Saturday, September 21, 2024
Google search engine
Homeತುಮಕೂರು ಲೈವ್ಅಬ್ಬಬ್ಬಾ! ಈ ಮಕ್ಕಳ ಆಹಾರ ಕಂಡ ಶಾಸಕರು ಹೇಳಿದ್ದೇನು?

ಅಬ್ಬಬ್ಬಾ! ಈ ಮಕ್ಕಳ ಆಹಾರ ಕಂಡ ಶಾಸಕರು ಹೇಳಿದ್ದೇನು?

Publicstory. in


Turuvekere; ಪಟ್ಟಣ ಸಮೀಪದ ಹಾವಾಳದಲ್ಲಿರುವ ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕು ಎಂ.ಎಸ್.ಪಿ.ಸಿ ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕಕ್ಕೆ ಶಾಸಕ ಮಸಾಲಜಯರಾಮ್ ಶನಿವಾರ ದಿಢೀರ್ ಭೇಟಿ ನೀಡಿ ಕಳಪೆ ಗುಣಮಟ್ಟದ ಆಹಾರ ಪಾಕೀಟು ತಯಾರು ಮಾಡುತ್ತಿರುವ ಬಗ್ಗೆಅಲ್ಲಿನ ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡರು.

ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕಿನ ಶಿಶು ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ವಿತರಣೆಯಾಗುತ್ತಿರುವ ಆಹಾರ ಕಳಪೆ ಗುಣಮಟ್ಟದ್ದಾಗಿರುತ್ತದೆಂದು ಹಲವು ಬಾರಿ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಶಾಸಕರು ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕಕ್ಕೆ ಇಂದು ದಿಢೀರ್ ಭೇಟಿ ನೀಡಿದರು.

ಆಹಾರ ಪದಾರ್ಥಗಳನ್ನು ಸಂಸ್ಕರಣೆ ಮತ್ತು ಪಾಕೀಟ್ ಮಾಡುವ ವಿಧಾನಗಳನ್ನು ಪರಿಶೀಲಿಸಿದಾಗ ಪೌಷ್ಠಿಕ ಆಹಾರ ಮಿಶ್ರಣಕ್ಕೆ ಬಳಸುತ್ತಿದ್ದ ಅಕ್ಕಿ, ಗೋಧಿ, ಹೆಸರು ಕಾಳು, ಕಡಲೆ ಇತ್ಯಾದಿಗಳಲ್ಲಿ ಕಪ್ಪು ಹುಳಗಳು ಚೀಲಗಳಲ್ಲಿ ಹಾಗು ನೆಲದಲ್ಲಿ ಹರಿದಾಡುತ್ತಿರುವುದನ್ನು ಕಂಡ ಶಾಸಕರು ಮೇಲ್ವಿಚಾರಕಿಯ ಮೇಲೆ ಗರಂ ಆದರು.
ಶಿಶು ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳನ್ನು ನೆಲದಲ್ಲಿ ಮತ್ತು ಬೇಕಾಬಿಟ್ಟಿಗಾಗಿ ತಯಾರುಮಾಡುತ್ತಿರಾ ಇಂತಹ ಕಲುಷಿತ ಆಹಾರ ನೀಡಿದರೆ? ಇದನ್ನು ತಿಂದ ಮಕ್ಕಳ ಆರೋಗ್ಯ ಕೆಟ್ಟರೆ ಯಾರು ಜವಬ್ದಾರರು‌ ಎಂದು ಕಿಡಿಕಾರಿದರು.

ನಿಮ್ಮ ಮನೆ ಮಕ್ಕಳಿಗೂ ಹೀಗೆ ಕೊಡುತ್ತೀರೆಂದು ಪ್ರಶ್ನಿಸಿದರು. ಆಹಾರ ಪದಾರ್ಥಗಳನ್ನು ಸಂಸ್ಕರಿಸಲು ಬಳಸುವ ಯಂತ್ರಗಳೂ ಸಹ ಅವ್ಯವಸ್ಥೆಯಿಂದ ಕೂಡಿವೆ. ಇಲ್ಲಿನ ಸ್ಥಳವನ್ನಾದರೂ ಶುಚಿಯಾಗಿಟ್ಟುಕೊಳ್ಳಬೇಕಲ್ಲ ಯಾವುದೋ ಗೋಡನ್ ಇದ್ದಂತೆ ಇದೆಂದು ಸಿಬ್ಬಂದಿಯೊಬ್ಬರಿಗೆ ಕಾರವಾಗಿ ಪ್ರಶ್ನಿಸಿದರು.

ಪೌಷ್ಠಿಕ ಆಹಾರ ಪಾಕೀಟ್ ಮೇಲೆ ಯಾವ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಎಷ್ಟು ಪ್ರಮಾಣದ ಸೇರಿಸಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಕಳಪೆ ಪಾಕೀಟ್ಗಳನ್ನು ಸಿದ್ದಪಡಿಸುತ್ತಿದ್ದೀರಾ ಈ ಬಗ್ಗೆ ಕಮಿಷನರ್ ಹಾಗು ಸಂಬಂಧಪಟ್ಟ ಅಧಿಕಾರಿಗಳ ಬಗ್ಗೆ ಚರ್ಚಿಸುವಂತೆ ಕ್ರಮಕೈಗೊಳ್ಳುವಂತೆ ಹಾಗು ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಪಡಿಸುವಂತೆ ಒತ್ತಾಯಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಅಂಜನ್ಕುಮಾರ್, ಚಿದಾನಂದ್ ಮುಖಂಡರುಗಳಾದ ವಿ.ಬಿ.ಸುರೇಶ್, ಕಾಳಂಜಿಹಳ್ಳಿ ಸೋಮಣ್ಣ, ನಾಗಲಾಪುರ ಮಂಜಣ್ಣ ಮತ್ತು ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?