ಜನಮನರಾಜ್ಯ

ಶಾಸಕ‌ ಜ್ಯೋತಿಗಣೇಶ್ ಎದುರಲ್ಲೇ ತಾರತಮ್ಯದ ಬಗ್ಗೆ ದನಿ ಎತ್ತಿದ ಕಾರ್ಪೋರೇಟರ್ ಮಂಜುನಾಥ್

ತುಮಕೂರು: ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳಿಗೆ ರಾಜ್ಯ ಬಜೆಟ್ ನಲ್ಲಾಗಿರುವ ತಾರತಮ್ಯ ನೀತಿಯನ್ನು ಶಾಸಕ ಜ್ಯೋತಿ ಗಣೇಶ್ ಖಂಡಿಸಿಲ್ಲ ಎಂದು ಕಾರ್ಪೋರೇಟರ್ HDK ಮಂಜುನಾಥ್ ಜ್ಯೋತಿಗಣೇಶ್ ಅವರಿಗೆ ವೇದಿಕೆಯಲ್ಲೇ ಹೇಳಿದರು.

ತುಮಕೂರು ಮಹಾನಗರದ ಪೂಜ್ಯ ಮಹಾಪೌರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ತುಮಕೂರು ನಗರದ ಮರಳೂರು ಗ್ರಾಮದಲ್ಲಿ ಮರಳೂರು ಹಿತರಕ್ಷಣಾ ಸಮಿತಿ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ನಗರ ಶಾಸಕರಾದ ಜ್ಯೊತಿ ಗಣೇಶ್, ಸಹಕಾರಿ ರತ್ನ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಾಜಿ ಶಾಸಕರಾದ ಕೆ.ಎನ್ ರಾಜಣ್ಣ, ಉಪಮಹಾಪೌರರಾದ ನಾಜೀಮಾ ಬೀ, ಕಾರ್ಪೋರೇಟರ್ ಧರಣೇಂದ್ರ ಕುಮಾರ ಭಾಗವಹಿಸಿದ್ದರು.

ಸಮಾರಂಭದ ಸಭೆಯಲ್ಲಿ ಅಭಿನಂಧನಾ ನುಡಿಗಳನ್ನೇಳಿದ ಕಾರ್ಪೋರೇಟರ್ HDK ಮಂಜುನಾಥ್ ಶಾಸಕರಾದ ಜ್ಯೊತಿ ಗಣೇಶ್ ರವರು ತಳಸಮುದಾಯದ ಮೇಲೆ ಅತ್ಯಂತ ಪ್ರೀತಿ & ಕಾಳಜಿ ಹೊಂದಿದ್ದಾರೆ ಆಗಾಗಿ ಪ್ರತಿಯೊಂದು ತಳಸಮುದಾಯ ಕಾರ್ಯಕ್ರಮಗಳಿಗೆ & ಅವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಹಾಗೇಯೇ ಬಿಜೆಪಿ ಸರ್ಕಾರದ ಅವಿಭಾಜ್ಯ ಅಂಗವಾಗಿರುವ ಶಾಸಕರು ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳಿಗಾಗಿರುವ ತಾರತಮ್ಯ ನೀತಿಯನ್ನು ಖಂಡಿಸಬೇಕಿತ್ತು & ನಾನಂತೂ ಈ ನೀತಿಯನ್ನು ಖಡಖಂಡಿತವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಈ ಅಭಿನಂಧನಾ ಸಮಾರಂಭದಲ್ಲಿ ಮಹಾಪೌರರಿಗೆ ಅರ್ಥಪೂರ್ಣವಾಗಿ ಶಾಸಕರು ಅಭಿನಂಧನೆ ಸಲ್ಲಿಸಬೇಕಾದರೇ, ಮೊನ್ನೆಯ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳಿಗಾಗಿರುವ ತಾರತಮ್ಯ ನೀತಿಯನ್ನು ಶಾಸಕರಾದ ಜ್ಯೊತಿಗಣೇಶ್ ರವರು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ & ಸರಿಯಾದ ಪ್ರಮಾಣದಲ್ಲಿ ಹಣ ಮೀಸಲಿರಿಸುವ ಮೂಲಕ ಅಭಿನಂದನೆ ಸಲ್ಲಿಸಬೇಕೆಂದು ತಾಕೀತು ಮಾಡಿದರು.

ಶಾಸಕರ ಸಾಮಾಜಿಕ ನ್ಯಾಯದ ಹಾದಿಯನ್ನು ನೋಡುತ್ತೇವೆ. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ನಗರದ ತಳ ಸಮುದಾಯಗಳನ್ನು ಸೇರಿಸಿ ಸರ್ಕಾರದ ವಿರುದ್ಧ ನಮ್ಮ ಪಾಲಿಗಾಗಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಪ್ರತಿಭಟಿಸಬೇಕಾಗುವುದು ಎಂದು ಎಚ್ಚರಿಸಿದರು. ಈ ಪ್ರತಿಭಟನೆಗೆ ಸನ್ಮಾನ್ಯ ಕೆ. ಎನ್ ರಾಜಣ್ಣನವರನ್ನು ಸೇರಿದಂತೆ ತಳಸಮುದಾಯದ ನಾಯಕರನ್ನು ಹೋರಾಟಕ್ಕೆ ಆಹ್ವಾನಿಸಿದರು.

Comment here