Publicstory
ತುಮಕೂರು: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 67 ಕೋವಿಡ್ ರೋಗಿಗಳು ಗುಣಮುಖರಾಗಿ ಮನೆಗೆ ಮರುಳಿದರು. ಆದರೆ ಮತ್ತೇ 92 ಹೊಸ ಪ್ರಕರಣಗಳು ದೃಢಪಟ್ಟಿವೆ.
ಗುಣಮುಖರಾಗುವವರಿಗಿಂತ ಸೋಂಕು ತಗುತ್ತಿರುವವರ ಸಂಖ್ಯೆಯೇ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ತುಮಕೂರು ಅತಿ ಹೆಚ್ಚು ಕೋವಿಡ್ ಪೀಡಿತರು ಹೊಂದಿರುವ ತಾಲ್ಲೂಕು ಆಗಿದೆ.
ಒಟ್ಟಾರೆ 3211 ಮಂದಿ ಕೋವಿಡ್ ರೋಗಿಗಳಲ್ಲಿ 1220 ಮಂದಿ ತುಮಕೂರಿನವರೇ ಆಗಿದ್ದಾರೆ. ತುಮಕೂರು ನಗರದ ಜನರು ಹೆಚ್ಚು ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಅಗತ್ಯವಿದೆ.
ತುಮಕೂರು ಜಿಲ್ಲೆಯಲ್ಲಿಂದು 92 ಕೊವೀಡ್ 19 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 3211 ಕ್ಕೆ ಏರಿಕೆಯಾಗಿದೆ ಎಂದು ಡಿಹೆಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.
ಈ ದಿನವೂ ತಿಪಟೂರು, ಕುಣಿಗಲ್, ತುಮಕೂರು, ಪಾವಗಡ ತಾಲ್ಲೂಕಿನಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.
Comment here