ತುಮಕೂರು ಲೈವ್

ಸಿಟಿಜನ್ ಜತೆಗೆ ನೆಟ್ ಜನ್ ಆಗಬೇಕು:ಜಿ.ಎನ್.ಮೋಹನ್

ತುಮಕೂರು: ಜನರು ಈಗ ಸಿಟಿಜನ್ ಜತೆಗೆ ನೆಟಿಜನ್ ಕೂಡ ಆಗಬೇಕಾಗಿದೆ ಎಂದು ಖ್ಯಾತ ಪತ್ರಕರ್ತ ಜಿ.ಎನ್.ಮೋಹನ್ ಹೇಳಿದರು.
ನಗರದ ಸಿದ್ದಾರ್ಥ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಲೇಖಕಿಯರ ಸಂಘ, ಅವಧಿ ಅಂತರ್ಜಾಲ ಪತ್ರಿಕೆಯು ಮಹಿಳಾ ಲೇಖಕಿಯರಿಗಾಗಿ ಆಯೋಜಿಸಿದ್ದ ಇಂಟರ್ ನೆಟ್ ಸುರಕ್ಷಿತ ಬಳಕೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ನೆಟ್ ಎಲ್ಲರಿಗೂ ಅಗತ್ಯ. ಆದರೆ ಸುರಕ್ಷತೆ ಕಡೆಗೆ ಹೆಚ್ಚಾಗಿ ಗಮನ ಕೊಡಬೇಕು ಎಂದರು.

ಅವಧಿ ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಿದಾಗ ಅನೇಕರು ಹುಬ್ಬೇರಿಸಿದ್ದರು. ಹದಿನೈದು ವರ್ಷದಿಂದ ಅವಧಿ ನಡೆಯುತ್ತಿದೆ. ಮಾಧ್ಯಮ ಅಕಾಡೆಮಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ಅಂತರ್ಜಾಲ ಪತ್ರಿಕೆ ಎಂಬ ಹೆಗ್ಗಳಿಕೆ ಪಡೆದಿದೆ ಎಂದರು.

ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರು ಎರಡು ಇಂಡಿಯಾ ಇದೆ ಎನ್ನುತ್ತಾರೆ.‌ಒಂದು ಐಪಿಎಲ್, ಇನ್ನೊಂದು ಬಿಪಿಎಲ್ ಇಂಡಿಯಾ. ಎರಡೂ ಇಂಡಿಯಾಗಳಿಗೂ ಇಂಟರ್ ನೆಟ್ ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕೋವಿಡ್ ಗೆ ಮಹಾಮಾರಿ ಹೆಮ್ಮಾರಿ ಎಂದು ಬಳಸಬೇಡಿ ಎಂದು ಕಾರ್ಯಾಗಾರ ಉದ್ಘಾಟಿಸಿದ ಶಾಂತಲಾ ಧರ್ಮರಾಜ್ ಅಭಿಪ್ರಾಯಪಟ್ಟರು.


ಅವಧಿ ಹಾಗೂ ಬಹುರೂಪಿ ಬುಕ್ ಹಬ್ ಸಂಸ್ಥಾಪಕಿ ಶ್ರೀಜಾ ವಿ.ಎನ್. , ಲೇಖಕ ಮಧು ವೈ.ಎನ್ ಅವರು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಮಹತ್ವದ ವಿವರ ನೀಡಿದರು.

ಸಿದ್ಧಾರ್ಥ ಮಾಧ್ಯಮ ಅಕಾಡೆಮಿ ನಿರ್ದೇಶಕ ಬಿ.ಟಿ.ಮುದ್ದೇಶ್, ಪ್ರಾಂಶುಪಾಲ ರವಿ ಪ್ರಕಾಶ್, ಲೇಖಕಿಯರ ಸಂಘದ ಮಲ್ಲಿಕಾ ಬಸವರಾಜು, ಡಾ. ಅರುಂಧತಿ ಇತರರು ಇದ್ದರು.
ಹಿರಿಯ ಪತ್ರಕರ್ತ ಶಿವಾಜಿ ಗಣೇಶನ್, ಲೇಖಕಿ ಇಂದಿರಾ ಸಿ.ಎ. , ರಾಣಿ ಚಂದ್ರಶೇಖರ್, ಮರಿಯಂ, ಡಾ. ಪ್ರಿಯಾಂಕ ಇತರರು ಇದ್ದರು.

Comment here