ಯಲಚಗೆರೆ (ನೆಲಮಂಗಲ):  ಇಲ್ಲಿಗೆ ಸಮೀಪದ ಯಲಚಗೆರೆ ಗ್ರಾಮದಲ್ಲಿ ವಿಜಯದಶಮಿ ಹಬ್ಬ ವಿಜೃಂಭಣೆಯಿಂದ ನೆರವೇರಿತು.
ಹಬ್ಬದ ಪ್ರಯುಕ್ತ ಗ್ರಾಮದ ಆಂಜನೇಯ ಸ್ವಾಮಿ, ಲಕ್ಷ್ಮೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
 ದೇವರ ಮೆರವಣಿಗೆಯಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡರು.
ದೇವರ ಮೆರವಣಿಗೆಯಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡರು.
ನಂತರ ದೇವರನ್ನು ಗ್ರಾಮದ ಗುಡ್ಡಕ್ಕೆ ಕರೆ ತರಲಾಯಿತು.
ನಂತರ ಹರೀಶ್ ಗೌಡ ಅವರು ಬನ್ನಿಗೆ ಬಾಣ ತಾಗಿಸಿ ಬನ್ನಿ ಕಡಿದರು.
ಗ್ರಾಮದ ಅಭಿವೃದ್ಧಿ, ಗ್ರಾಮದ ಜನರ ಸಕಲವನ್ನು ಕೊಟ್ಟು ದಯಪಾಲಿಸು ದೇವರೆ. ಗ್ರಾಮದ ರಕ್ಷಣೆ ಮಾಡು ಎಂದು ಕೇಳಿಕೊಂಡರು.
ನಂತರ ದೇವರನ್ನು ಊರಿಗೆ ಕರೆ ತರಲಾಯಿತು.



 

