ತುಮಕೂರು ಲೈವ್

ಸೊಳ್ಳೆ ಸಾಕಿದವರಿಗೆ ದಂಡ

ಸೊಳ್ಳೆ ಉತ್ಪತ್ತಿ ತಾಣಗಳು: ದಂಡ ವಿಧಿಸಲು ಪಾಲಿಕೆ ನಿರ್ಧಾರ
ತುಮಕೂರು :

ಮೇ 20 ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಖಾಲಿ ನಿವೇಶನಗಳು ಅಥವಾ ಕಟ್ಟಡಗಳು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಕಂಡು ಬಂದಲ್ಲಿ ತುಮಕೂರು ಮಹಾನಗರ ಪಾಲಿಕೆಯ ನಿಯೋಜಿತ ಸಿಬ್ಬಂದಿ ದಂಡ
ವಿಧಿಸುವ ಬಗ್ಗೆ ನಗರದ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕರೆಯಲಾಗಿದೆ.


ವಸತಿ ಕಟ್ಟಡ ರೂ.500, ವಾಣಿಜ್ಯ ಕಟ್ಟಡ ರೂ. 5000, ನಿರ್ಮಾಣ ಹಂತದ ಕಟ್ಟಡ ರೂ. 15000, ವಸತಿ ಬಹುಮಹಡಿ ಕಟ್ಟಡ/
ಅಪಾರ್ಟ್ಮೆಟ್ ರೂ.20000,

ಬಳಕೆಯಾಗದ/ ಭಾಗಶಃ ಕೆಡವಲಾದ ಕಟ್ಟಡ ರೂ.5000, ಇತರೆ ವರ್ಗ ರೂ.500 ಗಳ ದಂಡವನ್ನು ವಿಧಿಸಲು ಉದ್ದೇಶಿಸಲಾಗಿರುತ್ತದೆ.


ಸದರಿ ದಂಡವನ್ನು ವಿಧಿಸುವ ಕುರಿತು ಯಾವುದೇ ರೀತಿಯ ಆಕ್ಷೇಪಣೆಗಳಿದ್ದಲ್ಲಿ ಜೂನ್ 1, 2022ರ ಸಾಯಂಕಾಲ 4
ಗಂಟೆಯೊಳಗೆ ತಮ್ಮ ಪೂರ್ಣ ವಿಳಾಸ ಹಾಗೂ ಸಂಬಂಧಪಟ್ಟ ದಾಖಲೆಯೊಂದಿಗೆ ಆಕ್ಷೇಪಣೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ.

Comment here