ತುಮಕೂರು ಲೈವ್

ಚಿಕ್ಕನಾಯಕನಹಳ್ಳಿಯಲ್ಲಿ ಸಾಧಕ ಮಹಿಳೆಯರ ಚಿತ್ರ ಪ್ರದರ್ಶನ

Publicstory


ಚಿಕ್ಕನಾಯಕನಹಳ್ಳಿ: ಪ್ರಥಮ ದರ್ಜೆ ಕಾಲೇಜು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಭಿನಂದನಾ ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಘಟಕ ಮತ್ತು ಜೆಂಡರ್ ಚಾಂಪಿಯ ಶಿಪ್ ಘಟಕ ಹಾಗೂ IQAC ಸಹಯೋಗದೊಂದಿಗೆ ವಿಭಿನ್ನವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಕುಮಾರ್ ವಹಿಸಿದ್ದರು. ತಾಲೂಕು ದಂಡಾಧಿಕಾರಿಗಳಾದ ತೇಜಸ್ವಿನಿ ಕಾರ್ಯಕ್ರಮ ಉದ್ಘಾಟಿಸಿ ಜೀವನದಲ್ಲಿ ಹೆಣ್ಣುಮಕ್ಕಳು ತೆಗೆದುಕೊಳ್ಳುವ ನಿರ್ಧಾರಗಳು ಅವರ ಜೀವನ ಹಾಗೂ ಶೈಲಿಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೂ ಹೆಣ್ಣು ಮಾನಸಿಕವಾಗಿ ಧೈರ್ಯವಾಗಿ ಎಲ್ಲವನ್ನು ಎದುರಿಸುವ ಗುಣ ಬೆಳಸಿಕೊಳ್ಳಿ ಎಂದು ತಿಳಿಸಿದರು.

ಮಹಿಳಾ ಘಟಕದ ಸಂಯೋಜಕರಾದ ಪದ್ಮ , ಪ್ರಾಸ್ತಾವಿಕ ನುಡಿಯನ್ನು ನುಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರೂಪ ವೆಂಕಟೇಶ , ಅಶ್ವಥ್ ನಾರಾಯಣ ಗುಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜು. ಶೆಟ್ಟಿಕೆರೆ. ಇವರು ಮಹಿಳಾ ಹಕ್ಕುಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದ ವಿಭಿನ್ನತೆಯನ್ನು ರೂಪಿಸಲು ಪ್ರಾಧ್ಯಾಪಕರಾದ ಪದ್ಮಶ್ರೀ ಜಿ ರವರು ವಿವಿಧ ವಲಯಗಳ ಮಹಿಳೆಯರನ್ನು ಸಂದರ್ಶನ ಮಾಡಿ ಹೆಣ್ಣಿನ ಕುರಿತು ಅವರ ಪರಿಕಲ್ಪನೆಗಳನ್ನು ಸಾಕ್ಷ್ಯಚಿತ್ರದ ಮೂಲಕ ಸಾದರಪಡಿಸಿದರು.

ಕಾಲೇಜಿನ ವಿದ್ಯಾರ್ಥಿಗಳಿಗೆ ಯಶಸ್ಸಿನ ಏಣಿಯನ್ನು ಏರಲು ಮಹಿಳೆ ಸ್ವತಂತ್ರಳು. ಮಹಿಳೆ ತನ್ನನ್ನು ಪ್ರೀತಿಸಿ ಗೌರವಿಸಿದರೆ ತನ್ನ ಕಾರ್ಯಗಳನ್ನು ಪ್ರಶಂಸಿಸುವುದನ್ನು ಕಲಿತರೆ ಹೆಣ್ಣಿನ ಸಬಲೀಕರಣವಾದಂತೆ ಎಂದು ಸಂದೇಶ ನೀಡಲಾಯಿತು.

ಅಶ್ವತ್ಥನಾರಾಯಣ ಗುಟ್ಟೆ ರವರು ಮಹಿಳಾ ದಿನಾಚರಣೆಯನ್ನು ಮಹಿಳಾ ಹಕ್ಕಿನ ದಿನಾಚರಣೆ ಎಂದು ಹೇಳಿದರು. ನಿರಂತರವಾಗಿ ಶೋಷಣೆಗೆ ಒಳಗಾದ ಮಹಿಳೆಯರ ಬಗ್ಗೆ ಮಾತನಾಡಿದರು.

ಪ್ರಾಧ್ಯಾಪಕ ಶಿವರಾಮಯ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಗೋವಿಂದಯ್ಯ ಸ್ವಾಗತಿಸಿದರು.

ಪ್ರಾಧ್ಯಾಪಕರಾದ ವಿಶ್ವನಾಥ್, ಮಮತಾ c h,. ಶಶಿರೇಖಾ, ಪುಷ್ಪ, ಮತ್ತು ಮಹಿಳಾ ಉಪನ್ಯಾಸಕರು ಹಾಗೂ ಎಲ್ಲಾ ಭೋದಕರು ಇದ್ದರು.

Comment here