ತುಮಕೂರ್ ಲೈವ್

ಸಾಲ ಪಡೆದು ಸಾಲ ಹಿಂತಿರುಗಿಸಿ

ತುಮಕೂರಿನ ಬಾಲಭವನದಲ್ಲಿ ನಡೆದ ಸ್ತ್ರೀಶಕ್ತಿ ಸಮಾವೇಶ ಚುನಾವಣೆಗೆ ಮುನ್ನುಡಿಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇದುವರೆಗೂ ಸ್ತ್ರೀಶಕ್ತಿ ಸಮಾವೇಶ ಹಮ್ಮಿಕೊಳ್ಳದೆ ಈಗ ಮಹಿಳೆಯರನ್ನು ಒಟ್ಟುಗೂಡಿಸಿ ಚುನಾವಣೆಯ ಸಂದೇಶ ರವಾನಿಸಿದ್ದಾರೆ ಜೆಡಿಎಸ್ ಪ್ರಾಬಲ್ಯವಿರುವ ತುಮಕೂರು ಜಿಲ್ಲೆಯಲ್ಲಿ ಮತ್ತಷ್ಟು ಬಲ ಸಾಧಿಸಲು ಬಿಜೆಪಿ ಇತ್ತ ಗಮನಹರಿಸಿರಬಹುದೇ ಕೇಂದ್ರೀಕರಿಸುತ್ತಿರುವ ಲಕ್ಷಣಗಳು ಇಲ್ಲಿ ಕಂಡುಬರತೊಡಗಿವೆ.ಪಾವಗಡ ಕ್ಷೇತ್ರಕ್ಕೂ ಸುರೇಶ್ ಕುಮಾರ್ ಹೆಚ್ಚು ಭೇಟಿ ನೀಡುತ್ತಿರುವುದು ಇದಕ್ಕೆ ಪುಷ್ಟಿ ನೀಡಿದಂತಿದೆ.ಹೌದು ಹಾಗಾದರೆ ಬಾಲಭವನದಲ್ಲಿ ನಡೆದ ಸ್ತ್ರೀಶಕ್ತಿ ಸಮಾವೇಶದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಏನ್ ಮಾತಾಡಿದ್ರು ಅಂದ್ರೆ ಮಹಿಳೆಯರು ಸಾಲ ಪಡೆಯಬೇಕು. ಹಾಗೆಯೇ ಸಾಲ ತೀರಿಸಬೇಕು. ಸಾಲ ಪಡೆದು ಕಟ್ಟದಿದ್ದರೆ ಬ್ಯಾಂಕುಗಳು ಉಳಿಯುವುದಿಲ್ಲ. ಸಾಲ ನೀಡಿದವರು ಮತ್ತು ಸಾಲ ಪಡೆದವರು ಇಬ್ಬರೂ ಸಂಕಷ್ಟಕ್ಕೆ ಸಿಲುಕುತ್ತಾರೆ ಅಲ್ಲವೇ? ಸಾಲ ತೆಗೆದುಕೊಂಡವರು ಸಾಲ ಮರುಪಾವತಿಸಿದರೆ ಬೇರೊಬ್ಬ ಮಹಿಳೆಗೂ ಸಾಲ ನೀಡಬಹುದು ಎಂಬ ಸಲಹೆ ವ್ಯಕ್ತವಾಯಿತು.

ಮಹಿಳೆಯರು ಆರ್ಥಿಕ ಸಬಲರಾಗಬೇಕು. ಆಗ ಅವರಲ್ಲಿ ಚೈತನ್ಯ ಹಾಗೂ ಪ್ರಗತಿ ಕಂಡುಬರುತ್ತದೆ. ಮಹಿಳೆಯರು ಸ್ವ-ಸಹಾಯ ಸಂಘಗಳ ಮೂಲಕ ಪಡೆದ ಹಣ ಇಮ್ಮಡಿಗೊಳಿಸಿ ಸ್ವಾವಲಂಬನೆ ಸಾಧಿಸಿ ಬದುಕಬೇಕು. ಮಹಿಳೆಯರು ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಸಾಲದಿಂದ ಮುಕ್ತರಾಗಬೇಕು. ಮಹಿಳೆಯರು ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸಬೇಕು. ಶಿಕ್ಷಣ ಒದಗಿಸಲು ಸಾಧ್ಯವಾಗುವುದಿಲ್ಲ. ಹೆಣ್ಣು ಮಕ್ಕಳನ್ನು ಬೇಗ ವಿವಾಹ ಬಂಧನಕ್ಕೆ ದೂಡುವುದು ಸರಿಯಲ್ಲ. ಆಕೆಗೆ ಉತ್ತಮ ಶಿಕ್ಷಣ ಕೊಡಿಸಿ ಸರಿಯಾದ ಸ್ಥಾನಮಾನ ಕಲ್ಪಿಸಿದರೆ ಪುರುಷರಿಗಿಂತ ಸಾಧನೆ ಮಾಡುತ್ತಾರೆ ಎಂದು ಕಿವಿಮಾತು ಹೇಳಿದರು. ಮಹಿಳೆಯರೂ ಕೂಡ ಸಚಿವರ ಮಾತುಗಳನ್ನು ಗಮನವಿಟ್ಟು ಆಲಿಸಿದರು.ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸ್ವ-ಸಹಾಯ ಸಂಘವು ಆಸರೆಯಾಗಿದೆ. ಫಲವಾಗಿ ರಾಜ್ಯದ ಸಾವಿರಾರು ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಮಹಿಳೆಯೆಂದರೆ ಶಕ್ತಿ ಸ್ವರೂಪಿಣಿ ಆಕೆ ಮನಸ್ಸು ಮಾಡಿದರೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರಬಲ್ಲಳು ಎಂದರು.ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿಗಣೇಶ್ ಕೂಡ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲೀಕರಣರಾಗಬೇಕು. ಗುಡಿ ಕೈಗಾರಿಕೆ ಮೂಲಕ ಮನೆಯಲ್ಲಿಯೇ ಆಹಾರ ಪದಾರ್ಥ, ಮನೆಯ ಅಲಂಕಾರ ವಸ್ತುಗಳನ್ನು ತಯಾರು ಮಾಡಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ರಾಜ್ಯ ಸರ್ಕಾರದಿಂದ ಬ್ರಾಂಡ್ ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಮಾತನಾಡಿದರು. ಮಹಿಳೆಯರು ತಯಾರಿಸುತ್ತಿರುವ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸಿಗುವಂತೆ ಸರ್ಕಾರದ ಜೊತೆ ಚರ್ಚಿಸಬೇಕು ಎಂದು ಸಚಿವರಿಗೆ ಆಗ್ರಹಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾದರಾ ನರಸಿಂಹಮೂರ್ತಿ, ಮಾಜಿ ಅಧ್ಯಕ್ಷರಾದ ಹುಚ್ಚಯ್ಯ, ಮೇಯರ್ ಲಲಿತ ರವೀಶ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಜಿಲ್ಲಾ ಸ್ತೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶಾಂತಕುಮಾರಿ ಹಾಜರಿದ್ದರು.

Comment here