ಧನಂಜಯ ಕುಚ್ಚಂಗಿಪಾಳ್ಯ
ಅಮ್ಮ ಅಮ್ಮ …ನೋವು ಕಂಡಾಕ್ಷಣ… ಆ ನೋವು ದೇಹಕ್ಕೆ ತಗುಲಿದಾಕ್ಷಣ… ಏಕೆ ಹೀಗೆ? ಅದೇ ಅಮ್ಮ ನಿಗೂ ತಾನೂ ಜನ್ಮ ಕೊಟ್ಟ ಮಗುವಿಗೂ ಇರುವ ಅವಿನಾಭಾವ ಸಂಬಂಧ..
ಜೊತೆಗಿರಲಿ ,ಇಲ್ಲದಿರಲಿ ನೋವಿಗೆ ಮೊದಲ ಮದ್ದು ಅಮ್ಮ ಎಂಬ ಶಬ್ದ. ಮೊದಲ ಗುರೂವು ಅಮ್ಮ, ಕೊನೆಯ ನೋವಿಗೊ ಅಮ್ಮ.. ಜಗತ್ತಿನಲ್ಲಿ ಪರ್ಯಾಯ ಪದವಿಲ್ಲ.. ಇಂಥ ಅಮ್ಮನಿಗೂ ಒಂದೂ ದಿನ ಮೀಸಲೇ…! ಆಶ್ಚರ್ಯ.. ತೀರಿಸಲಾಗದ, ವರ್ಣಿಸಲಾಗದ,ಈ ಅಮ್ಮನಿಗೆ ಪ್ರತಿ ನಿಮಿಷವೂ ಪ್ರತಿ ಜೀವಿಗೂ ಅಮ್ಮಂದಿರ ದಿನವೇ..
ಸಂಬಂಧಗಳಲ್ಲಿ ಯಾವುದೇ ದಾಕ್ಷಿಣ್ಯಕ್ಕೊಳಗಾಗದೇ ಪ್ರತಿ ಕ್ಷಣ ಅಮ್ಮನ ಸೇವೆ ಮಾಡುವವರೇ ಅಮ್ಮನ ದಿನಾಚರಣೆಗೆ ಅರ್ಹರು.. ತೋರಿಕೆಯ ವ್ಯಕ್ತಿಯಲ್ಲ ಅಮ್ಮ.. ಒಂದು ದಿನಕ್ಕೆ ಮೀಸಲಲ್ಲ ಅಮ್ಮ..
ಅಮ್ಮ ಯಾವತ್ತೂ ನಿರಂತರ.. ಸಂಬಂಧಗಳ ಸುಳಿಯಲ್ಲಿ ಸಿಕ್ಕಿ ಕೊಂಡ ನಮಗೆಲ್ಲಾ ಅಮ್ಮನ ಋಣವನ್ನು ತೀರಿಸಬೇಕಾದ್ದು ನಮ್ಮಲ್ಲೆರ ಆದ್ಯ ಕರ್ತವ್ಯ… ಏಕೆಂದರೆ ಅಮ್ಮ ಇರುವವರೆಗೂ ನಾವೆಲ್ಲರೂ ಇರಬಲ್ಲೆವು..
ಆದರೆ ನಾವಿರುವವರೆಗೂ ಅಮ್ಮ ಇರುವುದಿಲ್ಲ… ಇದನ್ನು ನೆನಪಿನಲ್ಲಿ ಇಟ್ಟುಕೊಂಡು ಈ ಮಾಹನ್ ವ್ಯಕ್ತಿತ್ವಕ್ಕೆ ಸದಾ ಸೇವೆ ಸಲ್ಲಿಸುತ್ತಾ, ಪ್ರತಿ ದಿನವನ್ನು ಅಮ್ಮನ ದಿನವಾಗಿಸೋಣ….