ಪೊಲಿಟಿಕಲ್

ಟೀ ಸೇವನೆಗೆ ಆಹ್ವಾನ ; ಪರಮೇಶ್ವರ್ ಗೆ ಮೈಸೂರು ಪೇಟದ ಸನ್ಮಾನ

Publicstory/prajayoga

ತುಮಕೂರು: ನಗರದ ಸದಾಶಿವ ನಗರದಲ್ಲಿರುವ ಟಿಪ್ಪು ತಾಜ್ ಟೀ ಸ್ಟಾಲ್ ಗೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಚಹ ಸೇವಿಸಿ ಸರಳತೆ ಮೆರೆದಿದ್ದಾರೆ.

ಇಂದು ಪರಮೇಶ್ವರ್ ಜನ್ಮ ದಿನವಾದ್ದರಿಂದ ಅಭಿಮಾನಿಯೊಬ್ಬರ ಆಹ್ವಾನದ ಮೇರೆಗೆ ಸದಾಶಿವನಗರದಲ್ಲಿರುವ ಟಿಪ್ಪು ತಾಜ್ ಟೀ ಸ್ಟಾಲ್ಗೆ ಭೇಟಿ ನೀಡಿ ಟೀ ಸೇವಿಸಿದ್ದು, ಗಮನ ಸೆಳೆಯಿತು.

ಈ ವೇಳೆ ಅವರಿಗೆ ಟೀ ಸ್ಟಾಲ್‌ನ ಶಬ್ಬೀರ್ ಅಹಮದ್ ಮತ್ತು ಅವರ ಸ್ನೇಹಿತರು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನ ಮಾಡಿದರು.
ರಿಜ್ವಾನ್ ಪಾಷಾ, ಫೈಝಲ್, ರಫೀಕ್ ಪಾಷಾ, ಮುಕ್ತಿಯಾರ್ ಮತ್ತಿತರರು ಇದ್ದರು.

Comment here