ತುಮಕೂರು ಲೈವ್

ವಿದ್ಯುತ್ ಹರಿದು ರೈತ ಸಾವು

ತುಮಕೂರು: ವಿದ್ಯುತ್  ಹರಿದು ಪಾವಗಡ ತಾಲ್ಲೂಕಿನ ವಡ್ಡರಹಟ್ಟಿ ಗುಂಡು ತೋಪು ಬಳಿ ಶನಿವಾರ ಸಂಜೆ ರೈತರೊಬ್ಬರು ಮೃತಪಟ್ಟಿದ್ದಾರೆ.
ಗಂಗಪ್ಪ(60) ಮೃತರು.  “ಸಾಲದ ಹೊರೆ ಹೆಚ್ಚಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಬ್ಯಾಡನೂರು ಗ್ರಾಮದಲ್ಲಿ 2 ಎಕರೆ ಜಮೀನಿದೆ.   ಬ್ಯಾಂಕಿನಲ್ಲಿ 1.78 ಲಕ್ಷ ಹಾಗೂ ಕೈ ಸಾಲ ಇದೆ. ಸಾಲ ಜಾಸ್ತಿ ಇದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಸಾಲ ತೀರಿಸಲು ಆಗುತ್ತಿಲ್ಲ ಎಲ್ಲಿಯಾದರೂ ಹೋಗಿ ಸಾಯಬೇಕೆನ್ನಿಸುತ್ತಿದೆ ಎಂದು ಮನೆಯಲ್ಲಿ ಆಗಾಗ ಹೇಳುತ್ತಿದ್ದರು”.  ಎಂದು ಮೃತರ ಮಗ ರಾಮಾಂಜಿನಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Comment here