ರಕ್ಷಣಾ ಕಾರ್ಯ

ಕುಣಿಗಲ್ ಪಟ್ಟಣದಲ್ಲಿ ಚಿಂದಿ ಆಯುತ್ತಿದ್ದ ಮಕ್ಕಳು ಸೇರಿದಂತೆ ಮೂವರ ರಕ್ಷಣೆ

Publicstory/prajayoga

ಕುಣಿಗಲ್: ಪಟ್ಟಣದಲ್ಲಿ ಭಿಕ್ಷಾಟನೆ, ಚಿಂದಿ ಆಯುವ ಮೂರು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಸಾರಿಗೆ ಬಸ್ ನಿಲ್ದಾಣ, ಸಂತೇ ಮೈದಾನ, ಆರ್.ಎಂ.ಸಿ ಯಾರ್ಡ್, ಘನ ತಾಜ್ಯ ವಿಲೇವಾರಿ ಘಟಕ ಹಾಗೂ ಪಟ್ಟಣದ ವಿವಿಧ ಕಡೆಗಳಲ್ಲಿ ಚಿಂದಿ ಆಯುತ್ತಿದ್ದ ಮಕ್ಕಳನ್ನು ಗಮನಿಸಿದ ಸ್ಥಳಿಯರು ಮಕ್ಕಳ ಸಹಾಯವಾಣಿಗ ದೂರು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ  ಇಲಾಖೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು  ಜಂಟಿ ಕಾರ್ಯಾಚರಣೆ ನಡೆಸಿ ಒಬ್ಬ ಬಾಲಕಿ, ಮಗು ಹಾಗೂ ಮಗುವಿನ ತಾಯಿಯನ್ನು ರಕ್ಷಣೆ ಮಾಡಿದ್ದಾರೆ.

ಸರ್ಕಾರಿ ಆಸ್ಪತ್ರೆ ಯ ವೈದ್ಯರಿಂದ ತಪಾಸಣೆ ನಡೆಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿ ಸೂಕ್ತ ಪುನರ್ವಸತಿ ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಅನುಷಾ ತಿಳಿಸಿದ್ದಾರೆ.

ಕಾರ್ಯಚರಣೆಯಲ್ಲಿ ಕುಣಿಗಲ್ ಪೋಲಿಸ್ ಠಾಣೆಯ ಪಿ.ಎಸ್.ಐ ಜಮಾಲ್ ಅಹಮದ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉಮೇಶ್, ತಾಲೂಕು ಕಾರ್ಮಿಕ ನಿರೀಕ್ಷಕರಾದ ಪುಟ್ಟರಾಜು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೌತಮ್, ಜಿತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ತಿಮ್ಮರಾಜು ಸೆರಿದಂತೆ ಹಲವರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.

Comment here