ಪೊಲಿಟಿಕಲ್

ಕನ್ನಡ ಬರೆದಂತೆ ಓದಬಹುದಾದ  ವೈಶಿಷ್ಟ್ಯ ಭಾಷೆ:  ಚಕ್ರವರ್ತಿ ಸೂಲಿಬೆಲೆ

ತುರುವೇಕೆರೆ :ಕನ್ನಡವೆಂಬುದು ವ್ಶೆಜ್ಞಾನಿಕವಾದ ಭಾಷೆ. ಬರೆದಂತೆ ಓದಬಹುದಾದ ವೈಶಿಷ್ಟ್ಯತೆ ಇರುವ ಭಾಷೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ  ತಿಳಿಸಿದರು.

ಪಟ್ಟಣದ ಸತ್ಯಗಣಪತಿ ಆಸ್ಥಾನನ ಮಂಟಪದಲ್ಲಿ ಯುವ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಟಾನ ಹಾಗೂ ತುರುವೇಕೆರೆ ತೇರು ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ಸ್ವರಾಜ್ಯಕ್ಕೆ  ಮುಕ್ಕಾಲು ನೂರು ಸಂಭ್ರಮಕ್ಕೆ ಕನ್ನಡ ತೇರು ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿ  ಮಾತನಾಡಿದರು.

ಲಂಕೆಯಿಂದ ಸೀತೆಯನ್ನು ಕರೆತರುವ ಸಾಹಸ ಮಾಡಿದ ಆಂಜನೇಯ ಕರ್ನಾಟಕದಲ್ಲಿ ಹುಟ್ಟಿದವರು, ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಕೀರ್ತಿ ಮೈಸೂರು ಅರಸರಿಗೆ ಸಲ್ಲುತ್ತದೆ. ಶಾಲಿವಾಹನ ಶಖ ಪುರುಷ ಹುಟ್ಟಿದ್ದು ತುರುವೇಕೆರೆ ತಾಲೂಕಿನ ತಂಡಗದಲ್ಲಿ ಎಂಬ ವಿಚಾರ ಪ್ರತಿ ಕನ್ನಡಿಗನು ಹೆಮ್ಮೆ ಪಡುವಂಥದ್ದು. ಶಾಲಿವಾಹನ ಹುಟ್ಟಿದ ನಾಡಿನಲ್ಲಿ ಕನ್ನಡ ತೇರಿನ ಸಂಚಾರಕ್ಕೆ ಚಾಲನೆ ದೊರತಿರುವುದು ಸಂತಸದ ವಿಚಾರ ಎಂದರು.

ಬದರಿಕಾಶ್ರಮ  ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಬೋದಾಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿ ಮಾತೃ ಬಾಷೆಯ ಪ್ರೇಮ ಕಡಿಮೆಯಾಗುತ್ತಿದೆ. ಇಂಗ್ಲೀಷ್ ಬಾಷೆ ವ್ಯಾಮೋಹ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾತೃ ಬಾಷೆಯಲ್ಲಿ ನಮ್ಮ ಸಂಸ್ಕೃತಿ ಅಡಕಗೊಂಡಿದೆ ಎಂಬುದು ನಾಡಿನೆಲ್ಲರ ಅರಿವಿಗೆ ಬರುವಂತಾಗಲಿ ಎಂದರು.

ಈ ವೇಳೆ ಶಾಸಕ ಮಸಾಲಜಯರಾಮ್, ಯುವ ಬ್ರೀಗೇಡ್ ಸಂಚಾಲಕ ಧರ್ಮಣ್ಣ, ತುರುವೇಕೆರೆ ತೇರು ಸಮಿತಿಯ  ಪ್ರೋ. ಗಂಗಾಧರದೇವರಮನೆ, ತಾಲೂಕು ಯುವ ಬ್ರೀಗೇಡ್ ಅಶ್ವಿನ್, ಸಹ ಸಂಚಾಲಕ ಸುರೇಶ್ ಆಚಾರ್ಯ ಇದ್ದರು.

Comment here