ತುಮಕೂರು ಲೈವ್

ಸಂಪಿಗೆಯಲ್ಲಿ ಚನ್ನಕೇಶವ ಸ್ವಾಮಿ ನೂತನ ದೇವಾಲಯ ಉದ್ಘಾಟನೆ

Thuruvekere: ತಾಲ್ಲೂಕಿನ ಸಂಪಿಗೆ ಗ್ರಾಮದ ಚಂಪಕಾಪುರಿ ಚನ್ನಕೇಶವ ಸ್ವಾಮಿಯ ನೂತನ ದೇವಾಲಯ, ಅಷ್ಟಬಂಧನ ಪ್ರತಿಷ್ಠಾಪನಾ, ವಿಮಾನಗೋಪುರ ಮುಖಮಂಟಪ ಹಾಗು ಚನ್ನಕೇಶವ ಸ್ವಾಮಿಯ ಸ್ಥಿರಬಿಂಬ ಮಹಾಕುಂಭ ಅಭಿಷೇಕ ಮಹೋತ್ಸವವು ಮಾರ್ಚ್.6 ರಿಂದ 8 ರವರೆಗೆ ನಡೆಯಲಿದೆ ಎಂದು ಚಂಪಕಾಪುರಿ ಗ್ರಾಮ ವಿಕಾಸ್ ಸೇವಾ ಟ್ರಸ್ಟ್ ಅಧ್ಯಕ್ಷ ತಿಳಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಕಾರ್ಯಕ್ರಮದ ರೂಪುರೇಷಗಳನ್ನು ಕುರಿತು ಮಾತನಾಡಿದರು.

ಡಾ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಮಾ.6ರರ ಶುಕ್ರವಾರ ಸಂಜೆ ಗ್ರಾಮಪ್ರದಕ್ಷೆ, ಗೋಪೂಜೆ, ಮಹಾಗಣಪತಿ ಪೂಜೆ, ರಕ್ಷಾ ಬಂಧನ ಸೇರಿದಂತೆ ವಿವಿಧ ಹೋಮಗಳು ನಡೆಯಲಿವೆ.

ಸಂಜೆ 6 ಗಂಟೆಗೆ ಸ್ವದೇಶಿ ಜಾಗೃತಿಯ ಮಹತ್ವ ಕುರಿತ ಭಾಷಣ ಕೆ.ಜಗದೀಶ್ ಅವರಿಂದ ಅದೇ ರಾತ್ರಿ 7 ಗಂಟೆಗೆ ಬೆಂಗಳೂರಿನ ಪುತ್ಥಳಿ ಕಲಾರಂಗದ ಡಾ.ದತ್ತಾತ್ರೇಯ ಅರಳೀಕಟ್ಟೆ ಇವರಿಂದ ಸೂತ್ರಸಲಾಕಿ ಗೊಂಬೆಯಾಟ ‘ಕುಮಾರ ಸಂಭವ’ ಪ್ರಸಂಗವನ್ನು ಪ್ರಸ್ತುತಪಡಿಸಲಿದ್ದಾರೆ.
ಮಾರ್ಚ್.7ರ ಶನಿವಾರ ಬೆಳಗ್ಗೆ 8 ಗಂಟೆಯಿಂದ ದ್ವಾರಾರಾಧನೆ, ಉಪಕುಂಬಾರಾಧನೆ, ಪ್ರಾಣಹೋಮ, ವಾಸ್ತು ಪೂಜೆ, ಅಗ್ನಿ ಪ್ರತಿಷ್ಠೆ, ಮಂಗಳಾರತಿ ನಡೆದು ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.

ಸಂಜೆ 4 ಗಂಟೆಗೆ ಗೋದೂಳಿ ಲಗ್ನದಲ್ಲಿ ಕಳಶಾರೋಹಣ. 6 ಗಂಟೆಗೆ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಗಂಗಾಧರ ಕಾಸರಘಟ್ಟ ಅವರಿಂದ ಸಾವಯವ ಕೃಷಿ ಜಲ ಮತ್ತು ಪರಿಸರ ಸಂರಕ್ಷಣೆ ಕುರಿತ ಭಾಷಣ. ಅದೇ ರಾತ್ರಿ 7 ಗಂಟೆಗೆ ಸಾಯಿಕಲಾ ಪ್ರತಿಷ್ಠಾನದ ಶಿವಮೊಗ್ಗ ತಂಡದವರಿಂದ ಯಕ್ಷಗಾನ ಬಯಲಾಟ ಪ್ರಸಂಗ ಕದಂಬ ಕೌಶಿಕೆ ನಡೆಯಲಿದೆ.

ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮೇಲುಕೋಟೆಯ ಯದುಗಿರಿ ಯತಿರಾಜ ರಾಮಾನುಜಜೀಯರ್ ಅವರ ದಿವ್ಯಸಾನ್ನಿಧ್ಯದಲ್ಲಿ ಪ್ರಾಣ ಪ್ರತಿಷ್ಠೆ ಮತ್ತು ಮಹಾಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.

ಮಧ್ಯಾಹ್ನ 12ಕ್ಕೆ ಹಿರಿಯ ಆಗಮಿಕರು, ವೇದ ಪಂಡಿತರಿಗೆ ಸನ್ಮಾನ. ಟಿ.ಎ.ಪಿ.ಶೆಣೈ ಅವರಿಂದ ಹಿಂದು ಧಾರ್ಮಿಕ ಮೌಲ್ಯಗಳು ಕುರಿತ ಭಾಷಣ. ಸಂಜೆ 6 ಗಂಟೆಗೆ ಮಧುಸೂಧನ್ ಅವರಿಂದ ನಿತ್ಯ ಜೀವನದಲ್ಲಿ ದೇಶೀ ಗೋವಿನ ಮಹತ್ವ ಮತ್ತು ಆಥರ್ಿಕತೆ ಕುರಿತ ಭಾಷಣ. ರಾತ್ರಿ 7.ಕ್ಕೆ ಮೈಸೂರು ರಾಮಚಂದ್ರಚಾರ್ ತಂಡದವರಿಂದ ದಾಸರ ಪದಗಳು ಗಾಯನ ನಡೆಯಲಿದೆ.

ಮೂರು ದಿನಗಳ ಕಾಲ ಬರುವ ಭಕ್ತಾಧಿಗಳಿಗೆ ನಿರಂತರ ಅನ್ನಸಂತರ್ಪಣೆ ಕಾರ್ಯ ಏರ್ಪಡಿಸಲಾಗಿದೆ.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಶಾಸಕ ಮಸಾಲಜಯರಾಮ್, ತಹಶೀಲ್ದಾರ್ ಆರ್.ನಯೀಂಉನ್ನೀಸಾ, ತುಮುಲ್ ಜಿಲ್ಲಾಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತಿ ಇರಲಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಟ್ರಸ್ಟ ನ ಎಸ್.ಎನ್.ಯೋಗೀಶ್, ಎಸ್.ಎ.ನಾಗರಾಜು, ಬಸವರಾಜು, ಎಸ್.ಎನ್,ನಾಗರಾಜು, ಸತೀಶ್ಬಾಬು, ಶ್ರೀನಿವಾಸ್, ಸಂಪಿಗೆ ಶೀಧರ್ ಪಾಲ್ಗೊಂಡಿದ್ದರು.

Comment here