ತುಮಕೂರು ಲೈವ್

ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಮರಗಳ ಮಾರಣಹೋಮ ನಿಲ್ಲಲಿ: ಜಗದೀಶ್ ಕೋಡಿಹಳ್ಳಿ

ಪಬ್ಲಿಕ್ ಸ್ಟೋರಿ.ಇನ್


Tumkuru: ವಿಶ್ವ ಪರಿಸರ ದಿನಚಾರಣೆಯ ಅಂಗವಾಗಿ ತುಮಕೂರು ನಗರದ ಡಿ ವೈ ಎಸ್ ಪಿ ಕಛೇರಿಯ ಅವರಣದಲ್ಲಿ ಗಿಡ ನೆಡಲಾಯಿತು.

ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೊಡಿಹಳ್ಳಿ ಜಗದೀಶ್ ಮಾತನಾಡಿ, ತುಮಕೂರು ನಗರ ಮಹಾನಗರ ಪಾಲಿಕೆಯಿಂದ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಕೆಲವು ಅಭಿವೃದ್ಧಿ ಹೆಸರಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಇದು ನಿಲ್ಲಬೇಕು ಎಂದರು.

ನಗರದಲ್ಲಿ ಮಳೆ ಬಿದ್ದರೆ ನೀರು ಇಂಗಲು ಜಾಗವಿಲ್ಲದಂತಗಿದೆ. ಈಗ ಕಾಂಕ್ರೀಟ್ ನಿಂದ ರಸ್ತೆಗಳ ನೆಲವನ್ನ ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ. ಮುಂದಿನ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವ ಸಂಭವ ಹೆಚ್ಚಿರುತ್ತದೆ ಎಂದು ಎಚ್ಚರಿಸಿದರು.

ನಗರದ ರಸ್ತೆಗಳ ಆಸುಪಾಸುಗಳಲ್ಲಿ 5 ಮೀಟರಿನ ಅಂತರದಲ್ಲಿ 3’ೱ3’ ಜಾಗದಲ್ಲಿ ಗಿಡ ನೆಡಲು ಅವಕಾಶ ಮಾಡಿಕೊಡಬೇಕು. ಎಂದು ಮಹಾನಗರಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಸಮಾಜ ಸೇವಕರಾದ ಕೋಮಲ್ ಮಾತನಾಡಿ, ಪರಿಸರದ ಬಗ್ಗೆ ಅಪಾರವಾದ ಕಾಳಜಿ ಜಗದೀಶ್ ಅವರಿಗಿದೆ ಎಂದು ತಿಳಿಸಿದರು.

ಸಮಾಜ ಸೇವಕರಾದ ಕನ್ನಡ ಪ್ರಕಾಶ್ ರವರು ಮಾತನಾಡಿ, ತುಮಕೂರು ನಗರದ ಅಮಾನಿಕೆರೆಯ ಆವರಣದಲ್ಲಿ ಸಾಕಷ್ಟು ಗಿಡಗಳನ್ನು ಹಾಕುವುದರ ಮೂಲಕ ಅಲ್ಲಿನ ಸೌಂದರ್ಯವನ್ನು ಜಗದೀಶ್ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.

R.T.O ಪ್ರಕಾಶ್ ಮಾತನಾಡಿದರು.‌ಜಗದೀಶ್ ಕೋಡಿಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ಡಿ ವೈ ಎಸ್ ಪಿ ತಿಪ್ಪೇಸ್ವಾಮಿ, ಸಮಾಜ ಸೇವಕರಾದ ಮೋಹನ್ ಕುಮಾರ್, ಮುನಿಬಸವರಾಜು, ಹೊನ್ನಾಚಾರ್, ಶಶಿಧರ್, ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.

Comment here