ತುಮಕೂರು ಲೈವ್

ಹುಳಿಯಾರು ಬಸ್ ನಿಲ್ದಾಣದಲ್ಲಿ ಜಾರ್ಖಂಡ್‌ನ 29 ಮಂದಿ

https://youtu.be/3eif9mx7s4M

Publicstory.in


ಹುಳಿಯಾರು: ಚಾನಲ್ ಕೆಲಸ ಸೇರಿದಂತೆ ವಿವಿಧ ಉದ್ಯೋಗ ಅರಸಿ ಜಾವಾಗಲ್‌ ಸುತ್ತಮುತ್ತ ನೆಲೆಯೂರಿದ್ದ ಜಾರ್ಖಂಡ್ ಮೂಲದ 29 ಮಂದಿ ಇಂದು ತಮ್ಮ ತಮ್ಮ ಊರುಗಳಿಗೆ ಸೇರಲು ಬಸ್ ಮುಖಾಂತರ ಹುಳಿಯಾರಿಗೆ ಆಗಮಿಸಿ ಇಲ್ಲಿಂದ ಲಾರಿಯಲ್ಲಿ ತೆರಳುವಾಗ, ಪಾಸ್ ಇಲ್ಲದ ಇವರುಗಳು ಹುಳಿಯಾರು ಸಮೀಪದ ಬಸವನಗುಡಿಯ ಚೆಕ್ ಪೋಸ್ಟಿನಲ್ಲಿ ಸಿಕ್ಕಿಬಿದ್ದಿದ್ದು, ಇವರುಗಳನ್ನು ಹುಳಿಯಾರಿನ ಬಸ್ ನಿಲ್ದಾಣಕ್ಕೆ ಕರೆತರಲಾಗಿದೆ.

ಈ ಬಗ್ಗೆ ವಿಚಾರಿಸಲಾಗಿ ಇವರುಗಳು ಅರಸೀಕೆರೆ, ಜಾವಗಲ್ ನಲ್ಲಿ ನಾಲಾ ಕಾಮಗಾರಿಯ ಕೆಲಸಕ್ಕೆ ಆಗಮಿಸಿದ್ದು ಕಳೆದ 40 ದಿನಗಳಿಂದಲೂ ಊರಿಗೆ ತೆರಳಲು ಪ್ರಯತ್ನಿಸಿ ಪಾಸ್ ದೊರೆಯದೆ ಉಳಿದಿರುವುದಾಗಿ ತಿಳಿಸಿದ್ದಾರೆ.

ಇದೀಗ ಎಲ್ಲರೂ ಹೊರಟುಹೋಗಿ ನಾವಷ್ಟೇ ಉಳಿದಿದ್ದು ಕಡೆಯ ಪ್ರಯತ್ನವಾಗಿ ಇಂದು ಕೆಎಸ್ಆರ್ಟಿಸಿ ಬಸ್ ಮುಖಾಂತರ ಹಣ ಪಾವತಿಸಿ ಜಾವಗಲ್ ನಿಂದ ಹುಳಿಯಾರಿಗೆ ಬಂದಿರುವುದಾಗಿ ತಿಳಿಸಿದ್ದಾರೆ.

ಜಾವಗಲ್‌ನಲ್ಲಿ ಹಿರಿಯೂರಿಗೆ ತೆರಳಿದರೆ ಅಲ್ಲಿಂದ ಬಸ್ ಮುಖಾಂತರ ಜಾರ್ಖಂಡ್‌ಗೆ ತಲುಪಬಹುದು ಎಂದು ತಿಳಿಸಿದ್ದರಿಂದ ನಾವುಗಳು ಬಸ್ಸಿನಲ್ಲಿ ಹುಳಿಯಾರಿಗೆ ಇಂದು ಬಂದಿರುವುದಾಗಿ ತಿಳಿಸಿದರು.

ಹುಳಿಯಾರಿನಿಂದ ಹಿರಿಯೂರಿಗೆ ತಲುಪಲು ಯಾವುದೇ ವ್ಯವಸ್ಥೆ ಇಲ್ಲದಿದ್ದರಿಂದ ಲಾರಿ ಮುಖಾಂತರ ಹಿರಿಯೂರಿಗೆ ತಲುಪಲು ಮುಂದಾಗಿದ್ದಾಗಿ ತಿಳಿಸಿದರು.

ಸದ್ಯ 29 ಮಂದಿ ಹುಳಿಯಾರಿನ ಬಸ್ ನಿಲ್ದಾಣದಲ್ಲಿದ್ದು ಹುಳಿಯಾರು ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿ ಉಪಹಾರದ ವ್ಯವಸ್ಥೆ ಕಲ್ಪಿಸಿರುವುದಲ್ಲದೆ ಅವರುಗಳನ್ನು ಅವರ ಸ್ಥಳಕ್ಕೆ ಕಳುಹಿಸಲು ಮುಂದಾಗಿದ್ದಾರೆ

( *ಮಾಹಿತಿ: ನರೇಂದ್ರಬಾಬು- ಹುಳಿಯಾರು)*

Comment here