Friday, March 29, 2024
Google search engine
Homeಜನಮನಸುರೇಶಗೌಡರೇ ಇದು ನಿಮಗೆ ತರವೇ?

ಸುರೇಶಗೌಡರೇ ಇದು ನಿಮಗೆ ತರವೇ?

ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ದಯಾನಂದ ಗೌಡ ಅವರು ಮಾಜಿ ಶಾಸಕರಿಗೆ ಬರೆದಿರುವ ಪತ್ರದ ಯಥಾರೂಪ.


ಸನ್ಮಾನ್ಯ ಬಿ. ಸುರೇಶ್ ಗೌಡರವರೇ ನಿಮ್ಮ ಅವಧಿಯಲ್ಲಿ ನೀವು ನಿಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೀರಿ, ಕೆಲವೊಂದು ಕೆಲಸಗಳನ್ನು ನೋಡಿ & ಹಿರಿಯರಾದ ನಿಮ್ಮ ಮೇಲೆ ನಮಗೂ ಗೌರವವಿದೆ. ಈ ಪತ್ರವನ್ನು ರಾಜಕೀಯ ಉದ್ದೇಶದಿಂದ ಬರೆಯುತ್ತಿಲ್ಲಾ ಎಂದು ಮೊದಲು ನಿಮ್ಮ ಗಮನಕ್ಕೆ ತರುತ್ತೇನೆ.

ಕೆಲವು ದಿನಗಳಿಂದ ನಿಮ್ಮ ನಡವಳಿಕೆ ಹೇಗಿದೆ ಎಂದರೇ,
ನಿಮ್ಮ ನಡೆಯನ್ನು ಜನರು ಪ್ರಶ್ನಿಸುವ ಮುಂಚೆ ನೀವೇ ಬದಲಾದರೆ ತುಂಬಾ ಒಳ್ಳೆಯದು. ಕಾರಣವಿಷ್ಟೆ ನೆನ್ನೆ ತುಮಕೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ನಿಮ್ಮ ಪಕ್ಷದ ಸದಸ್ಯರೊಬ್ಬರಿಗೆ ನೀಡಿರುವುದು ತುಂಬಾ ಸಂತೋಷದ ವಿಷಯ ಹಾಗೂ ಅದಕ್ಕೆ ಮೊದಲನೆಯದಾಗಿ ಶುಭಾಶಯವನ್ನು ಕೋರುತ್ತೇನೆ.

ಇನ್ನುಳಿದಂತೆ ಇಡೀ ವಿಶ್ವಕ್ಕೆ ವಿಶ್ವವೇ ಕೊರೋನಾ ಕ್ರೌರ್ಯಕ್ಕೆ ತಲ್ಲಣಿಸಿದೆ ಇದಕ್ಕೆ ತುಮಕೂರು ಕೂಡಾ ಹೊರತಲ್ಲಾ. ಕಳೆದ ಮೂರ್ನಾಲ್ಕು ತಿಂಗಳಿಂದ ನೀವೂ ಕೂಡಾ ಕೊರೋನಾ ನಿರ್ವಹಣೆಯಲ್ಲಿ ತಾವು ನಿಮ್ಮ ಕೈಲಾದ ಸೇವೆ ಮಾಡಿದ್ದೀರಾ.

ತಾವು ಹೋದ ಕಡೆಯಲೆಲ್ಲಾ ಪ್ರಧಾನಿ ಮೋದಿಯವರ ಆದೇಶವನ್ನು ನಾವೆಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೋನಾ ನಿರ್ವಹಣೆ ಮಾಡಬಹುದೆಂದು, ಯಾರೂ ಹೊರ ಬರದಂತೆ ಸೋಂಕನ್ನು ತಡೆಗಟ್ಟಬಹುದೆಂದು, ಸಾಮಾಜಿಕ ಅಂತರ ಕಾಯ್ದುಕೊಂಡರೇ ಸೋಂಕು ಹಕಡುವುದಿಲ್ಲವೆಂದು ವೈಭವೋಪೇರಿತವಾಗಿ ಭಾಷಣಗಳನ್ನು ಮಾಡುತ್ತಾ, ಜನಪರ ಕಾಳಜಿ ಮೆರೆದದ್ದು ನೀವಾ ಇಲ್ಲಾ ಯಾರು..? ಎನ್ನುವ ಪ್ರಶ್ನೆ ನನಗೆ ಮೂಡುತ್ತಿದೆ.

ನೆನ್ನೆ ನಡೆದ ತುಮಕೂರು ತಾಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲದೆ, ಮುಂಜಾಗ್ರತಾ ಕ್ರಮ ವಿಲ್ಲದೆ ತಾವು ವಿಜಯೋತ್ಸವವನ್ನು ಆಚರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಇದೆ ಎಂದು ನೀವೇ ಪ್ರಶ್ನಿಸಿಕೊಳ್ಳಿ..?

ಹಾಗಿದ್ದ ಮೇಲೆ ನೀವು ಹಿಂದೆಲ್ಲಾ ಮಾಡಿದಂತಹ ಸೇವೆ, ಜಾಗೃತಿಯ ಭಾಷಣ ಅದೆಲ್ಲವೂ ನಾಟಕವೇ.? ಹೀಗೆ ಆಡುವ ಮಾತೊಂದು ನಡೆಯುವ ರೀತಿಯೊಂದು ಆದರೇ ಹೇಗೆ..? ಅವಿದ್ಯಾವಂತರೂ ಮಾಡದೇ ಇರುವ ಕೆಲಸಕ್ಕೆ ನೀವು ಮಾಡಿದ್ದೀರಲ್ಲಾ ನಿಮ್ಮ ಈ ನಾಟಕೀಯ ಮುಖವಾಡದ ನಡಿಗೆಯನ್ನು ಖಂಡಿಸುತ್ತೇನೆ.

ರಾಜಕಾರಣವು ಇಂದು ಇರುತ್ತದೆ, ನಾಳೆಯೂ ಇರುತ್ತದೆ. ಆದರೆ ಮಾತಿನಂತೆ ತಾವೇ ನಡೆದುಕೊಳ್ಳದಿದ್ದರೇ ಹೇಗೆ.? ತಾವೊಬ್ಬ ಜನಪ್ರತಿನಿಧಿಯಾಗಿ 10 ವರ್ಷ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕ ಸ್ಥಾನವನ್ನು ಅಲಂಕರಿಸಿದ್ದೀರಿ, ಅಧಿಕಾರ ಅನುಭವಿಸಿದ್ದೀರಿ.

ರಾಜಕಾರಣಕ್ಕೊಸ್ಕರ ನೀವು ಹೇಗೆಂದರೇ ಹಾಗೇ ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ನಿಮ್ಮ ಮಾತನ್ನು ನಿಮ್ಮ ನಡವಳಿಕೆಯನ್ನು ತುಲನೆ ಮಾಡಿದಾಗ ನೀವು ಮಾತಿನಂತೆ ನಡೆದುಕೊಳ್ಳುವುದಿಲ್ಲಾ ಎಂಬುದು ಅಕ್ಷರಸಹ ಸತ್ಯವಾಯಿತು. ನಿಮ್ಮಂತವರನ್ನು ನೋಡಿಯೇ 12ನೇ ಶತಮಾನದಲ್ಲಿ ಬಸವಣ್ಣನವರು ಒಂದು ಸೊಗಸಾದ ವಚನವನ್ನು ಹೇಳಿದ್ದಾರೆ. ಈ ವಚನವನ್ನು ಓದಿಯಾದರೂ ಬದಲಾಗಿ.

ನೂರನೋದಿ ನೂರಕ್ಕೆರಿದರೇನು ಫಲ,
ಆಸೆ ಅರಿಯದು ರೋಷ ಬಿಡದು,
ಮಜ್ಜನಕ್ಕೆರೆದು ಫಲವೇನು..?
ಮಾತಿನಂತೆ ಮನವಿಲ್ಲದವರ ಜಾತಿ-ಡೊಂಬರವ
ನೋಡಿ ನಗುವ ನಮ್ಮ ಕೂಡಲಸಂಗಮದೇವಾ ।।

ನಿಮಗೆ ಈ ವಚನ ಹೇಳಿ ಮಾಡಿಸಿದಂತಿದೆ. ಇನ್ನು ಮುಂದಾದರೂ ರಾಜಕೀಯವನ್ನು ಹೊರತುಪಡಿಸಿ, ರಾಜಕೀಯ ಜೀವನ ಒಂದುಕಡೆ ಅದನ್ನು ಮೀರಿದ ಸಾಮಾಜಿಕ ಜೀವನದಲ್ಲಿ ನೀವು ಜನಸ್ನೇಹಿಯಾಗಿ ಸಮಾಜದ ಒಳಿತಿಗಾಗಿ ತುಡಿಯಬೇಕು. ಸರ್ಕಾರದ ಆದೇಶವನ್ನು ನೀವು ಮೊದಲು ಪಾಲಿಸಿ, ಜೊತೆಗೆ ಸಾಮಾಜಿಕ ಜೀವನದಲ್ಲಿ ಮಾತಿನಂತೆ ನಡೆದುಕೊಳ್ಳಿ ಎಂದು ನಾನು ಈ ಮೂಲಕ ನಿಮ್ಮನ್ನು ಮನವಿ ಮಾಡಿಕೊಳ್ಳುತ್ತೇನೆ.

ನಿಮ್ಮ ಈ ನಡೆ ನಿಮ್ಮ ಹಿಂಬಾಲಕರನ್ನು ನೀವೇ ದಿಕ್ಕು ತಪ್ಪಿಸಿದಂತಾಗುತ್ತದೆ, ಸಮಾಜದ ಸ್ವಾಸ್ಥ್ಯ ಕೆಡಿಸಿದಂತಾಗುತ್ತದೆ, ಗೌರವಯುತವಾಗಿ ನಡೆದುಕೊಳ್ಳಬೇಕಾದ ನೀವು ಈ ರೀತಿಯ ಲಜ್ಜೆಗೇಡಿ ಪ್ರದರ್ಶನವ ಮಾಡಿದರೇ ಸಮಾಜಕ್ಕೆ & ಹಿಂಬಾಲಕರಿಗೆ ಯಾವ ಸಂದೇಶ ಕೊಡುತ್ತೀರಾ..?

ಇಷ್ಚು ದಿನ ಕ್ಷೇತ್ರದಲ್ಲಿ ನೀವು ಮಾಡಿದ್ದು ನಾಟಕವೇ ಎಂದು ನೆನೆದು ದಿಗ್ಬ್ರಾಂತನಾದೆ. ನಾನು ವಯಸ್ಸಿನಲ್ಲಿ ನಿಮಗಿಂತ ತುಂಬಾ ಕಿರಿಯನು ನನಗನಿಸಿದ್ದನ್ನು ನೇರವಾಗಿ ಹೇಳಿದ್ದೇನೆ ತಿದ್ದಿಕೊಂಡರೆ ನಿಮ್ಮ ಭವಿಷ್ಯಕ್ಕೆ ಒಳಿತು.

ವಂದನೆಗಳೊಂದಿಗೆ,

ಕೆ.ಬಿ ದಯಾನಂದ ಗೌಡ (ಹೆಬ್ಬೂರು ದೀಪುಗೌಡ).
ರಾಜ್ಯ ಪ್ರಧಾನ ಕಾರ್ಯದರ್ಶಿ
ಜೆಡಿಎಸ್ ಯುವ ಘಟಕ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?