ಕ್ರೈಂ

ಫ್ಲೆಕ್ಸ್‌ನಲ್ಲಿ ಗೋಡ್ಸೆ ಪೋಟೋ ಹಾಕಿ ಸಂಭ್ರಮಾಚರಣೆ

Publicstory/prajayoga

ಮಧುಗಿರಿ: ತಾಲೂಕಿನ ದಂಡಿನಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಗಾಂಧಿ ಪೋಟೋಕ್ಕಿಂತ ಮೇಲ್ಭಾಗದಲ್ಲಿ
ನಾಥೂರಾಮ್ ಗೋಡ್ಸೆ ಪೋಟೋ ಹಾಕಿ ಕಿಡಿಗೇಡಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.

75 ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಧುಗಿರಿಯ ಡಿ.ಎಂ ಬಡಾವಣೆಯ ಭಗತ್ ಸಿಂಗ್ ಯೂಥ್  ಅಸೋಸಿಯೇಷನ್ ನಿಂದ ಹಾಕಲಾಗಿರುವ ಫ್ಲೆಕ್ಸ್ ನಲ್ಲಿ ನಾಥೂರಾಮ್ ಗೂಡ್ಸೆ ಭಾವಚಿತ್ರ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಭಗತ್ ಸಿಂಗ್, ಸರದಾರ್ ವಲ್ಲಭಾಯ್ ಪಟೇಲ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರಬೋಸ್, ಮಹಾತ್ಮಗಾಂಧೀಜಿ, ಲಾಲ್ ಬಹುದ್ದಾರ್ ಶಾಸ್ತ್ರಿ, ಕಿತ್ತೂರು ರಾಣಿ ಚೆನ್ನಮ್ಮ ಅವರುಗಳ ಜೊತೆಗೆ ಗೋಡ್ಸೆ ಪೋಟೋ ಹಾಕಲಾಗಿದೆ. ಮಧುಗಿರಿ ಪುರಸಭೆಯಿಂದಲ್ಲೂ ಯಾವುದೇ ಅನುಮತಿ ಪಡೆಯದೆ ಪ್ಲೆಕ್ಸ್ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಅರಿತ ಪುರಸಭೆ ಅಧಿಕಾರಿಗಳು ಒಂದು ದಿನದ ನಂತರ ಪ್ಲೆಕ್ಸ್ ತೆರುವುಗೊಳಿಸಿದ್ದಾರೆ.

Comment here