ತುಮಕೂರು ಲೈವ್

ಜೆಡಿಎಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿ ಯೂನುಸ್ ಆಯ್ಕೆ

ಪಾವಗಡ: ಜೆಡಿಎಸ್ ಅಲ್ಪಸಂಖ್ಯಾತ ತಾಲ್ಲೂಕು ಘಟಕದ ಅಧ್ಯಕ್ಷರಾಗಿ  ಆಯ್ಕೆಯಾದ ಯುನುಸ್ ಅವರಿಗೆ  ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ ಗುರುವಾರ ಆದೇಶ ಪ್ರತಿ ಹಸ್ತಾಂತರಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ ಮಾತನಾಡಿ, ಅಲ್ಪ ಸಂಖ್ಯಾತ ಮುಖಂಡರ ಒಮ್ಮತದ ಮೇರೆಗೆ ಯುನುಸ್ ಅವರನ್ನು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಯೂನುಸ್ ಅವರು ಪಕ್ಷ ಸಂಘಟನೆ ಜೊತೆಗೆ ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು.

ಯೂನುಸ್ ಮಾತನಾಡಿ, ನನ್ನ ಮೇಲೆ  ವಿಶ್ವಾಸವಿಟ್ಟು ಇಂತಹ  ಸ್ಥಾನ ನೀಡಿದ್ದು, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಾಗುವುದು. ಈಗಾಗಲೆ ಬಡ ಜನರ ಸೇವೆಯಲ್ಲಿ ನಿರತರಾಗಿದ್ದು ಸಮಾಜ ಸೇವೆಯೊಂದಿಗೆ, ಪಕ್ಷದ ಏಳ್ಗೆಗಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಆಯ್ಕೆ ಮಾಡಲು ಸಹಕರಿಸಿದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಅಲ್ಪಸಂಖ್ಯಾತ ಮುಖಂಡರು, ಅಧ್ಯಕ್ಷ ಬಲರಾಮರೆಡ್ಡಿ ಸೇರಿದಂತೆ ಎಲ್ಲ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಯೂನುಸ್ ಅವರ ಅಭಿಮಾನಿಗಳು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿಹಿ ಹಂಚಿ ಸಂತೋಷ ಹಂಚಿಕೊಂಡರು.

ಮಾಜಿ ಪುರಸಭೆ ಸದಸ್ಯ ಗೋಪಾಲ್, ಜಿ.ಎ. ವೆಂಕಟೆಶ್, ಮುಖಂಡ ಶಿವಕುಮಾರ್, ಖಾಲಿದ್, ಷಾಕಿರ್, ತಮೀಜ್, ಅಮ್ಜು, ಕಾವಲಗೆರೆ ರಾಮಾಂಜಿ, ನಿಸಾರ್, ಸುಹೇಲ್, ಸಾದಿಕ್ ಉಪಸ್ಥಿತರಿದ್ದರು.

Comment here