ತುಮಕೂರು ಲೈವ್

ಅಬ್ಬಬ್ಬಾ ಇವರ ಸಾಮಾಜಿಕ ಅಂತರ ಕಂಡು ಬೆರಗಾದರು…

ವರದಿ: ನಾಗರಾಜ್ ಸಿ.ಎಸ್.ಪುರ


C.S.Pura: ಗುಬ್ಬಿ ತಾಲ್ಲೂಕಿ‌ನ ಚಂದ್ರಶೇಖರ ಪುರ (ಸಿ.ಎಸ್.ಪುರ) ದಲ್ಲಿ ಸಾಮಾಜಿಕ ಅಂತರ ಕಂಡು ಎಲ್ಲರೂ ಬೆರಗಾಗುತ್ತಿದ್ದಾರೆ.

ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ ಸಾಮಾಜಿಕ ಅಂತರ ಕಾಪಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಬಿಜೆಪಿ ಸಂಸ್ಥಾಪನಾ ದಿನದಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಪಕ್ಷದ ಕಾರ್ಯಕರ್ತರಿಗೆ ಸಾಮಾಜಿಕ ಅಂತರ ಕಾಪಾಡಲು ಮನವಿ ಮಾಡಿದ್ದಾರೆ. ಕರೊನಾ ಯುದ್ಧದಲ್ಲಿ ಒಗ್ಗಟ್ಟು ಪ್ರದರ್ಶಿಸುವಂತೆ ಮನವಿ ಮಾಡಿದ್ದಾರೆ.


ನಿಮ್ಮೂರಿನ ಸುದ್ದಿ, ಲೇಖನ, ಚಿತ್ರಗಳನ್ನು ವಾಟ್ಸಾಪ್ ಮಾಡಿ:_9844817737


ಆದರೆ ಸಿ.ಎಸ್.ಪುರದಲ್ಲಿ ಈ ಮಾತುಗಳಿಗೆ ಬೆಲೆಯೇ ಇಲ್ಲವಾಗಿದೆ. ಗ್ರಾಮ ಪಂಚಾಯತಿ ಮುಂಭಾಗವೇ ಇರುವ ಪ್ರಾಥಮಿಕ ಕೃಷಿ ಸಂಘದಲ್ಲಿ ನ್ಯಾಯಬೆಲೆ ಪಡಿತರ ವಿತರಣೆ ಸಮಯದಲ್ಲಿ ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಇಡಲಾಯಿತು.

ಗುಂಪುಗೂಡಿ ಪಡಿತರಕ್ಕೆ ಮುಗಿಬಿದ್ದರು. ಇದನ್ನು ಕಂಡವರು ನೊಂದುಕೊಂಡರು.

ಇನ್ನೂ ಸರ್ಕಲ್ ನಲ್ಲಿ ಜನರು ಬೇಕಾಬಿಟ್ಟಿ ಇದ್ದರು. ಕೆಲಸ ಇಲ್ಲದವರು ಕಟ್ಟೆ ಕಲ್ಲುಗಳ ಮೇಲೆ ಕುಳಿತು ಹರಟೆ ಕೊಚ್ಚುತ್ತಿದ್ದರು.

ಇವರ ಆಟಗಳನ್ನು ಕಂಡವರು ಬೇಸರಿಸಿಕೊಂಡರು.‌ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿರುವ ಪ್ರಜ್ಞಾವಂತರಿಗೆ ಕೆಲವು ಜನರ ಈ ನಡವಳಿಕೆ ಕಿರಿಕಿರಿ ತರುತ್ತಿದೆ.

ಈ ಬಗ್ಗೆ ಅಧಿಕಾರಿಗಳು, ಶಾಸಕರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

Comment here