ಲೇಖನ

ಕೆಚ್ಚೆದೆ ವೀರರ ಅಚ್ಚಳಿಯದ ಇತಿಹಾಸ

Publicstory/prajayoga

ರವಿಕುಮಾರ್ ಕಮ್ಮನಕೋಟೆ

ಸೈನಿಕರ ಬಗ್ಗೆ ಮಾತನಾಡುವಾಗ ಮತ್ತು ಸಾರೆ ಜಹಾನ್ ಸೆ ಅಚ್ಚ ಹಾಡು  ಮೈ ಕೂದಲೆಗಳೆಲ್ಲ ನೆಟ್ಟಗಾಗುವಂತೆ ಮಾಡುತ್ತದೆ. ಅಷ್ಟರ ಮಟ್ಟಿಗೆ ನಾವೆಲ್ಲ ಸೈನಿಕರನ್ನ ಗೌರವಿಸುತ್ತೇವೆ ಮತ್ತು ಪ್ರೀತಿಸುತ್ತೇವೆ.

ಹಿಂದೆ ದಿವಂಗತ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಹೇಳುತ್ತಾರೆ.  ” ಜೈ ಜವಾನ್ ಜೈ ಕಿಸಾನ್ ” ಎಂದು. ರೈತ ಮತ್ತು ಸೈನಿಕ ಈ ಎರಡು ಶಕ್ತಿಗಳು ಈ ದೇಶದ ಬೆನ್ನೆಲುಬು.
ಸೈನ್ಯ ಸೇರ್ಪಡೆ ಒಂದು ಪ್ರಕ್ರಿಯೆ. ಯಾವುದೇ ಲಂಚ, ಆಮಿಷ,  ಶಿಫಾರಸ್ ನಿಂದ ಕೂಡಿದ್ದಲ್ಲ. ಅದೊಂದು ಅರ್ಹತೆ ಎಂಬುದೇ ಹೆಮ್ಮೆಯ ವಿಚಾರ.
ಒಂದು ಸಲ ಸೈನ್ಯ ಕ್ಕೆ ಸೇರಿದರೆ ಮತ್ತೆರಳಿ ಮನೆಗೆ ಬರುತ್ತೇವೆ ಎಂಬ ಯಾವ ಖಾತರಿಯೂ ಇರುವುದಿಲ್ಲ. ಇಷ್ಟೆಲ್ಲಾ ಗೊತ್ತಿದ್ದರೂ ದೇಶ ಪ್ರೇಮಿಗಳು ಸೈನ್ಯ ಸೇರಲು ತುದಿಗಾಲಲ್ಲಿ ನಿಂತಿರುತ್ತಾರೆ. ಹಗಲು ರಾತ್ರಿ  ಎನ್ನದೆ ದುರ್ಗಮ ಪ್ರದೇಶಗಳಲ್ಲಿ  ನುಸುಳುಕೊರರ ಗುಂಡಿಗೆ ಎದೆಯೊಡ್ಡಿ ಪ್ರತಿದಾಳಿ ಮಾಡುವ ನಮ್ಮ ಸೈನಿಕರನ್ನು ಈ ಸಂದರ್ಭದಲ್ಲಿ ನೆನೆಯಲೇ ಬೇಕು. ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಬಿಟ್ಟು ದೇಶದ ರಕ್ಷಣೆ ಗುರಿಯಾಗಿಸಿಕೊಂಡು ಅವರು ನಿದ್ರಿಸದೆ ದೇಶದ ಪ್ರಜೆಗಳನ್ನ ನಿಶ್ಚಿಂತೆಯಿಂದ ನಿದ್ದೆ ಮಾಡುಲು ಹಬ್ಬ ಹರಿದಿನಗಳೆನ್ನದೆ ಗಡಿಯಲ್ಲಿ ಕಾವಲು ಕಾಯುತ್ತಾರೆ.

ಭಾರತದ ಸೇನಾ ಕಾರ್ಯದಕ್ಷತೆಯನ್ನು ಮೆಲುಕು ಹಾಕಿದಾಗ ಜನರಲ್ ಕಾರ್ಯಪ್ಪ,ನವರು ನೆನಪಾಗುತ್ತಾರೆ. 1965 ರ ಅವಧಿಯ ಪಾಕಿಸ್ತಾನದ ಜೊತೆಗಿನ ಯುದ್ಧದಲ್ಲಿ  ಅವರ ಮಗ  ಪಾಕಿಸ್ತಾನ ಸೈನ್ಯಕ್ಕೆ ಸೆರೆಸಿಕ್ಕಾಗ ಅಲ್ಲಿದ್ದ  ಪಾಕಿಸ್ತಾನದ ಅಧಿಕಾರಿಯೊಬ್ಬರು ಜನರಲ್ ಕಾರ್ಯಪ್ಪ ಅವರಿಗೆ ಮಾಹಿತಿ ಕೊಡುತ್ತಾರೆ. ನಿಮ್ಮ ಮಗ ಪಾಕ್ ಸೈನ್ಯಕ್ಕೆ ಸೆರೆಸಿಕ್ಕಿದ್ದಾನೆ. ನೀವು ಪಾಕಿಸ್ತಾನದ ಸೇನಾ ಜನರಲ್ ಜೊತೆ ಒಮ್ಮೆ ಮಾತನಾಡಿ ನಿಮ್ಮ ಮಗನನ್ನು ಬಿಡಬಹುದು ಎನ್ನುತ್ತಾರೆ. ಅವರು ಪ್ರಭಾವ ಬೀರಿ ತಮ್ಮ ಮಗನ್ನು ಬಿಡಿಸಿಕೊಳ್ಳವ ಗೋಜಿಗೆ ಹೋಗದೆ ಅವಕಾಶವನ್ನು ತಿರಸ್ಕರಿಸುತ್ತಾರೆ. ಎಲ್ಲಾ ಯುದ್ಧ ಕೈದಿಗಳಂತೆ ನನ್ನ ಮಗನನ್ನು ನೋಡಿಕೊಳ್ಳಿ. ಅಲ್ಲಿರುವವರೆಲ್ಲಾ ನನ್ನ ಮಕ್ಕಳೆ ಎಂಬ ಸಂದೇಶ ರವಾನೆ ಮಾಡಿದ್ದು ಅಭೂತಪೂರ್ವ ಇತಿಹಾಸ. ಇದಲ್ಲವೇ ಭಾರತೀಯ ಸೈನ್ಯದ ಹಂಸಕ್ಷೀರ ನ್ಯಾಯ.

1999 ರ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನದ ಸೈನ್ಯ ಲೈನ್ ಆಪ್ ಕಂಟ್ರೋಲ್  ದಾಟಿ ನುಸುಳಿತ್ತು. ಅಲ್ಲಿನ ಹವಾಮಾನ ಚಳಿಗಾಲದಲ್ಲಿ ಮೈನಸ್ಸ್ – 48°c  ವರೆಗೂ ಇಳಿಯುತ್ತದೆ ಇದರಿಂದ ಗಡಿಕಾಯುವ ಸೈನಿಕರಿಗೆ ಅಲ್ಲಿ ಒಂದು ಸವಾಲಿನ ಕೆಲಸವೇ ಸರಿ.  ಇಂತಹದೊಂದು ಸಂದರ್ಭ ಬಳಸಿಕೊಂಡು ಕುತಂತ್ರಿ ಪಾಕಿಸ್ತಾನವು ಕಾಶ್ಮೀರ ಹೋರಾಟಗಾರರ ಹೆಸರಿನಲ್ಲಿ ತನ್ನದೇ ಆದ ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟು ಗಡಿರೇಖೆಯನ್ನು ಉಲಂಘಿಸಿ ಭಾತರದ ಮುಖ್ಯ ಭೂ ಪ್ರದೇಶಗಳನ್ನು ಅಕ್ರಮಿಸಿತು. ಗುಡ್ಡಾಗಾಡು ಪ್ರದೇಶದಲ್ಲಿ ಅಡಗಿ ಕುಳಿತ್ತಿದ್ದ ಭಯೋತ್ಪಾದಕರ ಚಲನವಲನ ಗಮನಿಸಿದ ಕುರಿಗಾಹಿಯೊಬ್ಬ ಸೈನ್ಯಕ್ಕೆ ಸುಳಿವುಕೊಟ್ಟ. ತಕ್ಷಣ ಎಚ್ಚೆತ್ತ ಸೈನ್ಯ ಅಂದಿನ ಪ್ರಧಾನಿ ವಾಜಪೇಯಿ ಅವರ ಸರ್ಕಾರದ ಅನುಮೋದನೆ ಪಡೆದು, ಯುದ್ದಕ್ಕೆ ಸನ್ನದ್ಧವಾಯಿತು. ಇತ್ತ ನಮ್ಮ ಸೈನ್ಯ ಆಪರೇಶನ್ ‘ವಿಜಯ್’ ಎಂಬ ಹೆಸರಿನ ಯುದ್ದಕ್ಕೆ ಇಳಿಯಿತು.  ಕಾರ್ಗಿಲ್ ದುರ್ಗಮ ಪ್ರದೇಶದ ಬೆಟ್ಟದ ಮೇಲೆ ಕುಳಿತಿರುವ ಭಯೋತ್ಪಾದಕರಿಗೆ  ಹೆಚ್ಚು ಅನುಕೂಲ‌ ಹಾಗೂ ತಳಭಾಗದ ಸೈನ್ಯಕ್ಕೆ ಅತ್ಯಂತ ಸವಾಲಾಗಿತ್ತು. ದಿಟ್ಟ ಹೋರಾಟ ಮಾಡಿ ಪಾಪಿಗಳ ಎಡೆಮುರಿ ಕಟ್ಟಿ ಪ್ರಪಂಚ ಯುದ್ಧದ ಇತಿಹಾಸದ ಪಟ್ಟಿಗೆ ಸೇರಿಸಿದ್ದು ಒಂದು ಮೈಲುಗಲ್ಲು. ಇಂತಹ ಕೀರ್ತಿ ನಮ್ಮ ಸೈನ್ಯಕ್ಕೆ ಸಲ್ಲುತ್ತದೆ.

ಇತ್ತಿಚೆಗೆ ನಡೆದ ಸರ್ಜಿಕಲ್ ಸ್ಟ್ರೈಕ್ ನಂತಹ ದಾಳಿಯಲ್ಲಿ ವಿಂಗ್ ಕಮಾಂಡರ್ ಆಭಿನಂದನ್ ಎಂಬ ವೀರಪರಾಕ್ರಮಿ  ವಾಯುಸೇನೆಯ ಫೈಟರ್ ಜಟ್ ಮಿಗ್ ಬಳಸಿ  ಪಾಕ್ ಯುದ್ಧ ವಿಮಾನವನ್ನ ಅಟ್ಟಿಸಿಕೊಂಡು ಹೋಗಿ ಪಾಕ್ ನೆಲದಲ್ಲಿ ಅಮೇರಿಕಾ ನಿರ್ಮಿತ ಅತ್ಯಾಧುನಿಕ ಫೈಟರ್ ಜಟ್ ಮಿಮಾನವನ್ನ ಪುಡಿ ಪುಡಿ ಗೈದು ಸಾಹಸ ಮೆರೆದ ವೀರ ಸೇನಾನಿ.
ಭಾರತೀಯ ಪ್ರತಿ ಮನೆ ಮನೆಗಳಲ್ಲಿ ಯೋಧರನ್ನು ತಯಾರು ಮಾಡಬೇಕು. ದೇಶ ಸೇವೆ  ಕಡ್ಡಾಯದ ನಂತರ ರಾಜಕೀಯ ಇನ್ನಿತರ ಕ್ಷೇತ್ರಗಳ ಸೇವೆ ಎಂಬ ಕಾನೂನು ದೇಶದಲ್ಲಿ ತರಬೇಕು. ಇತ್ತೀಚೆಗೆ ಸೇನಾಮುಖ್ಯಸ್ಥ ರಾವತ್ ಹಾಗೂ ಸಹೋದ್ಯೋಗಿ ಸೈನಿಕರು ಹೆಲಿಕಾಪ್ಟರ್ ದುರಂತದಲ್ಲಿ ಮಡಿದದ್ದು, ಅತೀವ ನೋವುಂಟು ಮಾಡಿತು.

ಮಡಿದ ಸೈನಿಕರೆಲ್ಲಾ ವೀರ ಸ್ವರ್ಗ  ಸೇರಿ ಅವರ ಆತ್ಮಕ್ಕೆ ಶಾಂತಿ  ದೊರೆಯಲಿ.  ಮತ್ತು ಸೈನಿಕರ ಶೌರ್ಯ ಸಾಹಸಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಿ ಮಕ್ಕಳನ್ನ ಮನಸ್ಸಿನಲ್ಲಿ ಕೆಚ್ಚೆದೆಯ ಸೈನಿಕನ ಕನಸ್ಸನ್ನು ತುಂಬುವಂತಾಗಲಿ.

ಬರಹ ಲೇಖಕರದ್ದು, ವೆಬ್‌ಸೈಟ್‌ನ ಅಭಿಪ್ರಾಯವಲ್ಲ.

Comment here