ತುಮಕೂರು ಲೈವ್

30 ಲಕ್ಷ ಕಳ್ಳತನ: FIR ದಾಖಲಿಸದ JAyANAGR PSI ಅಮಾನತು

ತುಮಕೂರು:- ಗಂಭೀರ ಕಳ್ಳತನ ಪ್ರಕರಣದ ದೂರು ದಾಖಲಿಸದೆ ಬೇಜವಾಬ್ದಾರಿ ತೋರಿದ ಕಾರಣ ಜಯನಗರ ಠಾಣೆ ಪಿಎಸ್ಐ ಮುತ್ತುರಾಜ್ ಅವರನ್ನು ಜಿಲ್ಲಾ ರಕ್ಷಣಾಧಿಕಾರಿ ಕೋನವಂಶಿ ಕೃಷ್ಣ ಸೇವೆಯಿಂದ ಅಮಾನತ್ತು ಮಾಡಿದ್ದಾರೆ.

ತುಮಕೂರು ನಗರದ ಬನಶಂಕರಿಯ ಶಿಲ್ಪ ಜೂಯಲರಿ ಮಾಲೀಕ ಟಿ ಪಿ ನಾಗರಾಜು ನ.16 ರಂದು ಜೂವೆಲರಿ ಅಂಗಡಿ ಕೆಲಸ ಮುಗಿಸಿ ಬಾಗಿಲು ಹಾಕುವ ವೇಳೆ 30 ಲಕ್ಷ ಬೆಳೆಬಾಳುವ ಚಿನ್ನಬೆಳ್ಳಿ ಆಭರಣವಿದ್ದ ಕೈಚೀಲವನ್ನು ಕಳ್ಳರು ಗಮನ ಬೇರೆಡೆ ಸೆಳೆದು ದೋಚಿದ್ದರು.

ನ.17 ರಂದು ಟಿ ‌.ಪಿ.ನಾಗರಾಜು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪಿಎಸ್ಐ ದೂರು ದಾಖಲಿಸಲು ನಿರಾಕರಿಸಿದ್ದರು.
ಅಂಗಡಿ ಮಾಲೀಕ ಟಿ.ಪಿ ನಾಗರಾಜು ಜ.29 ರಂದು ವಸ್ತುಸ್ತಿತಿ ವಿವರಿಸಿ ಜಯನಗರ ಠಾಣೆ ಪಿಎಸ್ಐ ದೂರು ದಾಖಲಿಸಲು ನಿರ್ಲಕ್ಷ ತೋರಿದ್ದ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ದೂರುದಾರ ನೀಡಿದ ಅರ್ಜಿ ಪರಾಮರ್ಶಿಸಿದ ವರಿಷ್ಟಾಧಿಕಾರಿಗಳು ಈ ಪ್ರಕರಣ ಗಂಭೀರ ಪ್ರಕರಣವಾಗಿದ್ದರೂ ದೂರು ದಾಖಲಿಸದೆ ಅತೀವ ನಿರ್ಲಕ್ಷತೆ ಹಾಗು ಬೇಜವಾಬ್ದಾರಿ ತೋರಿರುವುದು ಮೇಲ್ನೋಟಕ್ಕೆ ಸಾಭೀತಾಗಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಪಿಎಸ್ಐ ಮುತ್ತುರಾಜ್ ಅವರನ್ನು ಅಮಾನತ್ತು ಮಾಡಿದ್ದಾರೆ.

Comment here