ಇಂದು ತಾಯಂದಿರ ದಿನ. ಇದರ ಅಂಗವಾಗಿ ಶಿಲ್ಪಧನಂಜಯ ಅವರು ಬರೆದಿರುವ ಅಮ್ಮಂದಿರ ಕುರಿತ ಆಪ್ತತೆಯ ಕವನ ನಮ್ಮ ಎಲ್ಲ ಓದುಗರಿಗಾಗಿ. ಅಮ್ಮನ ಜತೆಗಿನ ಒಂದೆರಡು ನೆನಪು, ಸೆಲ್ಫಿ ಇಲ್ಲಿಗೆ 9844817737 ಕಳುಹಿಸಿದರೆ ಪ್ರಕಟಿಸಲಾಗುವುದು.
ಅಮ್ಮ ವಿಶ್ವವಿದ್ಯಾಲಯ
ಅಮ್ಮನಿಂದ ಕಲಿತದ್ದು
ಬದುಕಿಗೆ …..
ಅಮ್ಮ ತನ್ನ ಬೆಚ್ಚಗಿನ
ಒಡಲಿನಲಿ ಮಗು ರಕ್ಷಿಸಿ
ನೊವಿನಲ್ಲೂ ಅಪ್ಪಿ ಮುತ್ತಿಡುವಳು…..
ಮಗು ಎಡವಿದಾಗ ಹೆಚ್ಚು ಮರುಗುವಳು
ಆತ್ಮ ವಿಶ್ವಾಸ ತುಂಬುವಳು
ಮುತ್ತಿಟ್ಟು ಮುದ್ದಾಡುವಳು…….
ಮಗುವಿನ ತೊದಲ ನುಡಿಗೆ ಸಾಕ್ಷಿಯಾಗುವಳು
ಅನ್ನ ತಿನ್ನಲು ಚಂದಮಾಮ ಕರಿಯುವಳು
ಅಂಬೆಗಾಲ ಇಡುವಾಗ ಖುಷಿ ಪಡುವಳು………
ನಡೆಯಲು ಕಲಿಸಿ ಎಲ್ಲವನ್ನು ಕಲಿಸಿ
ತಾನು ಕಲಿಯುವಳು
ಮೊದಲ ಅಕ್ಷರ ತಿದ್ದಿಸುವಳು……..
ಜೀವನ ಕಲಿಸುವಳು ತಪ್ಪನ್ನು ತಿದ್ದುವಳು
ತನ್ನ ಕನಸುಗಳ ರಕ್ಕೆ ಕಟ್ಟುವಳು ಮಗುವಿಗೆ
ಹಾರಲು ಬಿಡುವಳು ಅಮ್ಮ ……..