ತುಮಕೂರ್ ಲೈವ್

ಅಂಗನವಾಡಿ ಮಹಿಳಾ ಹೋರಾಟ: ಅಹೋರಾತ್ರಿಯ ಚಿತ್ರಣ

ತುಮಕೂರು: ಸುಮಾರು 30 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ತು‌ಮಕೂರಿನ ವಿವಿಧೆಡೆ ಬೀಡು ಬಿಟ್ಟಿದ್ದಾರೆ.

..

ಹಲವು‌‌ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ತಾಯಂದಿರನ್ನು ಬೆಂಗಳೂರು ಕಡೆಗೆ ಬಿಡದೇ ಈ ಚಳಿಯಲ್ಲಿ ತುಮಕೂರು ಅಮಾನಿಕೆರೆಯಲ್ಲಿ ಕೂಡಿ ಹಾಕಿದೆ.

ಕೆರೆಯಲ್ಲಿ ಸ್ವಲ್ಪ ನೀರಿದೆ. ವಿಪರೀತ ಚಳಿ. ಆದರೂ ಆ ಬಯಲಿನಲ್ಲಿ ಬೀಡು ಬಿಟ್ಟಿದ್ದಾರೆ. ಮುಂದೇನು ಮಾಡಬೇಕೆಂದು ತಡ ರಾತ್ರಿಯಾದರೂ ಸಭೆ ನಡೆಸುತ್ತಿದ್ದರು.

ನಾಲ್ಕೈದು ಸಾವಿರ ಮಹಿಳೆಯರು ಮಹಾ ದಾಸೋಹದ, ಡಾ.ಶಿವಕು‌ಮಾರ ಸ್ವಾಮೀಜಿ ತಪೋವನ ಸಿದ್ಧಗಂಗಾ ಮಠದಲ್ಲಿ ಬೀಡು ಬಿಟ್ಟಿದ್ದಾರೆ.

ಮತ್ತಷ್ಟು ಮಂದಿ ಬೀದಿ ಬೀದಿಯಲ್ಲಿ ಮಲಗಿದ್ದಾರೆ. ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೈ ತೊಳೆದುಕೊಂಡಿದೆ.

ಈ‌ ನಡುವೆ, ಜನವಾದಿ ಮಹಿಳಾ ಸಂಘಟನೆ ಮಹಿಳೆಯರ ಹೋರಾಟಕ್ಕೆ ಬೆಂಬಲ ಸೂಚಿಸಿದೆ.‌ ಸರ್ಕಾರ ಮಹಿಳೆಯರ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ.

Comment here