ಕ್ರೈಂ

ಗೂಡ್ಸ್ ವಾಹನಕ್ಕೆ ಟಿವಿಎಸ್ ಡಿಕ್ಕಿ ; ಸವಾರ ಸಾವು

Publicstory/prajayoga

ತುಮಕೂರು: ನಗರದ ಶೆಟ್ಟಿಹಳ್ಳಿ ಸಿಗ್ನಲ್‌ನ ತಿರುವಿನಲ್ಲಿ ಕ್ಯಾತ್ಸಂದ್ರ ಕಡೆಯಿಂದ ಬಂದ ಟಾಟಾ ಗೂಡ್ಸ್ ವಾಹನಕ್ಕೆ ಟಿವಿಎಸ್ ಸ್ಕೂಟರ್ ತಗುಲಿ ಸ್ಥಳದಲ್ಲಿಯೇ ವಾಹನ ಸವಾರ‌ ಮೃತಪಟ್ಟಿರುವ ಘಟನೆ ನಡೆದಿದೆ.

ಮೂರ್ತಪ್ಪ ( 55) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಗಾರೆ ಕೆಲಸ ಮಾಡುತ್ತಿದ್ದ ಮೂರ್ತಪ್ಪ ಗೂಳರಿವೆ ನಿವಾಸಿಯಾಗಿದ್ದು, ಬೆಳಗ್ಗೆ ಕೆಲಸಕ್ಕೆಂದು ತೆರಳುವಾಗ ಈ ಅವಘಢ ಸಂಭವಿಸಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comment here