Friday, March 29, 2024
Google search engine
HomeUncategorizedಜಡ್ಜ್ ಮೆಂಟ್ ಅಲ್ಲ ಜಸ್ಟೀಸ್ ಮುಖ್ಯ: ನ್ಯಾಯಾಧೀಶೆ ನೂರುನ್ನೀಸಾ

ಜಡ್ಜ್ ಮೆಂಟ್ ಅಲ್ಲ ಜಸ್ಟೀಸ್ ಮುಖ್ಯ: ನ್ಯಾಯಾಧೀಶೆ ನೂರುನ್ನೀಸಾ

Public story.in


Tumakuru: ಜಡ್ಜ್ ಮೆಂಟ್ ಎಲ್ಲರೂ ಕೊಡಬಹುದು. ಆದರೆ ಜಸ್ಟೀಸ್ ಕೊಡುವುದು ತುಂಬಾ ಕಷ್ಟ ಎಂದು ತುಮಕೂರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ನೂರುನ್ನೀಸಾ ಅವರು ಹೇಳಿದರು.

ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಿಮ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

https://youtu.be/-Ablcu9SKkY

ಕಾನೂನು ಪದವಿಗೆ ಹೆಚ್ಚು ಅವಕಾಶಗಳಿವೆ. ನನಗೆ ಸೇನೆಗೆ ಸೇರಬೇಕೆಂಬ ಆಸೆ ಇತ್ತು. ಅದಕ್ಕಾಗಿ ತಯಾರು ನಡೆಸಿದ್ದೆ.‌ ಪರೀಕ್ಷೆ ಪಾಸಾದಾರೂ ಕಾರಣಾಂತರಗಳಿಂದ ಹೋಗಲಾಗಲಿಲ್ಲ ಎಂದರು.

ವೈದ್ಯಕೀಯ, ಎಂಜಿನಿಯರಿಂಗ್ ಹುದ್ದೆಗಿಂತ ಹೆಚ್ಚು ಮಹತ್ವದ ಗೌರವಾನ್ವಿತ, ಘನತೆಯುಳ್ಳ, ದೈವಿಕ ರೂಪದ ಹುದ್ದೆ. ಇಲ್ಲಿ ಸಮಾಜದ ಲೋಪದೋಷಗಳನ್ನು ತಿದ್ದಬಹುದು. ಕಾನೂನು ಪದವೀಧರರು ಪತ್ರಿಕೋದ್ಯಮ ದಲ್ಲೂ ಸೇವೆಯಲ್ಲಿದ್ದಾರೆ ಎಂದರು.

ಕಾನೂನು ಸೇವಾ ಪ್ರಾಧಿಕಾರದಲ್ಲಿ ಸುಫಿಯಾ ಕಾಲೇಜು ವಿದ್ಯಾರ್ಥಿ ಗಳು ಸಕ್ರಿಯ ಪಾಲ್ಗೊಳ್ಳುವಿಕೆ ಯನ್ನು ಗಮನಿಸಿದ್ದೇನೆ. ಕಟಿಬದ್ದತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಜನರಿಗೆ ಸಕರಾತ್ಮಕ ಅಭಿಪ್ರಾಯ ನ್ಯಾಯಾಲಯದ ಮೇಲಿದೆ. ಅದನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಲ್ಲೂ ಸಲ್ಲದವರು ವಕೀಲರಾಗ ಬಹುದು ಎಂಬ ಅಭಿಪ್ರಾಯ ತಪ್ಪು. ಆ ಥರಾ ವಾತಾವರಣ ಈಗ ಇಲ್ಲ. ವಕೀಲರಾಗಿ ಮಾತ್ರವಲ್ಲ ಆನೇಕ ಅವಕಾಶಗಳಿವೆ. ವಕೀಲರು ನ್ಯಾಯಾಂಗ ಇಲಾಖೆಯ ಸೈನಿಕರು. ನ್ಯಾಯಾಂಗವನ್ನು ಕಾಪಾಡಬೇಕು. ಮಾನವೀಯ ಮೌಲ್ಯದೊಂದಿಗೆ ಕೆಲಸ ಮಾಡಬೇಕು ಎಂದರು.

ಕಿರಿಯ ವಕೀಲರಿಗೆ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹಣವೇ ಮುಖ್ಯವಲ್ಲ. ಇದೊಂದು ಯಾವಾಗಲೂ ಕಲಿಕೆಯ ವೃತ್ತಿ. ವಕೀಲರಾಗಿ ಇರುವವರೆಗೂ ಓದುತ್ತಲೇ ಇರಬೇಕು ಎಂದು ಸಲಹೆ ನೀಡಿದರು.

ಹಳೆಯ ಕಾನೂನು ಸಹ ಅರಿಯಬೇಕು. ಸಾಮಾಜಿಕ ಜವಾಬ್ದಾರಿಯನ್ನು ಹೊರಬೇಕು. ಜನರ ಕಷ್ಟಸುಖಗಳನ್ನು ಸಹ ಕೇಳಬೇಕು. ಆಲಿಸುವುದನ್ನು ಕಡಿಮೆ ಮಾಡಿದ್ದೇವೆ. ಇದು ತಪ್ಪು. ಎಂದು ಸಲಹೆ ನೀಡಿದರು.

ವೃತ್ತಿ ಜೀವನದಲ್ಲಿ ವಕೀಲೆಯಾಗಿ ಕಡಿಮೆ ಅವಧಿಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ನ್ಯಾಯಾಂಗ ಇಲಾಖೆಯಲ್ಲಿ ಹೆಚ್ಚು ಕೆಲಸ ಮಾಡಿದ್ದೇನೆ ಎಂದರು.

ಜನರು ಎಲ್ಲ ಕಚೇರಿಗಳನ್ನು ಅಲೆದು ಕಡೆಯ ಪ್ರಯತ್ನವಾಗಿ ವಕೀಲರ ಬಳಿ ಬರುತ್ತಾರೆ. ಅವರಿಗೆ ನಾವು ಸ್ಪಂದಿಸಬೇಕು. ಅವರಿಗೆ ಗೌರವ ಕೊಡಬೇಕು. ಆ ವ್ಯಕ್ತಿಯ ಸ್ಥಾನದಲ್ಲಿ ನಿಂತು ನೋಡಬೇಕು ಎಂದರು.


ಜಡ್ಜ್ ಮೆಂಟ್ ಎಲ್ಲರೂ ಕೊಡಬಹುದು. ಆದರೆ ಜಸ್ಟೀಸ್ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ. ನೈಸರ್ಗಿಕ ನ್ಯಾಯವೇ ನ್ಯಾಯದಾನದ ಮೂಲವಾಗ ಬೇಕು ಎಂದರು.


ಮಾರ್ಕ್ ಕಡಿಮೆ ಬಂದಿದೆ ಎಂದು ಕೊರಗಬೇಡಿ. ಎಲ್ಲರಲ್ಲೂ ಒಂದೊಂದು ಶಕ್ತಿ ಇದೆ. ವಿಶೇಷ ಗುಣ ಇದೆ ಎಂದರು.

ಕನ್ನಡ ಮಾಧ್ಯಮದಲ್ಲಿ ಕಲಿತವರು ಎಂಬ ಹಿಂಜರಿಕೆ ಬೇಡ. ನಾ‌ನೂ ಸಹ ಕನ್ನಡದಲ್ಲೇ ಪದವಿವರೆಗೂ ಓದಿ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ಸಾಪ್ಟವೇರ್, ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಕ್ಕೆ ಇರುವುದಕ್ಕಿಂತಲೂ ಹೆಚ್ಚು ಅವಕಾಶಗಳು ಕಾನೂನು ಪದವೀಧರರಿಗೆ ಇದೆ ಎಂದು ತಿಳಿಸಿದರು.


ಭಿನ್ನವಾಗಿ ಕೆಲಸ ಮಾಡುವುದನ್ನು ಕಲಿಯಿರಿ. ದಾವಣಗೆರೆಯಲ್ಲಿದ್ದಾಗ ಕನ್ನಡದಲ್ಲಿ ಜಡ್ಜ್ ಮೆಂಟ್ ಬರೆಯುತ್ತಿದ್ದೆ. ಜನ ಸಾಮಾನ್ಯರು, ವಕೀಲರು ಸಹ ಖುಷಿ ಪಡುತ್ತಿದ್ದರು. ನಾನೂ ಈಗಲೂ ಸಹ ಕಚೇರಿ ಟಿಪ್ಪಣೆ, ಪತ್ರವ್ಯವಹಾರ ಮಾಡುತ್ತಿದ್ದೇನೆ. ಕನ್ನಡದಲ್ಲಿ ವಕೀಲಿಕೆ ಮಾಡಲು ಹಿಂಜರಿಕೆ ಪಡುವುದು ಬೇಡ ಎಂದು ಹೇಳಿದರು.


ದೇವರು ಇದ್ದಂತೆ ದೆವ್ವವೂ ಇವೆ. ಅದೇ ರೀತಿ ಎಲ್ಲರಲ್ಲೂ ಒಳ್ಳೆಯ ಗುಣಗಳ ಜತೆ ಕೆಟ್ಟ ಗುಣಗಳು ಇರುತ್ತವೆ. ದ್ವಿಮುಖ ಮನುಷ್ಯರ ಲಕ್ಷಣವಾಗಿದೆ. ಒಳ್ಳೆಯದನ್ನು ಬಳಸಿ ಎಂದರು.

ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ ಮತ್ತಿರರ ಆತ್ಮಚರಿತ್ರೆಯನ್ನು ಓದಿದ್ದೇನೆ. ಸಾಧಕರ ಆತ್ಮಚರಿತ್ರೆ ಓದುವುದು ನನ್ನ ಹವ್ಯಾಸವಾಗಿದೆ. ನಾನು ಕೊನೆಯ ಬೆಂಚ್ ಹುಡುಗಿ. ಅಬ್ದುಲ್ ಕಲಾಂರ ಪುಸ್ತಕ ನನ್ನ ಸಾಧನೆಗೆ ಕಾರಣವಾಯಿತು ಎಂದರು.

ಹಿರಿಯ ಪತ್ರಕರ್ತರಾದ ಕೆ.ಜೆ.ಮರಿಯಪ್ಪ ಮಾತನಾಡಿ, ಕಾನೂನು ಪದವೀಧರರಿಗೆ ಉತ್ತಮ ಒಳ್ಳೆಯ ಅವಕಾಶ ಗಳಿವೆ. ಸಮಾಜಮುಖಿ ಯಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ವಕೀಲರು ಸರಿಯಾಗಿ ಓದದೇ ಕಕ್ಷಿಗಾರರಿಗೆ ಅನ್ಯಾಯ ಮಾಡಿದ ಘಟನೆಗಳನ್ನು ಕಂಡಿದ್ದೇನೆ. ಆದರೆ ಈ ರೀತಿ ಆಗಬಾರದು ಎಂದರು.

ಪ್ರಾಂಶುಪಾಲರಾದ ಡಾ.ಎಸ್. ರಮೇಶ್, ಸಂಸ್ಥೆಯ ಅಧ್ಯಕ್ಷರಾದ ಎಸ್.ಷಫೀ ಅಹಮದ್, ಉಪ ಪ್ರಾಂಶುಪಾಲರಾದ ಓಬಯ್ಯ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?