ಪೊಲಿಟಿಕಲ್

ಒಕ್ಕಲಿಗರ ಸಂಘದ ಚುನಾವಣೆ: ಏರುತ್ತಿದೆ ಚುನಾವಣಾ ಕಾವು

ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಗರಿ ಗೆದರಿದೆ ತುಮಕೂರು ಜಿಲ್ಲೆಯಿಂದ ಇಬ್ಬರು ನಿರ್ದೇಶಕರನ್ನು ಸಮೂದಾಯದ ಜನರು ಆಯ್ಕೆ ಮಾಡಬೇಕಾಗಿದೆ . ಈಗಲೇ ಚುನಾವಣಾ ಕಾವು ಏರ ತೊಡಗಿದೆ.


ಕೊರೊನಾ ಕಾರಣದಿಂದಾಗಿ ಚುನಾವಣೆಯನ್ನು ಮುಂದೂಡಲಾಗಿದೆ.‌ಬಹುತೇಕ ನವೆಂಬರ್ ಡಿಸೆಂಬರ್ ನಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ

ಈ ಹಿಂದಿನ ಚುನಾವಣೆಯಲ್ಲಿ

ಶಶಿಕಿರಣ್ ಮತ್ತು ನರೇಂದ್ರ ಬಾಬು ಗೆಲುವು ಸಾಧಿಸಿದ್ದರು. ಆದರೆ ಈ ಸಲದ ಚುನಾವಣೆಯಲ್ಲಿ ಇಬ್ಬರು ಕೂಡ ಸ್ಪರ್ಧಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಹೊಸ ಮುಖಗಳಿಗೆ ಅವಕಾಶ ಸಿಗಲಿದೆ.

ಚುನಾವಣೆ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಈಗಾಗಲೇ ಮತ ಕೇಳಲು ಮತದಾರರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಸಮುದಾಯದ ಮುಖಂಡರನ್ನು ಜೊತೆ ಸೇರಿಸಿಕೊಂಡು ಸಭೆಗಳನ್ನು ನಡೆಸುತ್ತಿದ್ದಾರೆ . ಮತಗಳಿಕೆಯ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ.

ಜಿಲ್ಲೆಯ ಎಲ್ಲ ಹನ್ನೊಂದು ವಿಧಾನಸಭಾ ವಿಧಾನ ಸಭಾಕ್ಷೇತ್ರಗಳಲ್ಲೂ ಒಕ್ಕಲಿಗರ ಮತಗಳಿವೆ. ವಿಶೇಷವಾಗಿದೆ. ಹೀಗಾಗಿ ಆಯಾ ಕ್ಷೇತ್ರದ ಶಾಸಕರನ್ನು, ಅವರ ಬೆಂಬಲವನ್ನು ಪಡೆಯಲು ಆಕಾಂಕ್ಷಿಗಳು ಪ್ರಯತ್ನ ನಡೆಸುತ್ತಿದ್ದಾರೆ

ಬೆಳ್ಳಿ ಲೋಕೇಶ್

ಈ ಸಲದ ಚುನಾವಣೆಯಲ್ಲಿ ಬೆಳ್ಳಿ ಲೋಕೇಶ್,

ಹನುಮಂತರಾಯಪ್ಪ, ಮಾಜಿ ಶಾಸಕ ಬಿ.ನಾಗರಾಜಯ್ಯ ಅವರ ಮಗ ಲೋಕೇಶ್, ಸುಜಾತಾ ನಂಜೇಗೌಡ ಇವರ ಹೆಸರುಗಳು ಕೇಳಿಬರುತ್ತಿವೆ .


ಜಿಲ್ಲೆಯಲ್ಲಿ ಒಟ್ಟು ಮೂವತ್ತು ಸಾವಿರಕ್ಕೂ ಅಧಿಕ ಮತದಾರರಿದ್ದು ಕುಣಿಗಲ್ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತದಾರರಿದ್ದಾರೆ .

ಹನುಮಂತರಾಯಪ್ಪ


ಕುಣಿಗಲ್ ತಾಲ್ಲೂಕಿನಲ್ಲಿ 9ಸಾವಿರದ ಎಂಟುನೂರು, ತುರುವೇಕೆರೆಯಲ್ಲಿ 5ಸಾವಿರದ ಐನೂರು, ತುಮಕೂರು ತಾಲ್ಲೂಕಿನಲ್ಲಿ 7ಸಾವಿರದ ಏಳು ನೂರು, ತಿಪಟೂರಿನಲ್ಲಿ ಸಾವಿರದ ಏಳು ನೂರು, ಗುಬ್ಬಿಯಲ್ಲಿ ಸಾವಿರದ ಎಂಟು ನೂರು, ಕೊರಟಗೆರೆಯಲ್ಲಿ ಸಾವಿರದ ಐನೂರು, ಮಧುಗಿರಿಯಲ್ಲಿ ಸಾವಿರದ ಏಳು ನೂರು, ಪಾವಗಡದಲ್ಲಿ ನೂರೈವತ್ತು , ಚಿಕ್ಕನಾಯಕನಹಳ್ಳಿಗೆ ಮುನ್ನೂರೈವತ್ತು ಶಿರಾದಲ್ಲಿ ಎಂಟು ನೂರ ಐವತ್ತು ಮತದಾರರು ಇದ್ದಾರೆ.

ಈ ಸಲದ ಚುನಾವಣೆಯಲ್ಲಿ ಕುಣಿಗಲ್ ತಾಲ್ಲೂಕಿನ ಮತದಾರರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ತುರುವೇಕೆರೆ ತಾಲ್ಲೂಕಿನ ಮತದಾರರು. ತುರುವೇಕೆರೆಯಲ್ಲಿ ಯಾರ ಕಡೆ ಮುಖ ಮಾಡುತ್ತಾರೆ ಎಂಬುದು ಕೂಡ ಮುಖ್ಯವಾಗಿದೆ.


ಹನುಮಂತರಾಯಪ್ಪ ಅವರು ಕಳೆದ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋತಿದ್ದರು. ಈ ಈ ಸಲ ಅವರು ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು ಮತದಾರರು ಏನು ಮಾಡುತ್ತಾರೆ ಎಂಬುದು ಕುತೂಹಲವಾಗಿದೆ.
ಬೆಲವತ್ತ ಜಗದೀಶ್ ಸಹ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಸಲ ಸಹ ಎದುರು ಸೋತಿದ್ದರು.

ಬೆಳ್ಳಿ ಲೋಕೇಶ್ ಅವರು ಇದೇ ಮೊದಲ ಸಲ ಚುನಾವಣೆಗೆ ನಿಲ್ಲುತ್ತಿದ್ದಾರೆ.
ಶಾಸಕ ಹಾಗೂ ಮಾಜಿ ಸಚಿವ ಡಿ ನಾಗರಾಜಯ್ಯ ಅವರ ಪುತ್ರ ಲೋಕೇಶ್, ಸುಜಾತಾ ನಂಜೇಗೌಡ ಮೊದಲ ಸಲ ಚುನಾವಣೆಗೆ ನಿಲ್ಲುತ್ತಿದ್ದಾರೆ.


ಜಿಲ್ಲೆಯಲ್ಲಿ ಒಕ್ಕಲಿಗರ ಸಂಘಟನೆ ಪ್ರಬಲವಾಗಿಲ್ಲ. ಜನಸಂಖ್ಯೆಯಲ್ಲಿ ಒಕ್ಕಲಿಗರು ಹೆಚ್ಚಿದ್ದರೂ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಅವರು ಹೆಚ್ಚು ಪ್ರಬಲರಾಗಿಲ್ಲ.
ಜನಾಂಗದ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರಮುಖವಾಗಿ ಯಾವುದೇ ಬೆಂಬಲ ಸಿಗುತ್ತಿಲ್ಲ ಎಂಬ ದೂರುಗಳು ಸಾಕಷ್ಟಿವೆ.
ಸಮಾಜದ ವಿದ್ಯಾರ್ಥಿಗಳು ತುಮಕೂರಿಗೆ ಬಂದು ಓದುವಾಗ ಉಚಿತ ಶಿಕ್ಷಣದ ವ್ಯವಸ್ಥೆ ಅಥವಾ ಆಶ್ರಯದ ವ್ಯವಸ್ಥೆಯಿಲ್ಲದಿರುವುದು ಜನಾಂಗದ ಜನರ ಕೋಪಕ್ಕೆ ಕಾರಣವಾಗಿದೆ.


ಈ ಎಲ್ಲಾ ಹಿನ್ನೆಲೆಯಲ್ಲಿ ಈ ಸಲದ ಚುನಾವಣೆ ಪ್ರಮುಖವಾಗಿದೆ. ಯಾರು ಯಾವ, ಯಾವ ಭರವಸೆ ನೀಡುತ್ತಾರೆಂಬುದರ ಬಗ್ಗೆ ಮತದಾರರು ಕುತೂಹಲಿಗಳಾಗಿದ್ದಾರೆ

Comment here