್ಲ.ಬಹುಶಃ ತಾವು ವ್ಯಾಕ್ಸೀನ್ ಹಾಕಿಕೊಳ್ಳದೆ ತಮ್ಮ ಅಧೀನ ಸಿಬ್ಬಂದಿಗೆ vaccine ಹಾಕಿಕೊಳ್ಳಿ ಎಂದು ಹೇಳುವ ನೈತಿಕ ಧೈರ್ಯ ನೀಡಲು ಈ ರೀತಿ ಮಾಡುತ್ತಿದ್ದಾರೆ ಅನಿಸುತ್ತಿದೆ.

ಕೋವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿರುವ ಸಿಬ್ಬಂದಿ ಲಸಿಕೆ ಪಡೆಯುವುದರಿಂದ ಅದು ರೋಗದ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಹೀಗಾಗಿ ಅವರ ಆರೋಗ್ಯದ ಕಾರಣದಿಂದಲಾದರೂ ವೈದ್ಯರು, ನರ್ಸ್ ಗಳು ಲಸಿಕೆ ಪಡೆಯುವುದು ಒಳಿತು.

ಅದೇ ರೀತಿ ಮುಂದೆ ಸಾರ್ವಜನಿಕರಿಗೆ ಲಸಿಕೆ ಕೊಡಬೇಕಾದ ಅನಿವಾರ್ಯತೆ ಕೂ ಇವರಿಗಿದೆ. ಈ ಬಗ್ಗೆ ಸರಕಾರವು ಸರಿಯಾದ ಮಾರ್ಗಸೂಚಿಗಳನ್ನು ಹೊರಡಿಸಬೇಕು.

celebrity ಗಳನ್ನು ನೋಡಿ ಸಾರ್ವ ಜನಿಕರು ತಮ್ಮ ಮನೋಭಾವನೆ ಬದಲಾಯಿಸುತ್ತಾರೆ ಎಂಬುದು ಸತ್ಯ.ಅದೇ ಜಾಹೀರಾತುಗಳ ಮೂಲ ಮಂತ್ರ. ನಟ ಅಮಿತಾಬ್ ಅವರು ನವರತ್ನ ತೈಲ ಹಚ್ಚಿಕೊಳ್ಳುತ್ತಾರೆ,ಅಥವಾ ಲಕ್ಸ್ ಸೋಪ್ ಬಳಸುವ ಹೀರೋಯಿನ್ ಥರ. ಪೋಲಿಯೋ ವ್ಯಾಕ್ಸೀನ್ ಹಾಕುವಾಗ ಹನಿ ಮಗು ಬಾಯಿಗೆ ಬಿದ್ದಿತೆ ಎಂದು ಯಾರೂ ವಿಡಿಯೋ ತೋರಿಸುವುದಿಲ್ಲ.ಮಗೂಗೆ ಪೋಲಿಯೋ ಹನಿ ಹಾಕಿದ್ದಾರೆ ಎಂದೇ ಸಂದೇಶ ಹೋಗಬೇಕು.

ಕೋವಿ ಡ್ ಲಸಿಕೆ ಬಗ್ಗೆ ಜನರು ಗೊಂದಲದಲ್ಲಿ ಇರುವಾಗ ಡಿಜಿಟಲ್ ಮಾಧ್ಯಮ ಸೇರಿದಂತೆ ಎಲ್ಲ ರೀತಿಯ ಮಾಧ್ಯಮಗಳು ಸ್ವಲ್ಪ ಜವಾಬ್ದಾರಿ ತೋರಿಸಬೇಕಿದೆ. ಇಂತಹ ಸುದ್ದಿಗಳು ಬೀರಬಹುದಾದ ಪರಿಣಾಮಗಳನ್ನು ಅರಿಯಬೇಕಾಗಿದೆ. ಅಲ್ಲದೇ ಹೀಗೆ ಮಾಡುವಾಗ ಈ ಬಗ್ಗೆ ಇರುವ ತಪ್ಲು ಕಲ್ಪನೆಯನ್ನು ಹೋಗಲಾಡಿಸುವ ಕೆಲಸಕ್ಕೆ ಮೊದಲ ಆದ್ಯತೆ ಸಿಗಬೇಕಾಗಿದೆ. ಇಲ್ಲಿ ಡಿ ಹೆಚ್ ಓ ಅಥವ ಡಾಕ್ಟರ್ ರಜನಿ ಅಪ್ರಸ್ತುತ.

ಡಾ. ರಜನಿ ಅವರು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದರೆ ಧೈರ್ಯ ವಾಗಿ ಕೋವಿ ಡ್ ಲಸಿಕೆ ಹಾಕಿಸಿಕೊಳ್ಳುವ ಜನರು ಇರುತ್ತಾರೆ. ಅದನ್ನು ನಾವು ಮನಗಾಣಬೇಕು..ವಿಡಿಯೋ ಟ್ರೊಲ್ ಮಾಡಿರುವ ಮಂದಿ ಗೆ ಡಿ ಎಚ್.ಓ ಯಾರು ರಜನಿ ಯಾರು ಎಂಬುದು ಬೇಕಾಗಿಲ್ಲ. ವ್ಯಾಕ್ಸೀನ್ ಬಗ್ಗೆ ರಾಜಕೀಯ ಮಾತುಗಳನ್ನು ಬಳಸಿ ಟ್ರೊಲ್ ಮಾಡುತ್ತಾರೆ.

ತುಮಕೂರು ಆರೋಗ್ಯ ಇಲಾಖೆ ಕೋವಿಡ್ ಭಯದಲ್ಲಿ ಒಂದು ಗುರುತರ ಆರೋಪ ಹೊತ್ತುಕೊಂಡ ಸಂದಿಗ್ದ ಸಮಯದಲ್ಲಿ ಈಗಿನ ಡಿಎಚ್ ಒ ಅಧಿಕಾರ ವಹಿಸಿಕೊಂಡವರು. ಇನ್ನೂ ರಜನಿ ಅವರು ಕೋವಿಡ್ ರೋಗಿಗಳನ್ನು ಮುಟ್ಟಿ ನೋಡುವ ಮೂಲಕವೇ ಪ್ರಸಿದ್ಧಿ ಗೆ ಬಂದವರು. ತಮ್ಮ ದಿನ ನಿತ್ಯದ ಕರ್ತವ್ಯದ ಜೊತೆಗೆ ಜಿಲ್ಲಾಡಳಿತದೊಂದಿಗೆ  ಕೋವಿಡ್ ನಿಯಂತ್ರಣಕ್ಕಾಗಿ ತೊಡಗಿಸಿಕೊಂಡಿರುತ್ತಾರೆ. ಆ ದಿನವೂ ಕೂಡ ಲಸಿಕೆ ಹಾಕುವ ಮೊದಲನೆ ದಿನವಾದ್ದರಿಂದ ಸಂಪೂರ್ಣವಾಗಿ ಹಬ್ಬದ ವಾತಾವರಣ ಕಲ್ಪಿಸಿ ಇತರೆ ವೈದ್ಯರುಗಳಿಗೆ ಸ್ಪೂರ್ತಿಯಾಗಿ ವ್ಯಾಕ್ಸಿನ್ ಹಾಕಿಸಿಕೊಂಡರೂ ಟ್ರಾಲ್ ಹಾಕಿದ್ದು ದುರಂತ.

ಆದರೆ ಇವೆಲ್ಲ ಇಲ್ಲಿ ಬರುವುದಿಲ್ಲ. ಒಟ್ಟಿನಲ್ಲಿ ಸ್ಟಿಲ್ ಫೋಟೋ ಮತ್ತು ಸುದ್ದಿ ಬೇಕಾಗಿರುವ ಕಡೆ ಡೆಮೊ ವಿಷನ್ ಎಡವಟ್ಟು ಆಯಿತು.

ಸರ್ಕಾರಿ ವ್ಯವಸ್ಥೆಯಲ್ಲಿ ಈ ಮೊಬೈಲ್ ಹಾವಳಿಯ ಕಡೆಗೂ ಗಮನ ಹರಿಸಬೇಕಾಗಿದೆ. ತಮಗಾಗದ ಅಧಿಕಾರಿಗಳು, ಸಿಬ್ಬಂದಿಯನ್ನು ಒತ್ತಡಕ್ಕೆ ತಳ್ಳುವ, ಅಪಪ್ರಚಾರಕ್ಕೆ ಈಡಾಗುವಂತ ಸನ್ನಿವೇಶಗಳಿಗಾಗಿ ಕಾದು ಪ್ರಚಾರ ಮಾಡುತ್ತಿರುವ ಮನಸ್ಥಿತಿಯವರೇ ಇಗೀಗ ಹೆಚ್ಚುತ್ತಿದ್ದಾರೆ. ಕಚೇರಿ ಸಮಯದಲ್ಲಿ ಮೊಬೈಲ್ ನಿಷೇಧಿಸುವುದು ಇನ್ನೂ ಒಳ್ಳೆಯದು.ಮಾತಾಡಿದ್ರೆ ರೆಕಾರ್ಡ್ ಮಾಡುವ ಕಾಲ ಇದಾಗುತ್ತಿದೆ.

ಇನ್ನೂ, ಖ್ಯಾತ ಪತ್ರಕರ್ತರಾದ ನಾಗೇಶ್ ಹೆಗ್ಡೆ ಅವರು ಹೇಳಿರುವಂತೆಯೇ, ಮಾಧ್ಯಮಗಳಲ್ಲಿ ಸಣ್ಣ ವಿಷಯ ದೊಡ್ಡದಾಗುತ್ತಿವೆ. ದೊಡ್ಡ ವಿಷಯಗಳು ಮೌನವಾಗುತ್ತಿವೆ. ಎಕರೆ ಗಟ್ಟಲೆ ಗಣಿ ಮಾಡಿ.. ಮೈಲು ಗಟ್ಟಲೆ ದಿನಾ ಶಬ್ದ ಬರುವ ಗಣಿಗಾರಿಕೆ ..ಅಣೆಕಟ್ಟುಗಳ ಭದ್ರತೆ ..ಜೀವಗಳ ಹಾನಿ ಗೆ ಧಕ್ಕೆ ಯಾಗುವ ಗಣಿ ಮಾಧ್ಯಮಗಳು ಇಲ್ಲಿಯವರ್ಗೆ ಮಾಧ್ಯಮಗಳು ಸರಿಯಾದ ರೀತಿಯಲ್ಕಿ ಜನರ ಮುಂದೆ ಇಟ್ಟಿಲ್ಲ..

ಜಿಲ್ಲಾ ಆಡಳಿತ ಕಣ್ಣು ಮುಚ್ಚಿದೆಯೆ.. ದ್ರೋಣ್ ಕ್ಯಾಮೆರಾ .. ಲೈಸೆನ್ಸ್.. ಜಿಯಾಲಜಿ ಇಲಾಖೆ ಮಾಲಿನ್ಯ ನಿಯಂತ್ರಣ . ಸ್ಥಳೀಯ ಗ್ರಾಮ ಪಂಚಾಯತಿ ..ಯಾರಿಗೋ ಈ ಗಣಿಗಾರಿಕೆ ಬಗ್ಗೆ ಒಂದು ಫೋಟೋ ವಿಡಿಯೋ ಕ್ಲಿಪ್ಪಿಂಗ್ ಮೊದಲೇ ಸಿಕ್ಕಿಲ್ಲವೆ.. ಅಕ್ರಮ ಸಕ್ರಮ ಇನ್ನೂ ಬೆಳಕಿಗೆ ಬರಬೇಕಿದೆ.

ಡಿ ಜಿ ಮಾಧ್ಯಮ ದೊಡ್ಡ ದೊಡ್ಡ ಹಗರಣ ಬೆಳಕಿಗೆ ತರಬೇಕಿದೆ.ಪ್ರಜ್ಞಾ ವಂತ ಓದುಗರು ಡಿ ಜಿ ಮಾಧ್ಯಮಕ್ಕೆ ಮಾಹಿತಿ ದಾರರು ಮತ್ತು ಓದುಗರೂ ಎರಡೂ ಆಗಬೇಕಾಗಿದೆ.

Comment here