ಪೊಲಿಟಿಕಲ್

ಜೋಡೋ ಪಾದಯಾತ್ರೆ ಹಿನ್ನಲೆಯಲ್ಲಿ ಸ್ಥಳ ವೀಕ್ಷಿಸಿದ ಡಿ.ಕೆ.ಶಿವಕುಮಾರ್

Publicstory/prajayoga

ತುರುವೇಕೆರೆ :  ಭಾರತ್ ಜೋಡೋ ಪಾದಯಾತ್ರೆ ಹಿನ್ನಲೆಯಲ್ಲಿ  ಪಾದಯಾತ್ರೆಯು ಸಾಗುವ ತುರುವೇಕೆರೆ ಮಾರ್ಗವನ್ನು  ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ವೀಕ್ಷಣೆ ಮಾಡಿ ಮಂಡ್ಯದತ್ತ ಪ್ರಯಾಣ ಮುಂದುವರೆಸಿದರು.

ಬಾಣಸಂದ್ರದಲ್ಲಿ  ಕಾಂಗ್ರೇಸ್ ಮುಖಂಡರು ನೀಡಿದ ಸ್ವಾಗತ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೇಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆಯು ತುಮಕೂರು, ಚಿತ್ರದುರ್ಗ ಹಾಗೂ  ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ  ಸಾಗಲಿದೆ.  ಪಾದಯಾತ್ರೆ ಸಾಗುವ  ಸ್ಥಳ ವೀಕ್ಷಣೆ ಹಿನ್ನಲೆಯಲ್ಲಿ ಹಿರಿಯೂರು,  ಚಳ್ಳಕೆರೆ ಹಾಗೂ ತುಮಕೂರು ಜಿಲ್ಲೆಯ ತುರುವೇಕೆರೆ ಮಾರ್ಗವಾಗಿ ಮಂಡ್ಯದತ್ತ ಪ್ರಯಾಣಿಸುತ್ತಿದ್ದೇನೆ. ಜೋಡೋ ಯಾತ್ರೆ ದಿನಾಂಕ ಹಾಗೂ  ಇತರೆ ಮಾಹಿತಿಯನ್ನು  ಹೈ ಕಮಾಂಡ್ ಸೂಚನೆಯಂತೆ ಮುಂದಿನ ದಿನಗಳಲ್ಲಿ  ತಿಳಿಸಲಾಗುತ್ತದೆ. ಮಾರ್ಗ ಮಧ್ಯೆ  ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದ್ದು ಸಂತಸ ತಂದಿದೆ ಎಂದರು.

ತಾಲೂಕಿನ ಬಾಣಸಂದ್ರ ಪ್ರವೇಶಿಸಿದ ಕೆ.ಪಿ.ಸಿ.ಸಿ.  ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನು ಹಿರಿಯ ಮುಖಂಡ ಚೌದ್ರಿರಂಗಪ್ಪ, ವಿಧಾನ ಪರಿಷತ್ ಮಾಜಿಸದಸ್ಯ  ಬೆಮೆಲ್ ಕಾಂತರಾಜ್, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್, ವಕೀಲರಾದ ರಾಜಣ್ಣ, ಯುವ ಕಾಂಗ್ರೇಸ್ ಅಧ್ಯಕ್ಷ ವಿನಯ್ಗೌಡ , ಸುಬ್ರಹ್ಮಣ್ಯಶ್ರೀಕಂಠೇಗೌಡ,ಟಿ.ಎನ್.ಶಿವರಾಜ್, ಸ್ವರ್ಣಕುಮಾರ್ ಮತ್ತಿತರರು ಸ್ವಾಗತಿಸಿ, ಮುಂದಿನ ಪ್ರಯಾಣಕ್ಕೆ ಶುಭ ಕೋರಿದರು.

Comment here