ತುಮಕೂರು ಲೈವ್

ಹೆಚ್ಚಿದ ಕೋವಿಡ್ ಸೋಂಕಿತರ ಸಂಖ್ಯೆ: ತುಮಕೂರಿಗೆ ಹೊಸ ಮಾರ್ಗ ಸೂಚಿ

ತುಮಕೂರು

ಕೋವಿಡ್ 19 ಪಾಸಿಟಿವ್ ಹೆಚ್ಚಾಗಿ ಕಂಡು ಬಂದ ಹಿನ್ನೆಲೆ ಜಿಲ್ಲಾ ಪೋಲಿಸ್ ವತಿಯಿಂದ ಜಿಲ್ಲೆಗೆ ಪ್ರವೇಶಿಸುವ ವಾಹನಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ. ತುಮಕೂರು ನಗರಕ್ಕೆ ಪ್ರವೇಶ ಕಲ್ಪಿಸುವ ರ ಅಸರಸ್ತೆಗಳಲ್ಲಿ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ. ನಗರದಿಂದ ಒಳಗೆ ಬರುವ-ಹೊರಗೆ ಹೋಗುವ ವಾಹನಗಳಿಗೆ ಮಾರ್ಗ ಸೂಚಿ ತಿಳಿಸಲಾಗಿದೆ. ಸಾರ್ವಜನಿಕರು ಅದನ್ನ ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಕೆ ವಂಶಿಕೃಷ್ಣ ತಿಳಿಸಿದ್ದಾರೆ.

ತುಮಕೂರು ನಗರದ ಒಳಗೆ ಸಂಚಾರ ಮಾಡುವ ವಾಹನಗಳಿಗೆ ಯಾವುದೇ ನಿಯಮಗಳಿಲ್ಲ.

ತುಮಕೂರು ನಗರಕ್ಕೆ ಹೊರಗಿನಿಂದ ಪ್ರವೇಶಿಸುವ ವಾಹನಗಳು ಈ ಮಾರ್ಗವನ್ನ ಅನುಸರಿಸಬೇಕು.

👉 ಬೆಂಗಳೂರು ಕಡೆಯಿಂದ ತುಮಕೂರು ನಗರದ ಒಳಗಡೆ ಬರುವ ಎಲ್ಲಾ ವಾಹನ ಸವಾರರು ಕ್ಯಾತ್ಸಂದ್ರ ಜಾಸ್ ಟೋಲ್ ಗೇಟ್ ನಿಂದ ಗುಬ್ಬಿ ರಿಂಗ್ ರಸ್ತೆ ಮೂಲಕವೇ ಪ್ರವೇಶಿಸತಕ್ಕದ್ದು.

👉 ಕ್ಯಾತ್ಸಂದ್ರ ಸಿಂ ಎಂ ಬಡಾವಣೆ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು ಮಾಜಿ ಎಂ ಎಲ್ ಎ ಕೆ ಎನ್ ರಾಜಣ್ಣ ರವರ ಮನೆಯ ಮುಂದಿನ ಸರ್ವಿಸ್ ರಸ್ತೆಯಿಂದ ಅಗ್ನನಿಶಾಮಕ ಠಾಣೆ ಮೂಲಕ ಬಟವಾಡಿ ಪ್ರವೇಶಿಸಿ ತುಮಕೂರು ನಗರಕ್ಕೆ ಬರಬಹುದು.

👉 ಬೆಂಗಳೂರು ಕಡೆಯಿಂದ ಗುಬ್ಬಿ ತಿಪಟೂರು ಚಿಕ್ಕನಾಯಕನಹಳ್ಳಿ ಶಿವಮೊಗ್ಗ ಕಡೆಗೆ ಹೋಗುವ ವಾಹನಗಳು ಕ್ಯಾತ್ಸಂದ್ರ ಜಾಸ್ ಟೋಲ್ ಗೇಟ್ ಬಳಿಯ ಗುಬ್ಬಿ ರಿಂಗ್ ರಸ್ತೆ ಮೂಲಕ ಹೋಗತಕ್ಕದ್ದು.

👉 ಮೈಸೂರು ಕುಣಿಗಲ್ ಕಡೆಯಿಂದ ಬರುವವರು ಕುಣಿಗಲ್ ಜಂಕ್ಷನ್ ಮೂಲಕ ತುಮಕೂರು ನಗರದ ಒಳಗಡೆ ಬರತಕ್ಕದ್ದು. ಗುಬ್ಬಿ-ತಿಪಟೂರು-ಚಿಕ್ಕನಾಯಕನಹಳ್ಳಿ-ಶಿವಮೊಗ್ಗ ಕಡೆಯಿಂದ ತುಮಕೂಉರ ನಗರದ ಒಳಗಡೆ ಬರುವವರು ಗುಬ್ಬರಿಂಗ್ ರಸ್ತೆ ಜಂಕ್ಷನ್ ಮೂಲಕ ಬರತಕ್ಕದ್ದು

👉 ಶಿರಾ-ಚಿತ್ರದುರ್ಗ-ದಾವಣಗೆರೆ ಕಡೆಗಳಿಂದ ಬರುವವರು ಲಿಂಗಾಪುರ ಅಂಡರ್-ಪಾಸ್ ಹಳೇ ಎನ್.ಹೆಚ್.4 ರಸ್ತೆ ಮೂಲಕ ಶಿರಾಗೇಟ್ ಗೆ ತಲುಪಬಹುದು.

👉 ಅಂತರಸನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಕೊರಟಗೆರೆ, ಮಧುಗಿರಿ ಕಡೆಯಿಂದ ಬರುವವರು ಶಿರಾಗೇಟ್ – ಅಂತರಸನಹಳ್ಳಿ ಅಂಡರ್ ಪಾಸ್ ಮೂಲಕ ಪ್ರವೇಶಿಸಬಹುದಾಗಿರುತ್ತದೆ

ಜಾಹಿರಾತು

ತುಮಕೂರು ನಗರದಿಂದ ಹೊರಗೆ ತೆರಳುವ ವಾಹನಗಳು.

👉 ಗುಬ್ಬಿ-ತಿಪಟೂರು-ಚಿಕ್ಕನಾಯಕನಹಳ್ಳಿ- ಶಿವಮೊಗ್ಗ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನ ಸವಾರರು ಗುಬ್ಬಿರಿಂಗ್ ರಸ್ತೆ ಜಂಕ್ಷನ್ – ರಿಂಗ್ ರಸ್ತೆ ಮೂಲಕ ಕ್ಯಾತ್ಸಂದ್ರ ಜಾಸ್ ಟೋಲ್ ಮೂಲಕ ಹೋಗತಕ್ಕದ್ದು

👉 ತುಮಕೂರು ನಗರದಿಂದ ಬೆಂಗಳೂರು ಕಡೆಗೆ ಹೋಗುವವರು ಬಟವಾಡು ಬ್ರಿಡ್ಜ್ ಮೂಲಕ ರಾಷ್ಟ್ರೀಯ ಹೆದ್ದಾರಿ 48 ರ ಮೂಲಕ ಮತ್ತು ಗುಬ್ಬಿ ರಿಂಗ್ ರಸ್ತೆ ಮೂಲಕ ಹೋಗಬಹುದಾಗಿದೆ.

👉 ತುಮಕೂರು ನಗರದಿಂದ ಶಿರಾ ಕಡೆಗೆ ಮತ್ತು ವಸಂತನರಸಾಪುರ ಕಡೆಗೆ ಹೋಗುವವರು ಶಿರಾಗೇಟ್ ಮೂಲಕ ಶ್ರೀದೇವಿ ಮೆಡಿಕಲ್ ಕಾಲೇಜಿನ ಮುಂದಿನ ಹಳೆ ಎನ್.ಹೆಚ್.4 ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ – 48 ರಸ್ತೆಯಲ್ಲಿ ಹೋಗಬಹುದು.

👉 ಅಂತರಸನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಕೊರಟಗೆರೆ, ಮಧುಗಿರಿ ಕಡೆಗೆ ಹೋಗುವವರು ಶಿರಾಗೇಟ್ – ಅಂತರಸನಹಳ್ಳಿ ಅಂಡರ್ ಪಾಸ್ ಮೂಲಕ ಹೋಗಬಹುದಾಗಿರುತ್ತದೆ.

ಎಲ್ಲಾ ವಾಹನ ಸವಾರರು ಈ ಹೊಸ ಮಾರ್ಗ ಸೂಚಿಯನ್ನ ಅನುಸರಿಸಿ ಕೋವಿಡ್ 19 ತಡೆಗಟ್ಟಲು ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮನವಿ ಮಾಡಿದ್ದಾರೆ.

Comment here