ತುಮಕೂರು ಲೈವ್

ಆಟೋ ಚಾಲಕರಿಗೆ ಡಿ ಎಲ್ ವಿತರಣೆ

ಪಾವಗಡ: ಕಾನೂನು ಸುವ್ಯವಸ್ಥೆ ಕಾಪಾಡಲು ಆಟೋ ಚಾಲಕರು ಪೊಲೀಸರಿಗೆ ಸಹಕರಿಸಬೇಕು ಎಂದು ಡಿ ವೈ ಎಸ್ ಪಿ ಕೆ.ಜಿ.ರಾಮಕೃಷ್ಣ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಪೊಲೀಸ್ ಇಲಾಖೆ, ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಆಯೋಜಿಸಿದ್ದ ಚಾಲನಾ ಪರವಾನಗಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆ ವತಿಯಿಂದ  ಪಟ್ಟಣದಲ್ಲಿ ಆಟೋ ದಾಖಲಾತಿಗಳ ನವೀಕರಣ   ಶಿಬಿರ  ಏರ್ಪಡಿಸಲು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಚಾಲಕರು ಅಸಹಾಯಕರ ಬಗ್ಗೆ ಕಾಳಜಿ ತೋರಿ ಮಾನವೀಯತೆ ಮೆರೆಯಬೇಕು. ದುಡಿಮೆ ಜೊತೆ ಜೊತೆಗೆ ಸೇವೆಯನ್ನೂ ಮೈಗೂಡಿಸಿಕೊಳ್ಳಬೇಕು ಎಂದರು.

ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್,  ಪಟ್ಟಣದ ಆಟೋ ನಿಲ್ದಾಣಗಳ ಬಳಿ    ಬ್ಯಾರಿಕೇಡ್ ಅಳವಡಿಸಿ ಸರದಿಯಂತೆ ಬಾಡಿಗೆಗೆ ಹೋಗುವ ವ್ಯವಸ್ಥೆ ಮಾಡಲಾಗುವುದು.   ಆಟೋ ಚಾಲಕರು ಖಡ್ಡಾಯವಾಗಿ ದಾಖಲಾತಿಗಳನ್ನು ಹೊಂದಿರಬೇಕು. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದರು.

ನೇರಳಕುಂಟೆ ನಾಗೇಂದ್ರಕುಮಾರ್, ಕೋವಿಡ್ ಲಾಕ್ ಡೌನ್ ವೇಳೆಯಲ್ಲಿ   ಕಷ್ಟದಲ್ಲಿದ್ದರೂ ಸಹ ಚಾಲಕರ ಸಂಘದ ವತಿಯಿಂದ ಬಡ ಜನತೆಗೆ, ಅಗತ್ಯವಿರುವವರಿಗೆ ಆಹಾರ ವಿತರಿಸಿರುವುದು ಶ್ಲಾಘನೀಯ. ವಾಲ್ಮೀಕಿ ಆಟೋ ನಿಲ್ದಾಣಕ್ಕೆ ಬ್ಯಾರಿಕೇಡ್ ಅಳವಡಿಸಿ ಕೊಡುವುದಾಗಿ ತಿಳಿಸಿದರು.

ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್,  ರೋಟರಿ ಸಂಸ್ಥೆ  ಅಧ್ಯಕ್ಷ ಶ್ರೀಧರ್ ಗುಪ್ತ,  ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.

Comment here