ತುಮಕೂರು ಲೈವ್

ಹೇಗಿದ್ದ ಬಾವಿ ಹೇಗಾಯಿತು ಗೊತ್ತಾ…!

ಹೀಗಿತ್ತು ನೋಡಿ ಕುಡಿಯುವ ಸಿಹಿ ನೀರಿನ ಬಾವಿ.

Publicstory. in


ತುಮಕೂರು: ಮನಸಿದ್ದರೆ ಮಾರ್ಗ ಎಂಬುದು ಹಳೆಯ ಗಾದೆ. ಅದೇ ರೀತಿ ಸುಧಾರಕರು ಆಕಾಶದಿಂದ ಇಳಿದು ಬರುವುದಿಲ್ಲ, ನಮ್ಮೊಳಗೊಬ್ಬ ಇದ್ದೇ ಇರುತ್ತಾನೆ ಎಂಬ ಮಾತಿದೆ.

ಬೆಳಗುಂಬದ ಕಾಲನಿಯ ಜ‌ನರಿಗೆ ಈ ಎರಡು ಮಾತುಗಳು ಅಕ್ಷರಶಃ ಅನ್ವಯಿಸುತ್ತವೆ.

ದಶಕಗಳಿಂದ ಈ ಬಾವಿಯ ಕಡೆ ಯಾರೂ ತಿರುಗಿ ನೋಡಿರಲಿಲ್ಲ. ನೀರಿದ್ದರೂ ಬಾವಿ ಸುತ್ತ ಮರ, ಗಿಡಗಂಟೆ ಬೆಳೆದು ಹಾಳು ಸುರಿದಿತ್ತು. ಇತ್ತ ಬೆಳಗುಂಬ ಕಾಲನಿ ಜನರಿಗೆ ಕುಡಿಯುವ ನೀರಿಲ್ಲದೇ ಪರಿತಪಿಸುತ್ತಿದ್ದರು.

ಹೀಗಾಯಿತು ನೋಡಿ‌ ಬಾವಿ

ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ ಗಮನಕ್ಕೆ ಬರುತ್ತಿದ್ದಂತೆ ಬಾವಿ ಪುನರುಜ್ಜೀವನ ಮಾಡಿ ನೀರು ಕೊಡುವ ಕನಸು ಕಂಡರು.

ಇದನ್ನು ಓದಿ. http://publicstory.in/ಈ-ಬಾವಿಗೆ-ಸೋಮವಾರ ಸಿಗಲಿದೆಯೇ ಮುಕ್ತಿ

ಕರೊನಾ, ಲಾಕ್ ಡೌನ್ ನಡುವೆಯೂ ಸೋಮವಾರ ತಮ್ಮ ಸ್ನೇಹಿತರ ತಂಡದೊಂದಿಗೆ ಬಾವಿಯ ಸ್ವಚ್ಛತೆ ಕೈಗೊಂಡರು. ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಕಟ್ಟಿಕೊಂಡ ಹುಡುಗರ ತಂಡ ಬಾವಿಯ ಸುತ್ತ ಬೆಳೆದಿದ್ದ ಗಿಡಗಂಟೆ, ಮರ ಗಿಡ ಕಡಿದು ಬಾವಿಯ ಅಂದ ಇಮ್ಮುಡಿಗೊಳಿಸಿದ್ದಾರೆ.

ಬಾವಿ ಸ್ವಚ್ಛಗೊಳಿಸಿದ ಯುವಕರ ತಂಡ

ಬಾವಿಯಲ್ಲಿ ಹೂಳು ತೆಗೆಯುವ ಕೆಲಸ ಇದ್ದು, ಈ ಕೆಲಸ ಮಾಡಲು ಜಿಲ್ಲಾಡಳಿತ, ಪೊಲೀಸರು ಅವಕಾಶ ನೀಡಬೇಕಾಗಿದೆ. ಬಾವಿಯ ಹೂಳು ತೆಗೆದ ಬಳಿಕ ಶಾಸಕ ಗೌರಿಶಂಕರ್ ಅವರ ನೆರವಿನಲ್ಲಿ ಬಾವಿಗೆ ಪಂಪು, ಮೋಟರ್ ಬಿಟ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬೆಳಗುಂಬ ವೆಂಕಟೇಶ್ ಪಬ್ಲಿಕ್ ಸ್ಟೋರಿ. ಇ‌ನ್ ಗೆ ತಿಳಿಸಿದರು.

ಮೇ 3ರ ನಂತರ ಲಾಕ್ ಡೌನ್ ಮುಗಿದ ಬಳಿಕ ಉಳಿದ ಕೆಲಸ ಮಾಡಲಾಗುವುದು ಎಂದರು.

Comments (1)

  1. ಒಳ್ಳೆ ಸುದ್ದಿ…

Comment here