ತುಮಕೂರು ಲೈವ್

ಅರಿವಿನ ಪಯಣದಲ್ಲಿ ಇಂದಿರಾ ನೆನಪು…

Publicstory


Tumkuru: ವಿದ್ಯೆಗೂ ಜ್ಞಾನ ಕ್ಕೂ ಸಂಬಂಧವಿಲ್ಲ. ಸಾಹಿತಿ ಎಂ.ಕೆ.ಇಂದಿರಾ ಅವರ ತಾಯಿ ಸುಭದ್ರ ಕಲ್ಯಾಣ ಎಂಬ ಕೃತಿಯನ್ನು ರಚಿಸಿದ್ದರು ಎಂದು ಸಾಹಿತಿ ಎಂ ಸಿ ಲಲಿತಾ ಹೇಳಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖಾ ತುಮಕೂರು, ಕೇಂದ್ರ ಗ್ರಂಥಾಲಯ ತುಮಕೂರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಮಾಸಿಕ ಕಾರ್ಯಕ್ರಮ ಅರಿವಿನ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಎಂ.ಕೆ.ಇಂದಿರಾ ಕುರಿತು ಮಾತನಾಡಿದರು.

ಎಂ ಕೆ ಇಂದಿರಾ ಅವರ ಕಾದಂಬರಿಗಳು ಬಾಲ್ಯ ವಿವಾಹ, ವಿಧವಾ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಅಂದಿನ ಸಾಮಾಜಿಕ ಪರಿಧಿಯಲ್ಲಿ ಅವರಿಗೆ ಇದ್ದ ಸೀಮಿತ ಅವಕಾಶಗಳ ನಡುವೆ ಪ್ರತಿಭಟಿಸಿರುವುದು ನಿಜವಾದ ಪ್ರತಿಭಟನೆ ಇದೆ ಎಂದರು.

ದಾಕ್ಷಾಯಿಣಿ ಪಾತ್ರದ ಮೂಲಕ ಪ್ರತಿಭಟನೆಯನ್ನು ನೋಡಬಹುದು. ಅಂದಿಗೆ ಎಲ್ಲರ ವಿರೋಧದ ನಡುವೆ ಅನ್ಯಜಾತಿಯ ಮಹಿಳೆಗೆ ಹೆರಿಗೆ ಮಾಡಿಸುವ ಮೂಲಕ ಪ್ರತಿಭಟಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ವೇಶ್ಯೆ ವೃತ್ತಿಯ ಮೇಲೆ ಇವರ ಗೆಜ್ಜೆಪೂಜೆ ಬೆಳಕು ಚೆಲ್ಲುತ್ತದೆ ಎಂದರು.

ಮಲ್ಲಿಕಾಬಸವರಾಜು ಅಧ್ಯಕ್ಷತೆಯನ್ನು ವಹಿಸಿದ್ದರು, ಸುಗುಣಾದೇವಿ, ಡಾ ಅರುಂಧತಿ, ಗ್ರಂಥಪಾಲಕಿ ಪುಷ್ಪ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

Comment here