ಪೊಲಿಟಿಕಲ್

ಚುಂಚಾದ್ರಿ ರೈತಸಂತೆ ಉದ್ಘಾಟನೆಗೆ ಕೇಂದ್ರಸಚಿವೆ ಶೋಭಾಕರಂದ್ಲಾಜೆ

Publicstory/prajayoga

ತುರುವೇಕೆರೆ: ಆಗಸ್ಟ್ 25 ರಂದು  ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ ನಲ್ಲಿ  ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠ ಹಾಗೂ ಬಿ.ಭೈರಪ್ಪಾಜಿ ಪ್ರತಿಷ್ಟಾನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ಚುಂಚಾದ್ರಿ ರೈತ ಸಂತೆ ಉದ್ಘಾಟನೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ರಾಜ್ಯದ ಮಂತ್ರಿಗಳು ಆಗಮಿಸಲಿದ್ದಾರೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.

ಚುಂಚಾದ್ರಿ ರೈತ ಸಂತೆ  ಉದ್ಘಾಟನೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾಕರದ್ಲಾಂಜೆ ಹಾಗೂ ರಾಜ್ಯದ ಮಂತ್ರಿಗಳು ಆಗಮಿಸುತ್ತಿರುವ  ಹಿನ್ನಲೆಯಲ್ಲಿ  ಕಾರ್ಯಕರ್ತರ ಪೂರ್ವಭಾವಿಯನ್ನುದ್ದೇಶಿಸಿ ಮಾತನಾಡಿದ ಅವರು,  ರೈತರು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ದರ ಲಭಿಸಬೇಕು  ಹಾಗೂ  ಮಧ್ಯವರ್ತಿ ಮುಕ್ತ ವ್ಯವಸ್ಥೆಯನ್ನು ಜಾರಿಯಾಗಬೇಕೆಂಬ ನಿಟ್ಟಿನಲ್ಲಿ  ಆಗಸ್ಟ್ 25 ರಂದು ಆದಿಚುಂಚನಗಿರಿ ಮಠವು  ಚುಂಚಾದ್ರಿ ರೈತ ಸಂತೆಯನ್ನು ಆರಂಭಿಸಲುದ್ದೇಶಿದೆ. ಅದೇ ದಿನ ಟಿ.ಬಿ. ಕ್ರಾಸ್‌ನಲ್ಲಿ ಮಾಜಿ ಶಾಸಕ ಬಿ.ಭೈರಪ್ಪಾಜಿಯವರ ಪುತ್ಥಳಿ ಪುನರ್ ಪ್ರತಿಷ್ಠಾಪನೆ ಹಾಗೂ  ಆದಿಚುಂಚನಗಿರಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನ ಗಡಿಭಾಗದಲ್ಲಿರುವ ಜೋಡಗಟ್ಟೆಯಿಂದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಹಾಗೂ ಮಂತ್ರಿ ಮಹೋದಯರನ್ನು  ತಾಲೂಕಿನ ಯುವಕರು ಬೈಕ್ ರ‍್ಯಾಲಿ ಮೂಲಕ ಸ್ವಾಗತಿಸಲಿದ್ದಾರೆ. ಟಿ.ಬಿ.ಕ್ರಾಸ್‌ನಲ್ಲಿ ಪ್ರತಿಷ್ಟಾಪಿಸಲಾಗಿರುವ ಮಾಜಿ ಶಾಸಕ ಬಿ.ಭೈರಪ್ಪಾಜಿಯವರ ಪುತ್ಥಳಿ ಪುನರ್ ಪ್ರತಿಷ್ಟಾಪನೆಯನ್ನು  ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ನೆರವೇರಿಸಲಿದ್ದಾರೆ, ಆನಂತರ ಚುಂಚಾದ್ರಿ ರೈತ ಸಂತೆಗೆ ಚಾಲನೆ ಹಾಗೂ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ವೇಳೆ ರಾಜ್ಯದ ಮಂತ್ರಿಗಳಾದ ಗೋಪಾಲಯ್ಯ, ಮುನಿರತ್ನ, ಸೋಮಶೇಖರ್ ರವರು ಹಾಗೂ  ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರುಗಳು, ರೈತಾಪಿಗಳು, ಶ್ರೀ ಮಠದ ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ತಾಲೂಕು ಬಿ.ಜೆ.ಪಿ.ಘಟಕದ ಅಧ್ಯಕ್ಷ ಮೃತ್ಯುಂಜಯ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಮಯ್ಯ, ವಿ.ಬಿ.ಸುರೇಶ್, ಅರಳೀಕೆರೆಶಿವಯ್ಯ,ವಿಪುಲ್ ಜೈನ್,ಕಾಳಂಜೀಹಳ್ಳಿಸೋಮಶೇಖರ್ ಮತ್ತಿತರಿದ್ದರು.

Comment here